ETV Bharat / state

ಶ್ರೀ ಕೃಷ್ಣ ಮಠದಲ್ಲಿ ತಪ್ತ ಮುದ್ರಾಧಾರಣೆ ಮಾಡಿಸಿಕೊಂಡ ನೂರಾರು ಭಕ್ತರು - ವಿಷ್ಣುವಿನ ಆಯುಧಗಳಾದ ಶಂಖ

ಮಠಾಧೀಶರ ಮೂಲಕ ತಪ್ತ ಮುದ್ರೆ ಹಾಕಿಸಿಕೊಂಡ್ರೆ ರೋಗ ನಿರೋಧಕ ಶಕ್ತಿ ಹೆಚ್ಚಾಗುತ್ತದೆ ಅನ್ನೋದು ಭಕ್ತರ ನಂಬಿಕೆ. ಹೀಗಾಗಿ ಮಾಧ್ವ ಮತದ ಮೂಲ ಕೇಂದ್ರವಾಗಿರುವ ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ನೂರಾರು ಭಕ್ತರು ಮುದ್ರಾಧಾರಣೆ ಮಾಡಿಸಿಕೊಂಡರು.

Sri Krishna Math
Sri Krishna Math
author img

By

Published : Jul 21, 2021, 7:33 AM IST

ಉಡುಪಿ: ಮಾಧ್ವ ಮತದ ಮೂಲ ಕೇಂದ್ರವಾಗಿರುವ ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ನಿನ್ನೆ ನೂರಾರು ಭಕ್ತರು ಮುದ್ರಾಧಾರಣೆ ಮಾಡಿಸಿಕೊಂಡರು.

ಮಾಧ್ವ ಸಂಪ್ರದಾಯದಲ್ಲಿ ತಪ್ತ ಮುದ್ರಾಧಾರಣೆಗೆ ವಿಶೇಷ ಮಹತ್ವವಿದೆ. ಮಠಾಧೀಶರ ಮೂಲಕ ತಪ್ತ ಮುದ್ರೆ ಹಾಕಿಸಿಕೊಂಡ್ರೆ ರೋಗ ನಿರೋಧಕ ಶಕ್ತಿ ಹೆಚ್ಚಾಗುತ್ತದೆ ಅನ್ನೋದು ಭಕ್ತರ ನಂಬಿಕೆ. ಹೀಗಾಗಿ ಮಾಧ್ವ ಮತದ ಮೂಲಕೇಂದ್ರವಾಗಿರುವ ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ನೂರಾರು ಭಕ್ತರು ಮುದ್ರಾಧಾರಣೆ ಮಾಡಿಸಿಕೊಂಡರು. ಕೇವಲ ಯತಿಗಳಿಂದ ಮಾತ್ರ ಮುದ್ರಾಧಾರಣೆ ಮಾಡಿಸಿಕೊಳ್ಳಬೇಕೆಂಬ ಪದ್ಧತಿ ಕೂಡ ಇದೆ.

ಸರ್ವಜ್ಞ ಪೀಠಾರೂಢ ಯತಿಗಳಲ್ಲಿ ಆಚಾರ್ಯ ಮಧ್ವರು ಸನ್ನಿಹಿತರಾಗಿರುತ್ತಾರೆ ಎಂಬ ನಂಬಿಕೆ ಹಿನ್ನೆಲೆಯಲ್ಲಿ ನೂರಾರು ಭಕ್ತರು ಯತಿಗಳಿಂದ ಮುದ್ರೆ ಧಾರಣೆ ಮಾಡಿಸಿಕೊಳ್ಳುತ್ತಾರೆ. ವಿಷ್ಣುವಿನ ಆಯುಧಗಳಾದ ಶಂಖ ಮತ್ತು ಚಕ್ರದ ಚಿಹ್ನೆಗಳನ್ನು ಕಾದ ಲೋಹದ ಮೂಲಕ ಮೈಮೇಲೆ ಧರಿಸುವುದು ಇಲ್ಲಿನ ಸಂಪ್ರದಾಯ.

ಶ್ರೀ ಕೃಷ್ಣ ಮಠದಲ್ಲಿ ತಪ್ತ ಮುದ್ರಾಧಾರಣೆ

ಬ್ರಹ್ಮಾದಿ ದೇವತೆಗಳು ಕೂಡಾ ಮುದ್ರಾಧಾರಣೆ ಮಾಡಿಕೊಳ್ಳುತ್ತಾರೆ. ಶ್ರೀ ಮಧ್ವಚಾರ್ಯರು ಈ ದಿನವೇ ಸ್ವರ್ಗದಲ್ಲಿ ಎಲ್ಲಾ ದೇವತೆಗಳಿಗೆ ಮುದ್ರಾಧಾರಣೆ ಮಾಡಿಸುತ್ತಾರೆ ಎಂಬ ಕಥೆಯಿದೆ. ಪುರುಷರು ಪಂಚಮುದ್ರೆಯನ್ನು ಇರಿಸಿಕೊಂಡರೆ, ಮಹಿಳೆಯರು ಎಡತೋಳಿಗೆ ಶಂಖ ಮತ್ತು ಬಲತೋಳಿಗೆ ಚಕ್ರಮುದ್ರೆ ಇರಿಸಿಕೊಳ್ಳುತ್ತಾರೆ. ಸುದರ್ಶನ ಹೋಮಕುಂಡದಲ್ಲಿ ಶಂಖ, ಚಕ್ರದ ಲೋಹದ ಅಚ್ಚು ಇರಿಸಿ ಮುದ್ರಾಧಾರಣೆ ಮಾಡುವುದರಿಂದ ಮಳೆಗಾಲದಲ್ಲಿ ರೋಗ ನಿರೋಧಕ ಶಕ್ತಿಯೂ ಹೆಚ್ಚಾಗುತ್ತದೆ ಅನ್ನೋದು ಭಕ್ತರ ನಂಬಿಕೆ.

ಇಲ್ಲಿನ ಅಷ್ಟಮಠಾಧೀಶರು ಕೂಡ ವಿವಿಧೆಡೆ ತೆರಳಿ ಈ ದಿನ ಭಕ್ತರಿಗೆ ಮುದ್ರಾಧಾರಣೆ ಮಾಡುತ್ತಾರೆ. ಮುದ್ರಾಧಾರಣೆಯಿಂದ ಸರ್ವರೋಗ ರುಜಿನಗಳು ನಿವಾರಣೆಯಾಗಿ ಲೋಕ ಕಲ್ಯಾಣ ಆಗುತ್ತೆ ಎನ್ನುವ ನಂಬಿಕೆ ಭಕ್ತರದ್ದಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.