ಉಡುಪಿ: ಅಣ್ಣಾ ಹಾಗೂ ತಮ್ಮ ಸಾವಿನಲ್ಲೂ ಒಂದಾಗಿದ್ದಾರೆ. ಹೌದು, ಸಹೋದರರಿಬ್ಬರೂ ಒಂದೇ ದಿನ ಸಾವನ್ನಪ್ಪಿದ ಘಟನೆ ಗುರುವಾರ ಬ್ರಹ್ಮಾವರ ತಾಲೂಕಿನ ದೇವಾಡಿಗರಬೆಟ್ಟು ಎಂಬಲ್ಲಿ ಸಂಭವಿಸಿದೆ. ದೇವಾಡಿಗರಬೆಟ್ಟು ರಘುನಾಥ ದೇವಾಡಿಗ ಹಾಗೂ ಸುಮತಿ ದೇವಾಡಿಗ ಅವರ ಪುತ್ರರಾದ ರಾಘವೇಂದ್ರ ಯಾನೇ ಮೋನ(40) ಗಣೇಶ್ ದೇವಾಡಿಗ (51) ಒಂದೇ ದಿನ ಮೃಪಟ್ಟಿರುವ ಘಟನೆ ಮನಕಲಕುವಂತೆ ಮಾಡಿದೆ.
ಇಬ್ಬರು ಸಹೋದರರು ಒಂದೇ ಮನೆಯಲ್ಲಿ ವಾಸ: ಗುರುವಾರ ಬೆಳಗ್ಗೆ ರಾಘವೇಂದ್ರ ಯಾನೆ ಮೋನ ಇವರು ಕೆಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದರು, ಚಿಕಿತ್ಸೆಗೆ ಸ್ಪಂದಿಸದೇ ಸಾವಿಗೀಡಾಗಿದ್ದಾರೆ. ಸಹೋದರನ ಸಾವಿನ ಸುದ್ದಿ ತಿಳಿದು ಅದೇ ದಿನ ಮಧ್ಯಾಹ್ನ ಗಣೇಶ್ ದೇವಾಡಿಗ ಕೂಡ ಮೃತಮಟ್ಟಿದ್ದಾರೆ. ಈ ಇಬ್ಬರೂ ಸಹೋದರರು ಒಂದೇ ಮನೆಯಲ್ಲಿ ವಾಸಿಸುತ್ತಿದ್ದರು.
ಸಂಗೀತದಲ್ಲಿ ಪ್ರಸಿದ್ಧಿ ಪಡೆದಿದ್ದ ಸಹೋದರು: ಇಬ್ಬರೂ ವಾದ್ಯ ಸಂಗೀತದಲ್ಲಿ ನಾಡಿನಾದ್ಯಂತ ಕಾರ್ಯಕ್ರಮಗಳನ್ನು ನೀಡುತ್ತಿದ್ದರು. ತಮ್ಮ ಸಂಗೀತದ ಕಲೆಯ ಮೂಲಕ ಪ್ರಸಿದ್ಧಿ ಪಡೆದಿದ್ದರು. ವಿಧಿಯಾಟದ ಎದುರು ಒಂದೇ ದಿನ ಸಂಗೀತದ ಸ್ವರ ನಿಲ್ಲಿಸಿದ್ದಾರೆ. ಸಹೋದರರಿಬ್ಬರ ಸಾವಿಗೆ ಇಡೀ ಗ್ರಾಮವೇ ಮಮ್ಮಲ ಮರುಕ ಪಡುತ್ತಿದೆ. ಅದರಲ್ಲೂ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಜವರಾಯ ಅಟ್ಟಹಾಸಕ್ಕೆ ಸಹೋದರರಿಬ್ಬರನ್ನು ಒಂದೇ ದಿನ ಬಲಿಯಾಗಿದ್ದಾರೆ. ಮೃತರ ಕುಟುಂಬಕ್ಕೆ ತೀವ್ರ ಆಘಾತ ಉಂಟಾಗಿದೆ.
ರಸ್ತೆಯಲ್ಲೇ ಶವ ಎಸೆದು ಹೋದ ಹಣ್ಣಿನ ವ್ಯಾಪಾರಿಗಳು: ಉಡುಪಿ ಜಿಲ್ಲೆಯಲ್ಲಿ ಅಮಾನವೀಯ ಘಟನೆಯೊಂದು ನಡೆದಿದೆ. ಮನುಷ್ಯತ್ವಕ್ಕೆ ಬೆಲೆಯೇ ಇಲ್ಲವೇ ಎನ್ನುವ ಪ್ರಶ್ನೆ ಹುಟ್ಟುಹಾಕಿದೆ. ಹಣ್ಣಿನ ವ್ಯಾಪಾರಿಗಳು ಮಾನವೀಯತೆಯನ್ನೇ ಮರೆತಿದ್ದಾರೆ. ಹಣ್ಣಿನ ವ್ಯಾಪಾರಿಗಳೊಂದಿಗೆ ಇದ್ದ ಸಂಗಡಿಗ ಮಧ್ಯವಯಸ್ಸಿನ ಯುವಕ ಕೊನೆಯುಸಿರೆಳೆದ್ದಾನೆ. ಶವವನ್ನು ರಸ್ತೆ ಮಧ್ಯೆಯೇ ಕಸದಂತೆ ಎಸೆದು ಹೋಗಿರುವ ಘಟನೆ ಬೆಳಕಿಗೆ ಬಂದಿದೆ. ತಮ್ಮ ಸಂಗಡಿಗನ ಮೃತದೇಹವನ್ನು ವ್ಯಾಪಾರಿಗಳು ಎಸೆದು ಹೋಗುತ್ತಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ದೃಶ್ಯ ಸಿಸಿಟಿವಿಯಲ್ಲಿ ದೃಶ್ಯ ಸೆರೆ: ಉಡುಪಿಯ ಮಲ್ಪೆ ಪೊಲೀಸ್ ಠಾಣಾ ವ್ಯಾಪ್ತಿಯ ಕೆಮ್ಮಣ್ಣು ಗ್ರಾಮದ ರಸ್ತೆಯೊಂದರಲ್ಲಿ ಈ ಅಮಾನವೀಯ ಘಟನೆ ಜರುಗಿದ್ದು, ಮನುಷ್ಯತ್ವವನ್ನೇ ಮರೆತಿರುವುದು ನಾಚಿಕೆಗೇಡಿನ ಸಂಗತಿಯಾಗಿದೆ. ಅಂದಾಜು 40 ವರ್ಷದ ವ್ಯಕ್ತಿ ಅನಾರೋಗ್ಯದಿಂದ ಮೃತಪಟ್ಟಿದ್ದಾನೆ. ಆಟೋದಲ್ಲಿ ಬಂದ ಸಂಗಡಿಗರು, ಮೃತ ವ್ಯಕ್ತಿಯ ಲಗೇಜ್ ಸಹಿತ, ಶವವನ್ನು ವಾಹನದಿಂದ ರಸ್ತೆ ಬದಿಯಲ್ಲಿ ಎಸೆದು ಯೂಟರ್ನ್ ಮಾಡಿಕೊಂಡು ಹೋಗಿರುವ ದೃಶ್ಯ ಕ್ಯಾಮರಾದಲ್ಲಿ ನಡೆದಿದೆ. ಹೊರ ಜಿಲ್ಲೆಯಿಂದ ಉಡುಪಿಯಲ್ಲಿ ಕಲ್ಲಂಗಡಿ ಮಾರಾಟ ಮಾಡಲು ಬಂದ ವ್ಯಾಪಾರಿಗಳಿಂದ ಈ ಅಮಾನವೀಯ ಕೃತ್ಯ ನಡೆದಿದೆ.
ರಸ್ತೆ ಬದಿ ಮೃತದೇಹವನ್ನು ಕಂಡ ಸಾಮಾಜಿಕ ಕಾರ್ಯಕರ್ತ ಈಶ್ವರ ಮಲ್ಪೆ ಅವರು ಮೃತ ವ್ಯಕ್ತಿಯ ಶವವನ್ನು ಶವಾಗಾರಕ್ಕೆ ಸಾಗಿಸಿದ್ದಾರೆ. ಘಟನೆ ಸಂಬಂಧ ಮಲ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸಾವಿಗೆ ಕಾರಣ ಏನು ಎನ್ನುವುದನ್ನು ತನಿಖೆಯಿಂದ ತಿಳಿದರು ಬರಬೇಕಿದೆ.
ಇದನ್ನೂ ಓದಿ: ಬೆಂಕಿ ಅವಘಡ: ಅಪಾರ ಪ್ರಮಾಣದ ಆಸ್ತಿ ಹಾನಿ, ನಾಲ್ಕು ಎಮ್ಮೆಗಳ ಸ್ಥಿತಿ ಗಂಭೀರ