ETV Bharat / state

ಕುಂಟುತ್ತ ಸಾಗಿರುವ 13 ಕೋಟಿ ರೂ. ಕಾಮಗಾರಿ: ಜನರಿಗೆ ಶಾಪವಾದ ಒಳಚರಂಡಿಗಳು - ಕಾರ್ಕಳ

ಕಾರ್ಕಳದಲ್ಲಿ 13 ಕೋಟಿ ರೂ.ಗಳ ಒಳಚರಂಡಿ ‌ಕಾಮಗಾರಿ ಸಂಪೂರ್ಣ ‌ಅವೈಜ್ಞಾನಿಕತೆಯಿಂದ ಕೂಡಿದ ಪರಿಣಾಮ, ಒಳಚರಂಡಿಯ ನೀರು ನಗರದ‌ ಹತ್ತಕ್ಕೂ ‌ಅಧಿಕ ಕುಡಿವ ನೀರಿನ ಬಾವಿಗಳಿಗೆ ಸೇರಿ ಕಲುಷಿತಗೊಂಡಿದೆ ಎಂದು ಸ್ಥಳೀಯರು ಗಂಭೀರ ಆರೋಪ ಮಾಡಿದ್ದಾರೆ.

ಕಾಮಗಾರಿ
ಕಾಮಗಾರಿ
author img

By

Published : May 27, 2020, 7:38 PM IST

ಕಾರ್ಕಳ : ನಗರದಲ್ಲಿ 13 ಕೋಟಿ ರೂ.ಗಳ ಒಳಚರಂಡಿ ‌ಕಾಮಗಾರಿ ಸಂಪೂರ್ಣ ‌ಅವೈಜ್ಞಾನಿಕತೆಯಿಂದ ಕೂಡಿದೆ ಎಂಬ ಆರೋಪ ಕೇಳಿ ಬಂದಿದೆ. ಇನ್ನು ಒಳಚರಂಡಿಯ ನೀರು ನಗರದ‌ ಹತ್ತಕ್ಕೂ ‌ಅಧಿಕ ಕುಡಿಯುವ ನೀರಿನ ಬಾವಿಗಳಿಗೆ ಸೇರಿ ಕಲುಷಿತಗೊಂಡಿದೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಅತ್ಯಾಧುನಿಕ ತಂತ್ರಜ್ಞಾನ ಬಳಸದೇ ಸಾಂಪ್ರದಾಯಿಕ ಶೈಲಿಯಲ್ಲಿ ಕಾಮಗಾರಿ ನಡೆಯುತ್ತಿದೆ ಎಂಬುದು ಸ್ಥಳೀಯರ ಗಂಭೀರ ಅರೋಪ. ಅಲ್ಲದೇ ಹಳೆ ಚರಂಡಿ ಪೈಪ್​​​​ ಗಳನ್ನು ಬೇಕಾಬಿಟ್ಟಿ ಒಡೆದು ಹಾಕಲಾಗಿದೆ. ಮತ್ತೊಂದೆಡೆ ನೀರಿನ ಮಟ್ಟ ಕಾಪಾಡದೇ ಪೈಪ್​ಗಳನ್ನು ಅಳವಡಿಕೆ‌ ಮಾಡಿದ ಪರಿಣಾಮ ಒಳಚರಂಡಿಯ ನೀರು‌ ಎಲ್ಲೆಂದರಲ್ಲಿ ಹರಿದು ನಗರದ ಹತ್ತಕ್ಕೂ ಹೆಚ್ಚು ಬಾವಿಗಳಿಗೆ ಸೇರಿ, ನಗರದ ನಿವಾಸಿಗಳಿಗೆ ಕುಡಿಯಲು ನೀರಿಲ್ಲದ ಸ್ಥಿತಿ ನಿರ್ಮಾಣವಾಗಿದೆ. ಗುತ್ತಿಗೆದಾರರ ಅಸಡ್ಡೆ ಹಾಗೂ ಸರ್ಕಾರಿ ಅಧಿಕಾರಿಗಳ ನಿರ್ಲಕ್ಷ್ಯವೇ ಈ ಅವ್ಯವಸ್ಥೆಗೆ ಕಾರಣ ಎಂದು ನಗರದ ಜನತೆ ತಮ್ಮ ಆಕ್ರೋಶ ಹೊರಹಾಕಿದ್ದಾರೆ.

ಲಾಕ್‍ಡೌನ್ ನೆಪದಲ್ಲಿ ಎಲ್ಲವೂ ಕುಂಟುತ್ತಾ ಸಾಗಿದ್ದು, ಮಳೆಗಾಲ ಆರಂಭವಾದರೆ ನೀರು ಹರಿಯುವುದಕ್ಕೆ ಸರಿಯಾದ ಜಾಗವಿಲ್ಲದೇ ಪೇಟೆಯಲ್ಲಿರುವ ಮನೆಗಳಿಗೆ ನುಗ್ಗುವ ಆತಂಕ ಎದುರಾಗಿದೆ.

ಜನರಿಗೆ ಶಾಪವಾದ ಒಳಚರಂಡಿಗಳು

ಹೊಸದೇನಿಲ್ಲ1994ರ ಯೋಜನೆಯ ಕಾಪಿ ಪೇಸ್ಟ್!

1994ರಲ್ಲಿ 50 ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಲಾಗಿದ್ದ ಅದೇ ಒಳಚರಂಡಿ ಯೋಜನೆಯ ಮೇಲೆ ಹೊಸ ಯೋಜನೆಯನ್ನು ನಕಲು ಮಾಡಲಾಗಿದೆ. ಆಧುನಿಕ ತಂತ್ರಜ್ಞಾನದ ಬಳಕೆ, ಹೊಸ ಯೋಜನೆ ಇಲ್ಲಿ ಕಾಣಿಸುತ್ತಿಲ್ಲ. ಹೊಸ ಕಾಮಗಾರಿಯ ಸಿಮೆಂಟ್ ಕ್ಯೂರಿಂಗ್ ಸರಿಯಾಗಿ ಆಗುತ್ತಿಲ್ಲವೆಂಬುದು ನೇರವಾಗಿ ಕಂಡುಬರುತ್ತಿದೆ. ಹೀಗಾಗಿ ನಗರದ ಜನರಿಗೆ ಇಷ್ಟೆಲ್ಲಾ ದುರವಸ್ಥೆಯ ನಡುವೆಯೂ 13 ಕೋಟಿ ರೂ. ಮಹತ್ವಾಕಾಂಕ್ಷೆಯ ಯೋಜನೆ ಕಳಪೆ ಕಾಮಗಾರಿಯಾಗಿ ಮಾರ್ಪಟ್ಟು ನೀರಲ್ಲಿಟ್ಟ ಹೋಮದಂತಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.