ಉಡುಪಿ: ಹಪ್ತಾ ನೀಡುವಂತೆ ಉದ್ಯಮಿಗಳಿಗೆ ಬೆದರಿಕೆ ಕರೆ ಮಾಡುತ್ತಿದ್ದ ಭೂಗತ ಪಾತಕಿ ರವಿ ಪೂಜಾರಿಯ ಸಹಚರರು ಎನ್ನಲಾದ 5 ಮಂದಿಯನ್ನು ಬಂಧಿಸಲಾಗಿದೆ.
ಉದ್ಯಮಿಗಳು, ಬಿಲ್ಡರ್ಗಳು, ಪ್ರತಿಷ್ಠಿತ ವ್ಯಕ್ತಿಗಳಿಗೆ ಹಪ್ತಾ ಹಣ ನೀಡುವಂತೆ ಬೆದರಿಸಿ ಹಣ ನೀಡದೇ ಇದ್ದಲ್ಲಿ ಕೊಲೆ ಮಾಡುವುದಾಗಿ ಬೆದರಿಸುತ್ತಿದ್ದ ಆರೋಪಿಗಳು ಈಗ ಅಂದರ್ ಆಗಿದ್ದಾರೆ. ಶಶಿ ಪೂಜಾರಿ, ಧನರಾಜ್ ಪೂಜಾರಿ, ರವಿಚಂದ್ರ ಪೂಜಾರಿ, ಧನರಾಜ್ ಸಾಲ್ಯಾನ್, ಉಲ್ಲಾಸ್ ಶೆಣೈ ಬಂಧಿತರು. ಇವರು ಉಡುಪಿ, ಮಣಿಪಾಲ, ಮಲ್ಪೆ, ಮಂಗಳೂರು ಸಹಿತ ಹಲವು ಕಡೆ ಕ್ರಮಿನಲ್ ಕೃತ್ಯದಲ್ಲಿ ಭಾಗಿಯಾಗಿದ್ದರು ಎಂದು ಪೋಲಿಸ್ ತನಿಖೆಯಲ್ಲಿ ತಿಳಿದುಬಂದಿದೆ.
ಸದ್ಯ ಹಿಂಡಲಗಾ ಜೈಲಿನಲ್ಲಿರುವ ಭೂಗತ ದೊರೆ ಬನ್ನಂಜೆ ರಾಜಾ ನಿರ್ದೇಶನದಂತೆ ಹಪ್ತಾ ವಸೂಲಿ ಮಾಡುತ್ತಿದ್ದ ತಂಡವನ್ನು ಉಡುಪಿಯ ಡಿಸಿಐಬಿ ಪೊಲೀಸರು ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ.