ETV Bharat / state

ಗುರುವಿನ ಸಾಧನೆಯೇ ಸ್ಫೂರ್ತಿ: ಸೈಂಟ್ ಮೇರಿಸ್​​ನಿಂದ ಪಡುಕೆರೆ ಕಡಲವರೆಗೆ ಈಜಿ ಸಾಧನೆ ಮಾಡಿದ ಶಿಷ್ಯರು! - ಈಜಿನಲ್ಲಿ ಸಾಧನೆ ಮಾಡಿದ ಈಜು ಪಟುಗಳು

ಗುರುವಿನ ಇಂಡಿಯಾ ಬುಕ್ ಆಫ್ ರೆಕಾರ್ಡ್ ಈಜಿನ ಸಾಧನೆ 41 ಶಿಷ್ಯ ವೃಂದಕ್ಕೆ ಮಾದರಿಯಾಗಿದ್ದು, ಅದೇ ಶಿಷ್ಯರು ಸೈಂಟ್ ಮೇರಿಸ್​​ನಿಂದ ಪಡುಕೆರೆ ಕಡಲ ತಟದವರೆಗೆ ಈಜಿ ಸಾಧನೆ ಮಾಡಿದ್ದಾರೆ.

ಸೈಂಟ್ ಮೇರಿಸ್​​ನಿಂದ ಪಡುಕೆರೆ ಕಡಲವರೆಗೆ ಈಜಿ ಸಾಧನೆ ಮಾಡಿದ ಶಿಷ್ಯರು
Udupi swimmers have make achievement in Swimming
author img

By

Published : Feb 17, 2021, 8:15 PM IST

ಉಡುಪಿ: ಸಾಧನೆ ಅನ್ನೋದು ಶಿಷ್ಯರಿಗೆ ಮಾದರಿಯಾಗೋದು ಬಹಳಷ್ಟು ಕಡಿಮೆ. ಆದರೆ ಗುರುವಿನ ಇಂಡಿಯಾ ಬುಕ್ ಆಫ್ ರೆಕಾರ್ಡ್ ಈಜಿನ ಸಾಧನೆ 41 ಶಿಷ್ಯ ವೃಂದಕ್ಕೆ ಮಾದರಿಯಾಗಿದ್ದು, ಅದೇ ಶಿಷ್ಯರು ಸೈಂಟ್ ಮೇರಿಸ್​​ನಿಂದ ಪಡುಕೆರೆ ಕಡಲ ತಟದವರೆಗೆ ಈಜಿ ಸಾಧನೆ ಮಾಡಿದ್ದಾರೆ.

ಉಡುಪಿಯಲ್ಲಿ ಸಮುದ್ರದಲ್ಲಿ ಈಜಿ ಸಾಧನೆ ಮಾಡಿದ ಶಿಷ್ಯರು

ಕಡಲಿನಲ್ಲಿ ಈಜುವ ತರಬೇತಿ ಪಡೆಯುತ್ತಿರುವ 41 ಜನರು ಏಕಕಾಲದಲ್ಲಿ ಸಮುದ್ರದಲ್ಲಿ ಈಜುವ ಮೂಲಕ ಜನಜಾಗೃತಿ ಮೂಡಿಸಿದ್ದಾರೆ. ಕಾಲಿಗೆ ಸರಪಳಿ ಕಟ್ಟಿ ಪದ್ಮಾಸನ ಭಂಗಿಯಲ್ಲಿ‌ 1.4 ಕಿ.ಮೀಟರ್ ಈಜಿ ಇಂಡಿಯಾ ಬುಕ್ ಆಫ್ ರೆಕಾರ್ಡ್​​​ನಲ್ಲಿ ದಾಖಲೆ ಮಾಡಿ ಸಾಹಸ ಮೆರೆದ ಈಜುಪಟು ಗಂಗಾಧರ್ ಅವರ ಗರಡಿಯಲ್ಲಿ ಪಳಗಿದ ಈ 41 ಜನರು ಏಕಕಾಲದಲ್ಲಿ 3.4 ಕಿ.ಮೀ. ಈಜಿ ಸಾಹಸ ಮೆರೆದಿದ್ದಾರೆ.

Udupi swimmers have make achievement in Swimming
ಸೈಂಟ್ ಮೇರಿಸ್​​ನಿಂದ ಪಡುಕೆರೆ ಕಡಲವರೆಗೆ ಈಜಿ ಸಾಧನೆ ಮಾಡಿದ ಶಿಷ್ಯರು

ಸಮುದ್ರದಲ್ಲಿ ಈಜೋದು ಅಂದರೆ ಬೆಂಕಿ ಜೊತೆ ಸರಸ ಆಡಿದ ಹಾಗೆ. ಸಮುದ್ರದ ಅಲೆಗಳ ಅಬ್ಬರ, ಜೆಲ್ಲಿ ಫಿಶ್​​ಗಳ ಏಟುಗಳನ್ನೆಲ್ಲ ಸಹಿಸಿಕೊಂಡು ಸೈಂಟ್ ಮೇರಿಸ್ ದ್ವೀಪದಿಂದ ಮಲ್ಪೆ ಪಡುಕೆರೆವರೆಗೆ 41 ಮಂದಿ ಹಿರಿಯರ ಜೊತೆಗೂಡಿ ಈಜಿ ಸಾಹಸ ಮಾಡುವ ಮೂಲಕ ಈಜು ಕೂಡ ಒಂದು ಅದ್ಭುತ ಕಲೆ ಎಂಬ ಜನಜಾಗೃತಿ‌ ಮೂಡಿಸಿದ್ದಾರೆ. ಸುಮಾರು 3.4 ಕಿ.ಮೀ. ದೂರವನ್ನು 2 ಗಂಟೆ 35 ನಿಮಿಷದಲ್ಲಿ ದಡ ಸೇರುವ ಮೂಲಕ ಫ್ಯೂಚರ್ ದಾಖಲೆ ವೀರರು ಎಂಬುದನ್ನು ಪ್ರೂವ್ ಮಾಡಿದ್ದಾರೆ ಈ ಪುಟ್ಟ ಮಕ್ಕಳು.

ಓದಿ: ಗಗನಕ್ಕೇರಿದ ಡೀಸೆಲ್ ಬೆಲೆ.. ಕಡಲಿಗಿಳಿಯದ ಬೋಟ್​ಗಳಿಂದ ಮತ್ಸ್ಯ ಬೇಟೆ ಸ್ಥಗಿತ..

ಗುರುಗಳಿಂದ ಸ್ಫೂರ್ತಿ ಪಡೆದ ಮಕ್ಕಳು ಕಡಲ‌ ಸಾಹಸ ಯಾತ್ರೆಯನ್ನು ಯಶಸ್ವಿಯಾಗಿ ಪೂರೈಸಿದ್ದಾರೆ. ಮಕ್ಕಳ ಸಾಧನೆ ಇನ್ನಷ್ಟು ಯಂಗ್ ಈಜುಪಟುಗಳಿಗೆ ಮಾದರಿಯಾಗಲಿ ಅನ್ನೋದೆ ನಮ್ಮ ಆಶಯವಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.