'ಅಮ್ಮ ಎಂದರೆ ಏನೋ ಹರುಷವೂ, ನಮ್ಮ ಪಾಲಿಗೆ ಅವಳೇ ದೈವವೂ....' ಅಮ್ಮ ಎಂಬ ಎರಡಕ್ಷರ ಅದೆಷ್ಟು ಖುಷಿ ಕೊಡುತ್ತೆ ಅಲ್ವಾ?. 9 ತಿಂಗಳು ಹೊತ್ತು ಹೆತ್ತು ಸಾಕಿ ಸಲುಹುತ್ತಾಳೆ ಅಮ್ಮ. ಇಲ್ಲೊಬ್ಬಾಕೆ ನಿರ್ಗತಿಕರ, ಬಡವರ, ಅನಾಥರ ಪಾಲಿಗೆ ಪ್ರೀತಿಯ ಅಮ್ಮನಾಗಿದ್ದಾರೆ. ಉಡುಪಿಯ ಹೊಸಬೆಳಕು ಆಶ್ರಮದಲ್ಲಿ ನಿರ್ಗತಿಕರ ಪಾಲಿಗೆ ಅಮ್ಮನಾದ ಮಹಿಳೆಯ ಕಥೆ ಇದು.
ಅನಾಥರ ಬಾಳಿಗೆ ಹೊಸಬೆಳಕು ನೀಡಿ ಅಕ್ಕರೆಯ ಅಮ್ಮನಾದ್ರು ತನುಲಾ ತರುಣ್ - ಉಡುಪಿ ಸುದ್ದಿ
ಉಡುಪಿ ಜಿಲ್ಲೆಯ ಹೊಸಬೆಳಕು ಆಶ್ರಮದಲ್ಲಿ 15 ಕ್ಕೂ ಹೆಚ್ಚು ನಿರ್ಗತಿಕರನ್ನು ಸಾಕಿ ಸಲುಹುತ್ತಾ ಬಂದಿರುವ ತನುಲಾ ತರುಣ್ ಅವರಿಗೆ ಅಮ್ಮಂದಿರ ದಿನದ ಶುಭಾಶಯಗಳು.
ಅನಾಥರ ಬಾಳಿಗೆ ಹೊಸಬೆಳಕು
'ಅಮ್ಮ ಎಂದರೆ ಏನೋ ಹರುಷವೂ, ನಮ್ಮ ಪಾಲಿಗೆ ಅವಳೇ ದೈವವೂ....' ಅಮ್ಮ ಎಂಬ ಎರಡಕ್ಷರ ಅದೆಷ್ಟು ಖುಷಿ ಕೊಡುತ್ತೆ ಅಲ್ವಾ?. 9 ತಿಂಗಳು ಹೊತ್ತು ಹೆತ್ತು ಸಾಕಿ ಸಲುಹುತ್ತಾಳೆ ಅಮ್ಮ. ಇಲ್ಲೊಬ್ಬಾಕೆ ನಿರ್ಗತಿಕರ, ಬಡವರ, ಅನಾಥರ ಪಾಲಿಗೆ ಪ್ರೀತಿಯ ಅಮ್ಮನಾಗಿದ್ದಾರೆ. ಉಡುಪಿಯ ಹೊಸಬೆಳಕು ಆಶ್ರಮದಲ್ಲಿ ನಿರ್ಗತಿಕರ ಪಾಲಿಗೆ ಅಮ್ಮನಾದ ಮಹಿಳೆಯ ಕಥೆ ಇದು.
ದಿನ ಬೆಳಗ್ಗೆ ಉಪಹಾರದಿಂದ ಹಿಡಿದು, ಅಡುಗೆ ಕೆಲಸ ಮಾಡಿ, ನಿರ್ಗತಿಕರ ಚಾಕರಿಯನ್ನು ಸ್ವತಃ ತಾವೇ ಮಾಡ್ತಾರೆ. ಮಾನಸಿಕ ಅಸ್ಚಸ್ಥರಿಂದ ಹಿಡಿದು ಕ್ಯಾನ್ಸರ್ ಕಾಯಿಲೆಯ ರೋಗಿಗಳನ್ನು, ರಸ್ತೆಯಲ್ಲಿ ನಿರ್ಗತಿಕರಾಗಿ ಅಲೆಯೋ ಮಂದಿಯನ್ನು ಮಕ್ಕಳಂತೆ ಸಾಕಿ ಸಲಹುತ್ತಿದ್ದಾರೆ. ಇದಕ್ಕೆ ತನ್ನ ಪತಿ ಮತ್ತು ಕುಟುಂಬ ನೀಡುತ್ತಿರುವ ಸಹಕಾರವನ್ನು ತನುಲಾ ನೆನಪಿಸಿಕೊಳ್ತಾರೆ. ಪ್ರಚಾರವಿಲ್ಲದೆ, ಸುದ್ದಿಯಾಗದೇ ಸೈಲೆಂಟ್ ಆಗಿ ಕೆಲಸ ಮಾಡ್ತಾ ಇರುವ ತನುಲಾ ತರುಣ್ ಅವರಿಗೆ ಸಾರ್ವಜನಿಕರ, ದಾನಿಗಳ ಸಹಾಯ ಸಿಕ್ಕಿದ್ರೆ ಆಶ್ರಮವನ್ನು ಇನ್ನಷ್ಟು ವಿಸ್ತರಿಸೋ ಬಯಕೆ ಇದೆ.