ಉಡುಪಿ: ಜಿಲ್ಲೆಯಲ್ಲಿ ಲಾಕ್ಡೌನ್ ಸಂಕಷ್ಟಕ್ಕೆ ಸಿಲುಕಿ ಕಳೆದ ಎರಡು ಮೂರು ತಿಂಗಳಿನಿಂದ ಕೆಲಸವಿಲ್ಲದೇ ಬೇಸತ್ತಿದ್ದ ವ್ಯಕ್ತಿಯೊಬ್ಬ ಆತ್ಯಹತ್ಯೆಗೆ ಶರಣಾಗಿದ್ದಾನೆ.
ಕನ್ನರಪಾಡಿ ನಿವಾಸಿ ರಘುನಾಥ್ ಸೇರಿಗಾರ್ ಆತ್ಮಹತ್ಯೆಗೆ ಶರಣಾಗಿರುವ ವ್ಯಕ್ತಿ. ಟೈಲರ್ ವೃತ್ತಿ ಮಾಡುತ್ತಿದ್ದ ರಘುನಾಥ್, ಲಾಕ್ಡೌನ್ ಜಾರಿಯಾದ ನಂತರ ಕಳೆದ ಎರಡು ಮೂರು ತಿಂಗಳಿನಿಂದ ಕೆಲಸವಿಲ್ಲದೆ ಮನೆಯಲ್ಲೇ ಇದ್ದರು. ಆರ್ಥಿಕವಾಗಿ ಸಾಕಷ್ಟು ಜರ್ಜರಿತರಾಗಿದ್ದ ಇವರು ಮನೆಯಿಂದ ಏಕಾಏಕಿ ಕಾಣೆಯಾಗಿದ್ದರು.
ಇದೀಗ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಸ್ಥಿತಿಯಲ್ಲಿ ರಘುನಾಥ್ ಶವ ಪತ್ತೆಯಾಗಿದ್ದು, ಇಬ್ಬರು ಹೆಣ್ಣು ಮಕ್ಕಳು ಹಾಗೂ ಪತ್ನಿಯನ್ನು ಆಗಲಿದ್ದಾರೆ.
ಆತ್ಮಹತ್ಯೆಗೆ ಕಾರಣವೇನು?: ಟೈಲರ್ ವೃತ್ತಿಯನ್ನೇ ನಂಬಿ ತಮ್ಮ ಸಂಸಾರವನ್ನು ನಡೆಸುತ್ತಿದ್ದ ಇವರಿಗೆ ದಿಢೀರ್ ಆಗಿ ಜಾರಿಯಾದ ಲಾಕ್ಡೌನ್ ತತ್ತರಿಸುವಂತೆ ಮಾಡಿತ್ತು. ಕಳೆದ ಮೂರು ತಿಂಗಳ ಹಿಂದೆ ವಾರಪೂರ್ತಿ ಕೆಲಸ ಮಾಡುತ್ತಿದ್ದ ಇವರು, ಲಾಕ್ಡೌನ್ನಿಂದಾಗಿ ಕೇವಲ ಮೂರು ದಿನದ ಕೆಲಸ ಸಿಗುತ್ತಿತ್ತು. ಇದರಿಂದ ರಘುನಾಥ್ ಖಿನ್ನತೆಗೆ ಜಾರಿದ್ದರು. ನಿನ್ನೆ ಮನೆ ಸಮೀಪದ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಸ್ಥಳೀಯರು ತಿಳಿಸಿದ್ದಾರೆ.