ಉಡುಪಿ: ಜನಪ್ರಿಯ ಕೌನ್ ಬನೇಗಾ ಕರೋಡ್‌ಪತಿ ಕಾರ್ಯಕ್ರಮದಲ್ಲಿ (ಕೆಬಿಸಿ) ಭಾಗವಹಿಸುವ ಅವಕಾಶ ಸಿಕ್ಕಿದ್ರೆ ಯಾರು ಬೇಡ ಅಂತಾರೆ ಹೇಳಿ?, ಹೌದು. ಅಂತಹದೊಂದು ಅವಕಾಶವನ್ನು ಜಿಲ್ಲೆಯ ಬಾಲಕನೋರ್ವ ಪಡೆದುಕೊಂಡಿದ್ದಾನೆ.
ಉಡುಪಿಯ ಅನಾಮಯ ಯೋಗೇಶ್ ದಿವಾಕರ್ ಈ ಅವಕಾಶ ಪಡೆದ ಅದೃಷ್ಟವಂತ ಬಾಲಕ. ಈತ ಇಲ್ಲಿನ ವಿದ್ಯೋದಯ ಪಬ್ಲಿಕ್ ಸ್ಕೂಲ್‌ನಲ್ಲಿ ಏಳನೇ ತರಗತಿ ಓದುತ್ತಿದ್ದಾನೆ. ವಿದ್ಯಾರ್ಥಿಗಳಿಗೆಂದೇ ಈ ತಿಂಗಳ 14ರಿಂದ 17 ರವರೆಗೆ ಕೆಬಿಸಿಯ ವಿಶೇಷ ಸಂಚಿಕೆ ಬರಲಿದ್ದು, ಅದರಲ್ಲಿ ಭಾಗವಹಿಸುವುದಕ್ಕಾಗಿ ದೇಶಾದ್ಯಂತ ಸ್ಪರ್ಧೆ ಏರ್ಪಡಿಸಲಾಗಿತ್ತು.
ಓದಿ: ಬೆಂಗಳೂರಿನಲ್ಲಿ ರಜನಿ ಓದಿದ ಶಾಲೆ ಮುಂದೆ 'ತಲೈವಾ' ಬರ್ತ್ ಡೇ ಆಚರಣೆ
ಲಕ್ಷಕ್ಕೂ ಅಧಿಕ ವಿದ್ಯಾರ್ಥಿಗಳು ಈ ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದರು. ಈ ಪೈಕಿ ಕೇವಲ ಎಂಟು ಮಕ್ಕಳು ಮಾತ್ರ ಆಯ್ಕೆಯಾಗಿದ್ದು, ದಿವಾಕರ್‌ಗೆ ಸ್ಥಾನ ಸಿಕ್ಕಿದೆ. ಈ ಕಾರ್ಯಕ್ರಮ ಸೋನಿ ಟಿವಿಯಲ್ಲಿ ಡಿ.14ರಿಂದ 17ರವರೆಗೆ ಪ್ರತಿದಿನ ರಾತ್ರಿ 9 ಗಂಟೆಗೆ ಪ್ರಸಾರಗೊಳ್ಳಲಿದೆ.