ETV Bharat / state

ಪೂರ್ವಾಶ್ರಮದಲ್ಲಿ ಪೇಜಾವರ ಸ್ವಾಮೀಜಿ ಪ್ರಾಣ ಕಾಪಾಡಿದ್ದು ಒಬ್ಬ ದಲಿತ ಸ್ನೇಹಿತ.. - pajavara shri death news

ಅಂದು ಓಡಿ ಎಂಬ ಯುವಕ ತೋಟದಲ್ಲಿ ಇಲ್ಲದೇ ಹೋಗಿದ್ದರೆ ಪೇಜಾವರ ಶ್ರೀ ಎಂಬ ಮಹಾ ಸಂತ ಇರುತ್ತಿರಲಿಲ್ಲ. ಇದನ್ನು ಶ್ರೀಗಳು ಸ್ವತಃ ಈ ಹಿಂದೆ ಹೇಳಿಕೊಂಡಿದ್ದರು.

ಪೇಜಾವರ ಶ್ರೀ
ಪೇಜಾವರ ಶ್ರೀ
author img

By

Published : Dec 29, 2019, 6:55 PM IST

ಉಡುಪಿ: ಪೇಜಾವರ ಮಠದ ಶ್ರೀವಿಶ್ವೇಶ ತೀರ್ಥ ಸ್ವಾಮೀಜಿಯವರಿಗೂ ಹಾಗೂ ನೂತನ ತಾಲೂಕಿನ​ ಕಡಬದ ರಾಮಕುಂಜ ಎಂಬ ಪುಟ್ಟ ಗ್ರಾಮಕ್ಕೂ ಒಂದು ನಂಟು ಇದೆ ಎನ್ನಲಾಗಿದೆ.

ಇದೇ ಗ್ರಾಮದಲ್ಲಿ ಪೇಜಾವರ ಮಠದ ಶ್ರೀಗಳ ಪೂರ್ವಾಶ್ರಮವಿದೆ. ಬಾಲ್ಯದಲ್ಲಿ ಸ್ವಾಮೀಜಿಗಳ ಜೀವ ರಕ್ಷಿಸಿದ್ದು ಇದೇ ಗ್ರಾಮದ ಓಡಿ ಎಂಬ ದಲಿತ ಬಾಲಕ ಎಂದು ಸ್ವಾಮೀಜಿಗಳು ಒಮ್ಮೆ ಹೇಳಿಕೊಂಡಿದ್ದರು. ಸ್ವಾಮೀಜಿಗಳ ಪೂರ್ವಾಶ್ರಮದ ಹೆಸರು ವೆಂಕಟರಮಣ. 1931, ಏ. 27 ರಂದು ದಕ್ಷಿಣ ಕನ್ನಡ ಜಿಲ್ಲೆಯ ಈಗಿನ ಕಡಬ ತಾಲೂಕಿನ ಪುಟ್ಟಗ್ರಾಮ ರಾಮಕುಂಜದಲ್ಲಿ ಮಾಧ್ವ ಶಿವಳ್ಳಿ ಬ್ರಾಹ್ಮಣರಾದ ನಾರಾಯಣಾಚಾರ್ಯ ಮತ್ತು ಕಮಲಮ್ಮ ದಂಪತಿಯ 2ನೇ ಮಗನಾಗಿ ಇವರು ಜನಿಸಿದ್ದರು.

1938ರಲ್ಲಿ 8ನೇ ವಯಸ್ಸಿನಲ್ಲಿಯೇ ಪೇಜಾವರ ಮಠದ ಆಗಿನ ಸ್ವಾಮೀಜಿಯವರಾಗಿದ್ದ ಶ್ರೀ ವಿಶ್ವಮಾನ್ಯ ತೀರ್ಥರು, ಅತ್ಯಂತ ಸಾತ್ವಿಕ ಸ್ವಭಾವದ ಬಾಲಕ ವೆಂಕಟರಮಣನಿಗೆ ಹಂಪಿಯ ಚಕ್ರತೀರ್ಥದಲ್ಲಿ ಸನ್ಯಾಸತ್ವ ನೀಡಿ, ಶ್ರೀವಿಶ್ವೇಶ ತೀರ್ಥ ಎಂದು ಮರುನಾಮಕರಣ ಮಾಡಿದರು. ತಾವು ಮಠಾಧಿಪತಿಗಳಾದ ಬಳಿಕ ಸ್ವಾಮೀಜಿ ಅಸ್ಪೃಶ್ಯತೆ ನಿವಾರಣೆಗೆ ಹಲವು ಕ್ರಮಗಳನ್ನು ಕೈಗೊಂಡಿದ್ದರು. ದಲಿತ ಕೇರಿಗೆ ಭೇಟಿ ಮಾಡಿ, ಸಹ ಭೋಜನ, ವಾಸ್ತವ್ಯ ಮುಂತಾದ ಪ್ರಗತಿಪರ ಸಾಹಸದ ಮೂಲಕ ಅವರನ್ನು ಮುಖ್ಯವಾಹಿನಿಗೆ ಸೇರಿಸಲು ಪ್ರಯತ್ನಿಸಿದ್ದರು.

ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದಲ್ಲಿದ್ದ ಮಡೆಸ್ನಾನವನ್ನು, ಎಡೆಸ್ನಾನ ಎಂಬುದಾಗಿ ಬದಲಾಯಿಸಿ ಯಾರ ನಂಬಿಕೆಗೂ ಚ್ಯುತಿ ಬಾರದಂತೆ ನಡೆಸಿದ್ದು ಕೂಡ ಈ ಯತಿ ಶ್ರೇಷ್ಠರೇ.. ಸ್ವಾಮೀಜಿಗಳು ಐದು ವರ್ಷದವರಾಗಿದ್ದಾಗ ಒಂದು ದಿನ ಎರಟಾಡಿಯ ತಮ್ಮ ತೋಟದಲ್ಲಿ ಆಟವಾಡುತಿದ್ದಾಗ ಕೆರೆಗೆ ಬಿದ್ದು ಬಿಟ್ಟರು. ಇದನ್ನು ಅವರ ಅತ್ಮೀಯ ದಲಿತ ಮಿತ್ರ ಓಡಿ ಎಂಬ ಬಾಲಕ ನೋಡಿ ಕೂಡಲೇ ಮನೆಗೆ ಸುದ್ದಿ ಮುಟ್ಟಿಸಿದ್ದರು.

ಅಸ್ಪೃಶ್ಯತೆ ಎಂಬ ಸಾಮಾಜಿಕ ಪಿಡುಗು ಉತ್ತುಂಗದಲ್ಲಿದ್ದ ಕಾಲ ಅದು. ಹಾಗಾಗಿ ಬ್ರಾಹ್ಮಣ ಬಾಲಕ ವೆಂಕಟರಮಣನನ್ನು ದಲಿತ ಹುಡುಗ ಓಡಿ, ಮುಟ್ಟುವುದು ಅಕ್ಷಮ್ಯ ಅಪರಾಧ ಎಂದು ಪರಿಗಣಿತವಾಗಿದ್ದ ಕಾಲವಾದುದ್ದರಿಂದ ತೋಟದಲ್ಲಿಯೇ ಇದ್ದ ಓಡಿ ಹಾಗೂ ಅವರ ತಂದೆ ಚೋಮ, ಬಾಲಕನನ್ನು ನೀರಿನಿಂದ ಮೇಲೆತ್ತಲು ಹೆದರಿ ಸುದ್ದಿಯನ್ನು ಸ್ವಾಮೀಜಿಗಳ ತಂದೆ ನಾರಾಯಣ ಆಚಾರ್ಯವರಿಗೆ ಮುಟ್ಟಿಸಿದ್ದರು.

Intro:ರಾಮಕುಂಜ

ಪೇಜಾವರ ಮಠದ ಶ್ರೀವಿಶ್ವೇಶ ತೀರ್ಥ ಸ್ವಾಮೀಜಿಗೂ ನೂತನ ತಾಲೂಕು ಕಡಬದ ರಾಮಕುಂಜ ಎಂಬ ಪುಟ್ಟ ಗ್ರಾಮಕ್ಕೂ ಒಂದು ನಂಟು ಇದೆ. ಇವರ ಪೂರ್ವಾಶ್ರಮ ಇದ್ದದ್ದೂ ಇದೇ ಗ್ರಾಮದಲ್ಲಿ. ಬಾಲ್ಯದಲ್ಲಿ ಸ್ವಾಮೀಜಿಗಳ ಜೀವ ರಕ್ಷಿಸಿದ್ದು ಇದೇ ಗ್ರಾಮದ ಓಡಿ ಎಂಬ ದಲಿತ ಬಾಲಕ ಎಂದೂ ಸ್ವಾಮೀಜಿಗಳು ಹೇಳಿಕೊಂಡಿದ್ದರು.Body:ಸ್ವಾಮೀಜಿಗಳ (ಪೂರ್ವಾಶ್ರಮದ ಹೆಸರು ವೆಂಕಟರಮಣ) 1931, ಏ. 27ರಂದು, ದಕ್ಷಿಣ ಕನ್ನಡ ಜಿಲ್ಲೆಯ ಈಗಿನ ಕಡಬ ತಾಲೂಕಿನ ಪುಟ್ಟಗ್ರಾಮ ರಾಮಕುಂಜದಲ್ಲಿ ಮಾಧ್ವ ಶಿವಳ್ಳಿ ಬ್ರಾಹ್ಮಣರಾದ ನಾರಾಯಣಾಚಾರ್ಯ ಮತ್ತು ಕಮಲಮ್ಮ ದಂಪತಿಯ 2ನೇ ಮಗನಾಗಿ ಇವರು ಜನಿಸಿದ್ದರು. 1938ರಲ್ಲಿ ಅವರ 8ನೇ ವಯಸ್ಸಿನಲ್ಲಿಯೇ ಪೇಜಾವರ ಮಠದ ಆಗಿನ ಸ್ವಾಮೀಜಿಯವರಾಗಿದ್ದ ಶ್ರೀವಿಶ್ವಮಾನ್ಯ ತೀರ್ಥರು, ಅತ್ಯಂತ ಸಾತ್ವಿಕ ಸ್ವಭಾವದ ಬಾಲಕ ವೆಂಕಟರಮಣನಿಗೆ ಹಂಪಿಯ ಚಕ್ರತೀರ್ಥದಲ್ಲಿ ಸನ್ಯಾಸಾಶ್ರಮ ನೀಡಿ ಶ್ರೀವಿಶ್ವೇಶ ತೀರ್ಥ ಎಂದು ನಾಮಕರಣ ಮಾಡಿದರು.
ತಾವು ಮಠಾಧೀಪತಿಗಳಾದ ಬಳಿಕ ಸ್ವಾಮೀಜಿ ಅಸ್ಪೃಶ್ಯತೆ ನಿವಾರಣೆಗೆ ಹಲವು ಕ್ರಮಗಳನ್ನು ಕೈ ಗೊಂಡಿದ್ದರು. ದಲಿತ ಕೇರಿಗೆ ಭೇಟಿ ಮಾಡಿ ಸಹ ಭೋಜನ, ವಾಸ್ತವ್ಯ ಮುಂತಾದ ಪ್ರಗತಿಪರ ಸಾಹಸದ ಮೂಲಕ ಅವರನ್ನು ಮುಖ್ಯವಾಹಿನಿಗೆ ಸೇರಿಸಿದ್ದರು.

ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದಲ್ಲಿದ್ದ ಮಡೆಸ್ನಾನವನ್ನು, ಎಡೆಸ್ನಾನ ಎಂಬುದಾಗಿ ಬದಲಾಯಿಸಿ ಯಾರ ನಂಬಿಕೆಗೂ ಚ್ಯುತಿ ಬಾರದಂತೆ ನಡೆಸಿದ್ದು ಕೂಡ ಈ ಯತಿ ಶ್ರೇಷ್ಟರೇ

ಸ್ವಾಮೀಜಿಗಳು ಐದು ವರ್ಷದವರಾಗಿದ್ದಾಗ ಒಂದು ದಿನ ಎರಟಾಡಿಯ ತನ್ನ ತೋಟದಲ್ಲಿ ಆಟವಾಡುತಿದ್ದಾಗ ಕಣ್ತಪ್ಪಿನಿಂದ ಅಲ್ಲಿನ ಕೆರೆಗೆ ಬಿದ್ದು ಬಿಟ್ಟರು. ಇದನ್ನು ಅವರ ಅತ್ಮೀಯ ಮಿತ್ರ ದಲಿತ ಓಡಿ ಎಂಬ ಬಾಲಕ ನೋಡಿದ್ದು ಕೂಡಲೇ ಮನೆಗೆ ಸುದ್ದಿ ಮುಟ್ಟಿಸಿದ್ದರು. ಅಸ್ಪೃಶ್ಯತೆ ಎಂಬ ಸಾಮಾಜಿಕ ಪಿಡುಗು ಆಗ ಉತ್ತುಂಗದಲ್ಲಿದ್ದ ಕಾಲ. ಹಾಗಾಗಿ ಬ್ರಾಹ್ಮಣ ಬಾಲಕ ವೆಂಕಟರಮಣನನ್ನು ದಲಿತ ಹುಡುಗ ಓಡಿ ಮುಟ್ಟುವುದು ಅಕ್ಷಮ್ಯ ಅಪರಾಧ ಎಂದು ಪರಿಗಣಿತವಾಗಿದ್ದ ಕಾಲವಾದುದ್ದರಿಂದ ತೋಟದಲ್ಲಿಯೇ ಇದ್ದ ಓಡಿ ಹಾಗೂ ಅವರ ತಂದೆ ಚೋಮ ಬಾಲಕನನ್ನು ನೀರಿನಿಂದ ಮೇಲೆತ್ತಲು ಹೆದರಿ ಸುದ್ದಿಯನ್ನು ಸ್ವಾಮೀಜಿಗಳ ತಂದೆ ನಾರಾಯಣ ಆಚಾರ್ಯವರಿಗೆ ಮುಟ್ಟಿಸಿದ್ದರು.

ಅಂದು ಓಡಿ ಎಂಬ ಯುವಕ ತೋಟದಲ್ಲಿ ಇಲ್ಲದೇ ಹೋಗಿದ್ದಾರೆ ಪೇಜಾವರ ಶ್ರೀ ಎಂಬ ಮಹಾ ಸಂತ ಇರುತ್ತಿರಲಿಲ್ಲ. ಇದನ್ನು ಶ್ರೀಗಳು ಸ್ವತಃ ಪತ್ರಕರ್ತರಲ್ಲಿ ಈ ಹಿಂದೆ ಹೇಳಿಕೊಂಡಿದ್ದರು.Conclusion:ಒಳಚಿತ್ರದಲ್ಲಿ
(ಓಡಿ ಅವರ ಚಿತ್ರ ಮತ್ತು ಸ್ವಾಮೀಜಿಗಳು ಬಾಲ್ಯದಲ್ಲಿ ಕಲಿತ ಶಾಲೆ ಚಿತ್ರ.)

For All Latest Updates

ETV Bharat Logo

Copyright © 2025 Ushodaya Enterprises Pvt. Ltd., All Rights Reserved.