ಉಡುಪಿ: ಈ ಪುಟ್ಟ ಅಭಿಮಾನಿಗೆ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಂದ್ರೆ ಅಚ್ಚುಮೆಚ್ಚು. ಅಪ್ಪು ಹಾಡು ಟಿವಿಯಲ್ಲಿ ಬಂದ್ರೆ ಸಾಕು ಡ್ಯಾನ್ಸ್ ಮಾಡಲು ಆರಂಭಿಸುತ್ತಾನೆ.
![Udupi one year boy is a big fan of Puneeth](https://etvbharatimages.akamaized.net/etvbharat/prod-images/kn-udp-02-18-appi-fan-7202200-avbmp4_18032022054708_1803f_1647562628_408.jpg)
ನಗರದ ನಿವಾಸಿಗಳಾದ ಸಾಯಿರಾಜ್ ಮತ್ತು ಶಿಲ್ಪಾ ಎಂಬ ದಂಪತಿಯ ಪುತ್ರ ಶೌರ್ಯನಿಗೆ ಒಂದು ವರ್ಷ 11 ತಿಂಗಳು. ಬಾಲಕ ಚಿಕ್ಕವನಿದ್ದಾಗಿನಿಂದಲೂ ಅಪ್ಪು ಹಾಡುಗಳನ್ನು ನೋಡುತ್ತಾ, ಕೇಳುತ್ತಾ ಬೆಳೆದಿದ್ದಾನೆ. ಇನ್ನು ಟಿವಿಯಲ್ಲಿ ಪುನೀತ್ ಹಾಡು ಬಂದ ಕೂಡಲೇ ಎದ್ದು ನಿಂತು ಡ್ಯಾನ್ಸ್ ಮಾಡಲು ಶುರು ಮಾಡುತ್ತಾನೆ. ಅಷ್ಟೇ ಅಲ್ಲದೆ ಪುಟಾಣಿಯ ಪೋಷಕರು ಕೂಡ ಪುನೀತ್ ಅಭಿಮಾನಿಗಳಾಗಿದ್ದಾರೆ.
ನಿನ್ನೆ ದೇಶಾದ್ಯಂತ ಪುನೀತ್ ಅಭಿನಯದ ಕೊನೆಯ ಸಿನಿಮಾ ಜೇಮ್ಸ್ ಅದ್ಧೂರಿಯಾಗಿ ತೆರೆ ಕಂಡಿದ್ದು, ಅಭಿಮಾನಿಗಳು ಜಾತ್ರೆಯ ರೀತಿಯಲ್ಲಿ ಸಂಭ್ರಮಿಸಿದ್ದರು. ಇನ್ನು ಅಪ್ಪು ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ಸಾಯಿರಾಜ್- ಶಿಲ್ಪಾ ದಂಪತಿ ಮಗನಿಗೆ ಜೇಮ್ಸ್ ಟೀ ಶರ್ಟ್ ಹಾಕಿಸಿ ವಿಶೇಷವಾಗಿ ಫೋಟೋಶೂಟ್ ಮಾಡಿಸುವ ಮೂಲಕ ನೆಚ್ಚಿನ ನಟನಿಗೆ ಗೌರವ ಸಲ್ಲಿಸಿದ್ದಾರೆ.
![Udupi one year boy is a big fan of Puneeth](https://etvbharatimages.akamaized.net/etvbharat/prod-images/kn-udp-02-18-appi-fan-7202200-avbmp4_18032022054708_1803f_1647562628_627.jpg)
ಪುಟಾಣಿ ಶೌರ್ಯನ ಫೋಟೋಸ್ಗೆ ಸಾಮಾಜಿಕ ಜಾಲತಾಣದಲ್ಲಿ ಮೆಚ್ಚುಗೆ ವ್ಯಕ್ತವಾಗುತ್ತಿವೆ.
ಇದನ್ನೂ ಓದಿ: ಮೈಸೂರು : ಮಾರಿಹಬ್ಬದ ಹೆಸರಿನಲ್ಲಿ ಮೌಢ್ಯ ಆಚರಣೆಗಳು ಇನ್ನೂ ಜೀವಂತ!?