ಉಡುಪಿ: ಉಡುಪಿಯ ಕೃಷ್ಣ ಮಠದಲ್ಲಿ ಒಂದು ವಿಶೇಷ ಸಂಪ್ರದಾಯ ಇದೆ. ನವರಾತ್ರಿಯ ಸಂದರ್ಭದಲ್ಲಿ 9 ದಿನಗಳ ಕಾಲ ಕೃಷ್ಣ ದೇವರಿಗೆ ಸ್ತ್ರೀ ಅಲಂಕಾರವನ್ನು ಮಾಡುವ ಅಪರೂಪದ ಆಚರಣೆ ಇಲ್ಲಿದೆ. ಈ ಬಾರಿಯೂ ನವರಾತ್ರಿ ವೇಳೆ ಅದಮಾರು ಮಠದ ಈಶಪ್ರಿಯ ತೀರ್ಥ ಸ್ವಾಮೀಜಿ ಬಗೆ ಬಗೆಯ ಅಲಂಕಾರಗಳಿಂದ ಕೃಷ್ಣ ದೇವರನ್ನು ಪೂಜಿಸಿದರು.
![Sri Krishna](https://etvbharatimages.akamaized.net/etvbharat/prod-images/9321587_udupii.jpg)
ಒಂಬತ್ತು ದಿನಗಳ ಕಾಲ ನಾನಾ ಬಗೆಯ ದೇವಿಯ ಅಲಂಕಾರಗಳಲ್ಲಿ ಉಡುಪಿಯ ಕಡೆಗೋಲು ಕೃಷ್ಣ ಭಕ್ತರಿಗೆ ದರ್ಶನ ನೀಡಿದ್ದು ವಿಶೇಷವಾಗಿತ್ತು. ಕೈಮಗ್ಗವನ್ನು ಪ್ರೋತ್ಸಾಹಿಸುವ ದೃಷ್ಟಿಯಿಂದ ನವರಾತ್ರಿಯ ಎರಡು ದಿನಗಳಲ್ಲಿ ಉಡುಪಿ ಸೀರೆಯನ್ನು ತೊಡಿಸುವ ಮೂಲಕ ದೇವರಿಗೆ ವಿಶೇಷ ಆರಾಧನೆ ನಡೆಸಲಾಯ್ತು.
![Sri Krishna](https://etvbharatimages.akamaized.net/etvbharat/prod-images/9321587_u.jpg)
ಕೈಮಗ್ಗದಲ್ಲೇ ತಯಾರಿಸುವ ಉಡುಪಿ ಸೀರೆಗೆ ಮಾರುಕಟ್ಟೆ ಒದಗಿಸಿ, ಬಡ ನೇಕಾರರನ್ನು ಪ್ರೋತ್ಸಾಹಿಸುವ ಕೆಲಸವನ್ನು ಪರ್ಯಾ ಅದಮಾರು ಮಠ ಮಾಡುತ್ತಿದೆ. ಈ ಪ್ರಯುಕ್ತ, ಕೃಷ್ಣ ದೇವರಿಗೆ ಉಡುಪಿ ಸೀರೆ ತೊಡಿಸಿದ್ದು, ಮಹತ್ವದ ಪ್ರೋತ್ಸಾಹವೆನಿಸಿದೆ.
![Sri Krishna](https://etvbharatimages.akamaized.net/etvbharat/prod-images/9321587_kk.jpg)