ETV Bharat / state

ಕೊರೊನಾದಿಂದ ಮೃತಪಟ್ಟವರ ಶವ ಸಂಸ್ಕಾರ ನೆರವೇರಿಸಿದ ಉಡುಪಿ ಜಿಲ್ಲಾ ನಾಗರಿಕ ಸಮಿತಿ - ಕೊರೊನಾದಿಂದ ಮೃತಪಟ್ಟವರ ಶವ ಸಂಸ್ಕಾರ ನೆರವೇರಿಸಿದ ಉಡುಪಿ ಜಿಲ್ಲಾ ನಾಗರಿಕ ಸಮಿತಿ

ಕೊರೊನಾದಿಂದ ಮೃತಪಟ್ಟ ಸೋಂಕಿತರ ಕುಟುಂಬದವರು ಅಂತ್ಯ ಸಂಸ್ಕಾರ ನಡೆಸಲು ಬರದೆ ಇದ್ದಾಗ ಉಡುಪಿ ಜಿಲ್ಲಾ ನಾಗರಿಕ ಸಮಿತಿಯು ಅಂತ್ಯ ಸಂಸ್ಕಾರ ನಡೆಸಿ ಮಾನವೀಯತೆ ಮೆರೆದಿದೆ.

ಕೊರೊನಾದಿಂದ ಮೃತಪಟ್ಟವರ ಶವ ಸಂಸ್ಕಾರ
ಕೊರೊನಾದಿಂದ ಮೃತಪಟ್ಟವರ ಶವ ಸಂಸ್ಕಾರ
author img

By

Published : May 23, 2021, 8:46 AM IST

ಉಡುಪಿ: ಕೊರೊನಾ ಕಾಲದಲ್ಲಿ ದಿನವಿಡೀ ಜನರ ಸೇವೆಗೆ ಮುಂದಾಗಿರುವ ಉಡುಪಿ ಜಿಲ್ಲಾ ನಾಗರಿಕ ಸಮಿತಿ ನಿನ್ನೆ ಮತ್ತೆರಡು ಕೊರೊನಾ ಸೋಂಕಿತರ ಮೃತದೇಹಗಳ ಅಂತ್ಯ ಸಂಸ್ಕಾರ ಮಾಡಿ ಮಾನವೀಯತೆ ಮೆರೆದಿದೆ.

ಕೊರೊನಾದಿಂದ ಮೃತಪಟ್ಟವರ ಶವ ಸಂಸ್ಕಾರ

ಕೆಲವು ದಿನಗಳ ಹಿಂದೆ ಉಡುಪಿ ಮೆಸ್ಕಾಂ ಕಚೇರಿ ಬಳಿಯ ಬಾಡಿಗೆ ಮನೆಯಲ್ಲಿ ಒಂಟಿಯಾಗಿ ವಾಸಿಸುತ್ತಿದ್ದ ಚಿನ್ನಾಭರಣ ಕೆಲಸಗಾರ ಮನೆಯಲ್ಲಿ ಮೃತಪಟ್ಟಿದ್ದರು. ಹಾಗೂ ನಿಟ್ಟೂರು ಬಾಡಿಗೆ ಮನೆಯಲ್ಲಿ ವಾಸವಾಗಿದ್ದ ವಲಸೆ ಕಾರ್ಮಿಕ ಅಸೌಖ್ಯದ ಕಾರಣದಿಂದ ಮನೆಯಲ್ಲಿ ಮೃತಪಟ್ಟಿದ್ದರು. ಎರಡು ಶವಗಳನ್ನು ನಾಗರಿಕ ಸಮಿತಿಯ ನಿತ್ಯಾನಂದ ಒಳಕಾಡು ಜಿಲ್ಲಾಸ್ಪತ್ರೆಗೆ ಸಾಗಿಸಿ, ಶವಗಳ ಗಂಟಲು ದ್ರವ ಪರೀಕ್ಷೆಗೆ ಒಳಪಡಿಸಿದಾಗ, ಮೃತರಿಗೆ ಕೋವಿಡ್ ಸೋಂಕು ಇರುವುದು ದೃಢಪಟ್ಟಿತ್ತು. ಎರಡು ಶವಗಳನ್ನು ಸಂಬಂಧಿಕರ ಬರುವಿಕೆಗಾಗಿ ಜಿಲ್ಲಾಸ್ಪತ್ರೆಯ ಶವಗಾರದಲ್ಲಿ ರಕ್ಷಿಸಿ ಇಡಲಾಗಿತ್ತು. ಮೃತರ ಕುಟುಂಬದವರು ಅಂತ್ಯ ಸಂಸ್ಕಾರ ನಡೆಸಲು ಬರದೆ ಇದ್ದಾಗ ನಾಗರಿಕ ಸಮಿತಿಯು ಅಂತ್ಯ ಸಂಸ್ಕಾರ ನಡೆಸಿ ಮಾನವೀಯತೆ ಮೆರೆದಿತ್ತು.

ಕೋವಿಡ್ ವ್ಯಾಧಿಯಿಂದ ಮೃತಪಟ್ಟ ನಾಲ್ಕು ಶವಗಳ ಅಂತ್ಯ ಸಂಸ್ಕಾರವನ್ನು ಮಾನವೀಯ ನೆಲೆಯಲ್ಲಿ ನಡೆಸಿದ್ದೇವೆ. ಮೃತ ನಾಲ್ವರಿಗೆ ಸೋಂಕಿನ ಲಕ್ಷಣಗಳಿದ್ದರೂ, ಯಾವುದೇ ಚಿಕಿತ್ಸೆಗೆ ಒಳಗಾಗದೆ ಮನೆಯಲ್ಲೇ ದುರಂತ ಸಾವು ಕಂಡಿದ್ದರು. ಇಂತಹ ಸಂದರ್ಭದಲ್ಲಿ ಕೊರೊನಾ ಸೋಂಕಿನ ಯಾವುದೇ ಲಕ್ಷಣಗಳು ಕಂಡು ಬಂದರೂ ಸಮೀಪದ ಕೋವಿಡ್ ಆರೋಗ್ಯ ಕೇಂದ್ರಗಳಲ್ಲಿ ಪರೀಕ್ಷೆಗೆ ಒಳಗಾಬೇಕು. ಆರೋಗ್ಯ ಇಲಾಖೆ, ಜಿಲ್ಲಾಡಳಿತದ ಆದೇಶಗಳನ್ನು ತಪ್ಪದೇ ಪಾಲಿಸಬೇಕೆಂದು ನಾಗರಿಕ ಸಮಿತಿಯ ಸಂಚಾಲಕ ನಿತ್ಯಾನಂದ ಒಳಕಾಡು ಸಾರ್ವಜನಿಕರಲ್ಲಿ ವಿನಂತಿಸಿಕೊಂಡಿದ್ದಾರೆ.

For All Latest Updates

ETV Bharat Logo

Copyright © 2025 Ushodaya Enterprises Pvt. Ltd., All Rights Reserved.