ಉಡುಪಿ: ಜಿಲ್ಲಾ ಕೇಂದ್ರದಿಂದ 17 ಕಿಲೋಮೀಟರ್ ದೂರದಲ್ಲಿರುವ ಬಾರ್ಕೂರಿನಲ್ಲಿ ವೆಂಕಟರಮಣ ಭಂಡಾರ್ಕರ್ ಎಂಬುವರು ತಮ್ಮ ಮನೆಯನ್ನು ಮಿನಿ ಮ್ಯೂಸಿಯಂನಂತೆ ಪರಿವರ್ತಿಸಿದ್ದು, ಸುಮಾರು 2,500ಕ್ಕೂ ಅಧಿಕ ಹಳೆಯ ಕಾಲದ ವಸ್ತುಗಳನ್ನು ಸಂಗ್ರಹಿಸಿದ್ದಾರೆ.
ಹಳೆ ಕಾಲದ ತಾಮ್ರದ ಪಾತ್ರೆಗಳು, ಗಡಿಯಾರ, ರಾಜರು ಬಳಸುತ್ತಿದ್ದ ದೇವರ ವಿಗ್ರಹಗಳು, ಪೂಜೆಯ ಬಗೆ ಬಗೆಯ ವಸ್ತುಗಳಿವೆ. ಪುರಾತನ ಕಾಲದಲ್ಲಿ ಉಪಯೋಗಿಸುತ್ತಿದ್ದ ವಸ್ತುಗಳನ್ನು ಇಂದಿನ ಹಾಗೂ ಮುಂದಿನ ಪೀಳಿಗೆಗೆ ಪರಿಚಯಿಸುವ ಉದ್ದೇಶದಿಂದ ಭಂಡಾರ್ಕಾರ್ ಇಂಥದ್ದೊಂದು ಅದ್ಭುತ ಪ್ರಯತ್ನಕ್ಕೆ ಕೈಹಾಕಿದ್ದಾರೆ.
ಎಲ್ಲಾದರೂ ಹಳೆದ ವಸ್ತುಗಳು ಕಂಡುಬಂದರೆ ಸಾಕು ಅದನ್ನು ಖರೀದಿಸಿ ಮನೆಯಲ್ಲಿ ಸಂಗ್ರಹಿಸುವ ಹವ್ಯಾಸ ಇವರದ್ದು. ಮನೆಯ ಪ್ರವೇಶ ದ್ವಾರದಿಂದ ಹಿಡಿದು ಚಾವಡಿ, ಪಡಸಾಲೆ, ಅಡುಗೆ ಮನೆ ಹಾಗೂ ಕೋಣೆಗಳಲ್ಲಿ ಅಚ್ಚುಕಟ್ಟಾಗಿ ಸುಂದರವಾಗಿ ವಸ್ತುಗಳನ್ನು ಜೋಡಿಸಿಟ್ಟಿದ್ದಾರೆ. ತನ್ನ ಪತ್ನಿ ಮತ್ತು ಮಕ್ಕಳ ಸಹಕಾರದಿಂದ ಸಂಗ್ರಹಾಲಯ ಸ್ವಚ್ಛವಾಗಿ, ಆಕರ್ಷಣೀಯವಾಗಿರಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಮುಂದಿನ ಪೀಳಿಗೆಗೆ ಹಳೆಯ ವಸ್ತುಗಳ ಅಧ್ಯಯನಕ್ಕೆ ಅನುಕೂಲ ಮಾಡಿಕೊಡಲು ಭಂಡಾರ್ಕರ್ ನಿರ್ಮಿಸಿರುವ ಪ್ರಾಚ್ಯವಸ್ತು ಸಂಗ್ರಹಾಲಯಕ್ಕೆ ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಸೇರಿ ಗಣ್ಯರು ಕೊಡುಗೆ ನೀಡಿದ್ದಾರೆ.
ಇದನ್ನೂ ಓದಿ: Big Ghol Fish: ಉಡುಪಿ ಮೀನುಗಾರರ ಬಲೆಗೆ ಬಿದ್ದ ಅಪರೂಪದ ಬೃಹತ್ ಆಕಾರದ ಗೋಳಿ ಮೀನು!