ETV Bharat / state

ದೇಗುಲದಲ್ಲಿ ತೀರ್ಥ ನೀಡಲು ಬಂತು ಯಂತ್ರ.. ಉಡುಪಿ ಪ್ರೊಫೆಸರ್‌ವೊಬ್ಬರ ಆವಿಷ್ಕಾರ - Theertha coming from machine

ಲಾಕ್‌ಡೌನ್ ಹಿನ್ನೆಲೆಯಲ್ಲಿ ಕೆಲ ತಿಂಗಳ ಕಾಲ ದೇವಸ್ಥಾನಗಳು ಮುಚ್ಚಲ್ಪಟ್ಟಿದ್ದು, ಇದೀಗ ಸರ್ಕಾರದ ಮಾರ್ಗ ಸೂಚಿಗಳನ್ವಯ ಮತ್ತೆ ತೆರೆದಿವೆ. ಆದರೆ ನಿಯಮಾವಳಿಗಳ ಪ್ರಕಾರ ತೀರ್ಥ ವಿತರಣೆ ಮಾತ್ರ ದೇವಸ್ಥಾನಗಳಿಗೆ ಸವಾಲಾಗಿದೆ. ಇದಕ್ಕಾಗಿ ಕರಾವಳಿಯಲ್ಲಿ ಹೊಸ ಆವಿಷ್ಕಾರ ಮಾಡಲಾಗಿದೆ..

ಉಡುಪಿ ಉಪನ್ಯಾಸಕರೊಬ್ಬರ ಅವಿಸ್ಕಾರ
ಉಡುಪಿ ಉಪನ್ಯಾಸಕರೊಬ್ಬರ ಅವಿಸ್ಕಾರ
author img

By

Published : Jun 23, 2020, 8:03 PM IST

ಉಡುಪಿ : ಲಾಕ್​​ಡೌನ್ ಸಡಿಲಿಕೆ ಬಳಿಕ ದೇವಸ್ಥಾನಗಳ ಬಾಗಿಲು ತೆರೆದು ದರ್ಶನಕ್ಕೆ ಭಕ್ತರಿಗೆ ಅವಕಾಶ ಕಲ್ಪಿಸಲಾಗಿದೆ. ಆದರೆ, ತೀರ್ಥವನ್ನು ದೇಗುಲದಲ್ಲಿ ನೀಡಲಾಗುತ್ತಿಲ್ಲ. ಇದಕ್ಕಾಗಿಯೇ ಉಡುಪಿಯ ಪ್ರೊಫೆಸರ್‌ವೊಬ್ಬರು ಉಪಾಯ ಕಂಡುಕೊಂಡಿದ್ದಾರೆ.

ಉಡುಪಿ ಉಪನ್ಯಾಸಕರೊಬ್ಬರ ಅವಿಸ್ಕಾರ..

ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ನಿಟ್ಟೆ ಕಾಲೇಜಿನ ಶ್ರೀ ಮಹಾಗಣಪತಿ ದೇವಸ್ಥಾನಕ್ಕೆ ಬರುವ ಭಕ್ತರಿಗೆ ತೀರ್ಥ, ಪ್ರಸಾದದ ಕೊರತೆ ಇಲ್ಲ. ಯಾಕೆಂದರೆ, ಸ್ವಯಂಚಾಲಿತ ಯಂತ್ರದ ಮೂಲಕ ತೀರ್ಥ ವಿತರಿಸಲಾಗುತ್ತೆ. ದೇವರ ದರ್ಶನದ ಬಳಿಕ ಈ ಯಂತ್ರದ ಮುಂದೆ ಕೈಚಾಚಿದಾಗ ತೀರ್ಥ ಕೈ ಸೇರುತ್ತೆ.

ಅಂದಹಾಗೆ ಈ ಸ್ವಯಂಚಾಲಿತ ವಿನೂತನ ಯಂತ್ರವನ್ನು ಅಭಿವೃದ್ಧಿ ಪಡಿಸಿರೋದು ಕಾರ್ಕಳದ ನಿಟ್ಡೆ ಎಂಜಿನಿಯರಿಂಗ್ ಕಾಲೇಜಿನ ಉಪನ್ಯಾಸಕ ಸಂತೋಷ್. ವೃತ್ತಿಯಲ್ಲಿ ಉಪನ್ಯಾಸಕರಾದ ಇವರು ಸೀಮಿತ ಪರಿಕರಗಳನ್ನು ಉಪಯೋಗಿಸಿ ಈ ಯಂತ್ರ ತಯಾರಿಸಿದ್ದಾರೆ. 2,700 ರೂ.ಗಳಿಗೆ ಮಾರಾಟ ಮಾಡುವ ಉದ್ದೇಶ ಹೊಂದಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.