ETV Bharat / state

ಮರೆತು ಬಿಟ್ಟು ಹೋಗಿದ್ದ ಹಣ ವಾಪಸ್ ನೀಡಿ ಪ್ರಾಮಾಣಿಕತೆ ಮೆರೆದ ಆಟೋ ಚಾಲಕ - Auto driver honestly

ಉಡುಪಿಯಲ್ಲಿ ಮಹಿಳೆಯೊಬ್ಬರು ಆಟೋದಲ್ಲಿ ಮರೆತು ಬಿಟ್ಟು ಹೋಗಿದ್ದ ಹಣ ಹಾಗೂ ದಾಖಲೆ ಪತ್ರಗಳನ್ನು ಚಾಲಕ ಹಿಂದಿರುಗಿಸಿ ಪ್ರಾಮಾಣಿಕತೆ ಮೆರೆದಿದ್ದಾರೆ.

Auto driver
Auto driver
author img

By

Published : Oct 14, 2020, 5:17 PM IST

ಉಡುಪಿ: ಬಾಡಿಗೆ ಆಟೋದಲ್ಲಿ ಮಹಿಳೆಯೊಬ್ಬರು ಮರೆತು ಹೋಗಿದ್ದ 50 ಸಾವಿರ ರೂ. ಹಾಗೂ ದಾಖಲೆ ಪತ್ರಗಳನ್ನು ಚಾಲಕ ಹಿಂದಿರುಗಿಸಿ ಪ್ರಾಮಾಣಿಕತೆ ಮೆರೆದ ಘಟನೆ ಉಡುಪಿ ಜಿಲ್ಲೆಯ ಕಟಪಾಡಿಯಲ್ಲಿ ನಡೆದಿದೆ.

ಅಂಬಲಪಾಡಿಯ ಜಯ ಶೆಟ್ಟಿ ಪ್ರಾಮಾಣಿಕತೆ ಮೆರೆದ ಆಟೋ ಚಾಲಕ. ಅಂಬಲಪಾಡಿಯಿಂದ ಜಯಶೆಟ್ಟಿಯವರು ಮಹಿಳೆಯೊಬ್ಬರನ್ನು ತಮ್ಮ ಬಾಡಿಗೆ ಆಟೋದಲ್ಲಿ ಕಟಪಾಡಿಗೆ ಬಿಟ್ಟು ಮತ್ತೆ ಅಂಬಲಪಾಡಿ ರಿಕ್ಷಾ ನಿಲ್ದಾಣಕ್ಕೆ ಹಿಂದಿರುಗಿದ್ದರು. ಈ ವೇಳೆ ಆಟೋದಲ್ಲಿ ಪ್ಲಾಸ್ಟಿಕ್ ಕವರ್‌ ಸಿಕ್ಕಿದ್ದು, ಅದರಲ್ಲಿದ್ದ ಹಣದ ಕಟ್ಟು ಹಾಗೂ ದಾಖಲೆ ಪತ್ರಗಳನ್ನು ಗಮನಿಸಿದ ಜಯಶೆಟ್ಟಿ, ಮತ್ತೆ ಕಟಪಾಡಿಗೆ ಬಂದು ಮಹಿಳೆಗೆ ಹಣ ಹಾಗೂ ದಾಖಲೆ ಪತ್ರ ಹಿಂದಿರುಗಿಸಿದ್ದಾರೆ.

ಒಟ್ಟು 50 ಸಾವಿರ ರೂ. ಇತ್ತು ಎಂದು ಮಹಿಳೆ ತಿಳಿಸಿದ್ದು, ಹಣ ಹಿಂದಿರುಗಿಸಿ ಪ್ರಾಮಾಣಿಕತೆ ಮೆರೆದ ಜಯಶೆಟ್ಟಿ ಅವರಿಗೆ ಕೃತಜ್ಞತೆ ತಿಳಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.