ಉಡುಪಿ: ಅದಮಾರು ಮಠದ ಕಿರಿಯ ಯತಿ ಶ್ರೀ ಈಶಪ್ರಿಯ ತೀರ್ಥ ಶ್ರೀಪಾದರು ಈ ಬಾರಿಯ ಸರ್ವಜ್ಞ ಪೀಠ ಏರಲಿದ್ದು, ಪರ್ಯಾಯ ದರ್ಬಾರ್ ನಡೆಸಲಿದ್ದಾರೆ ಎಂದು ಅದಮಾರು ಮಠದ ಹಿರಿಯ ಶ್ರೀ ವಿಶ್ವಪ್ರಿಯ ತೀರ್ಥ ಶ್ರೀಪಾದರು ಸ್ಪಷ್ಟಪಡಿಸಿದ್ದಾರೆ.
ಎರಡು ಪರ್ಯಾಯ ಪೀಠಾರೋಹಣ ಮಾಡಿರುವ ಹಿರಿಯ ಶ್ರೀಗಳು ಗುರು ಪರಂಪರೆಯಂತೆ ಶಿಷ್ಯರಿಗೆ ಪರ್ಯಾಯದ ಜವಾಬ್ದಾರಿ ವಹಿಸಿದ್ದು, ಪೂಜೆಗಾಗಿ ಶ್ರೀಗಳ ಜೊತೆ ಇದ್ದು ಸಲಹೆ ಸೂಚನೆಗಳಷ್ಟೇ ನೀಡುತ್ತೇನೆ ಎಂದು ತಿಳಿಸಿದರು. ಅಧಿಕಾರದ ಬಗ್ಗೆ ಜನ ಆಡ್ತಾ ಇರೋ ಮಾತಿಗೆ ಸಂಪೂರ್ಣ ತೆರೆ ಎಳೆದ ಶ್ರೀಗಳು, ನನಗಿಂತ ಹೆಚ್ಚು ಸಮರ್ಥವಾಗಿ ಕಿರಿಯ ಶ್ರೀಗಳು ಪರ್ಯಾಯ ನಡೆಸುತ್ತಾರೆ ಅಂತಾ ಎಲ್ಲಾ ಗೊಂದಲಗಳಿಗೆ ತೆರೆ ಎಳೆದಿದ್ದಾರೆ.
ಪರ್ಯಾಯ ದರ್ಬಾರ್ ಸಮಯದಲ್ಲಿ ಬದಲಾವಣೆ:
ಈ ಹಿಂದಿನ ಪರ್ಯಾಯದಲ್ಲಿ ಪರ್ಯಾಯ ಮೆರವಣಿಗೆ, ಬಡಗು ಮಾಳಿಗೆಯಲ್ಲಿ ಅಧಿಕಾರದ ಬಳಿಕ ರಾಜಾಂಗಣದಲ್ಲಿ ನಡೆಯುವ ಪರ್ಯಾಯ ದರ್ಬಾರ್ ಬೆಳಗಿನ ಹೊತ್ತು ನಡೆಯುವುದಿಲ್ಲ. ಬದಲಾಗಿ ಮಧ್ಯಾಹ್ನ 2-30ಕ್ಕೆ ರಾಜಾಂಗಣದಲ್ಲಿ ನಡೆಯಲಿದೆ.
ಮಾನವ ಹೊರುವ ಪಲ್ಲಕ್ಕಿಗೆ ಮತ್ತೆ ಚಾಲನೆ:
ಕಳೆದ ಬಾರಿ ಪೇಜಾವರ ಶ್ರೀಗಳ ಪರ್ಯಾಯದಲ್ಲಿ ಸಾಕಷ್ಟು ಚರ್ಚೆಗೀಡಾದ ಮಾನವ ಹೊರುವ ಪಲ್ಲಕ್ಕಿಯಲ್ಲಿ ಶ್ರೀಗಳ ಮೆರವಣಿಗೆ ಕುರಿತಾಗಿ ಪೇಜಾವರ ಶ್ರೀಗಳು ವಾಹನದಲ್ಲಿ ಮೆರವಣಿಗೆ ನಡೆಸಿ ಬದಲಾವಣೆ ಮಾಡಿದ್ದರು.
ಆದ್ರೆ ಈ ಬಾರಿ ಅದಮಾರು ಪರ್ಯಾಯದಲ್ಲಿ ಸಂಪ್ರದಾಯಕ್ಕೆ ಧಕ್ಕೆ ಬಾರದಂತೆ ಮಾನವ ಹೊರುವ ಪಲ್ಲಕ್ಕಿಯಲ್ಲಿ ಅದಮಾರು ಪರ್ಯಾಯಕ್ಕೆ ಸೀಮಿತವಾಗಷ್ಟೇ ಮುಂದುವರಿಸಲಾಗುವುದು ಎಂದು ಕಿರಿಯ ಶ್ರೀಗಳು ಸೂಚನೆ ನೀಡಿದ್ದಾರೆ.
ಜನವರಿ 18ಕ್ಕೆ ಪರ್ಯಾಯ ನಡೆಯಲಿದ್ದು, ಅದಕ್ಕೂ ಮುನ್ನ ಜನವರಿ 8ಕ್ಕೆ ಪರ್ಯಾಯ ಶ್ರೀಗಳ ಪುರಪ್ರವೇಶ ಕೂಡಾ ನಡೆಯಲಿದೆ.