ಉಡುಪಿ : ಈಜುಪಟು ಗಂಗಾಧರ್ ಜಿ ಕಡೆಕರ್ ಅವರು ಐದುವರೆ ಗಂಟೆಯಲ್ಲಿ ಈಜಿ ಹೊಸ ದಾಖಲೆ ಮಾಡುವ ಮೂಲಕ ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್‌ನಲ್ಲಿ ತಮ್ಮ ಹೆಸರು ಸೇರಿಸಿದ್ದಾರೆ. 66 ವರ್ಷದ ಗಂಗಾಧರ್ ಈ ಮೂಲಕ ಸಾಧನೆಗೆ ವಯಸ್ಸಿನ ಅಡ್ಡಿಯಿಲ್ಲ ಎನ್ನುವುದನ್ನು ತೋರಿಸಿದ್ದಾರೆ.
ಕೈಗೆ ಕೋಳ, ಕಾಲಿಗೆ ಸರಪಳಿ ಬಿಗಿದುಕೊಂಡು ಗಂಗಾಧರ್ ಎಂಬುವರು ಅರಬ್ಬಿ ಸಮುದ್ರದಲ್ಲಿ 5 ಗಂಟೆ 30 ನಿಮಿಷಗಳ ಕಾಲ ಈಜಿ ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್ ಸೇರಿದ್ದಾರೆ.ಇವರು 60ನೇ ವಯಸ್ಸಿನಲ್ಲಿ ಸಮುದ್ರದಲ್ಲಿ ಈಜುವುದನ್ನು ಕಲಿಯಲು ಪ್ರಾರಂಭಿಸಿ, ಆರು ವರ್ಷಕ್ಕೆ ಎರಡು ರಾಷ್ಟ್ರೀಯ, ಅಂತಾರಾಷ್ಟ್ರೀಯ ದಾಖಲೆ ಮಾಡಿದ್ದಾರೆ.
ಈಗಾಗಲೇ ಸಾವಿರಕ್ಕೂ ಹೆಚ್ಚು ಜನರಿಗೆ ಈಜು ತರಬೇತಿಯನ್ನು ಸಹ ನೀಡಿದ್ದಾರೆ. ತಮ್ಮ 66ನೇ ವಯಸ್ಸಿನಲ್ಲಿ ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್ ದಾಖಲೆ ನಿರ್ಮಿಸಿದ್ದಾರೆ.
ಇದನ್ನೂ ಓದಿ: ಹೈಕಮಾಂಡ್ ಒಪ್ಪಿದ್ರೆ ಕಾಂಗ್ರೆಸ್ನ 16 ಶಾಸಕರನ್ನು ಬಿಜೆಪಿಗೆ ಕರೆತರುತ್ತೇನೆ: ರಮೇಶ್ ಜಾರಕಿಹೊಳಿ ಹೊಸ ಬಾಂಬ್!
ಗಂಗಾಧರ್ ಅವರ ದಾಖಲೆಯನ್ನು ದಾಖಲಿಸುವುದಕ್ಕೆ ಬಂದ ಅಧಿಕಾರಿ ಅವರ ಸಾಹಸವನ್ನು ಕಂಡು ಅಚ್ಚರಿ ವ್ಯಕ್ತಪಡಿಸಿದ್ದಾರೆ. ಕೈ-ಕಾಲು ಕಟ್ಟಿ ಡಾಲ್ಫಿನ್ ಮಾದರಿಯಲ್ಲಿ ಈಜಾಡಿರುವುದು ನಿಜಕ್ಕೂ ಗ್ರೇಟ್ ಎಂದು ಮನೀಶ್ ಹೇಳಿದ್ದಾರೆ.
ಸಾಧನೆಗೆ ವಯಸ್ಸು ಅಡ್ಡಿ ಬರೋದಿಲ್ಲ ಅನ್ನೋದನ್ನು ಗಂಗಾಧರ್ ತೋರಿಸಿಕೊಟ್ಟಿದ್ದಾರೆ. ಅಷ್ಟೇ ಅಲ್ಲ, ಇವರು ಕಡಲ ತೀರದ ಯುವಕರಿಗೂ ಸ್ಫೂರ್ತಿಯಾಗಿದ್ದಾರೆ.
ಜಾಹೀರಾತು: ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ