ಉಡುಪಿ: ಶಿರೂರು ಮಠಕ್ಕೆ ನೂತನ ಪೀಠಾಧಿಕಾರಿ ಘೋಷಣೆ ಮಾಡಲಾಗಿದೆ. ಅನಿರುದ್ಧ್ ಸರಳತ್ತಾಯ ಶಿರೂರು ಮಠಕ್ಕೆ ಉತ್ತರಾಧಿಕಾರಿಯಾಗಿದ್ದಾರೆ.
ತುಳು ಶಿವಳ್ಳಿ ಮಾಧ್ವ ಬ್ರಾಹ್ಮಣ ವಟು 16 ವರ್ಷದ ಅನಿರುದ್ಧ ಸರಳತ್ತಾಯನನ್ನು ಸೋದೆ ವಿಶ್ವವಲ್ಲಭ ತೀರ್ಥ ಶ್ರೀಪಾದರು ಉತ್ತರಾಧಿಕಾರಿ ಯಾಗಿ ಘೋಷಣೆ ಮಾಡಿದ್ದಾರೆ. ಅನಿರುದ್ಧ ಸರಳತ್ತಾಯ ಎಸ್ಎಸ್ಎಲ್ಸಿ ಪೂರೈಸಿದ ವಿದ್ಯಾರ್ಥಿಯಾಗಿದ್ದು, ಉಡುಪಿಯ ವಿದ್ಯೋದಯ ಹೈಸ್ಕೂಲಿನಲ್ಲಿ ವಿದ್ಯಾಭ್ಯಾಸ ಮಾಡಿದ್ದಾನೆ. ದಕ್ಷಿಣ ಕನ್ನಡ ಜಿಲ್ಲೆಯ ಧರ್ಮಸ್ಥಳದ ನಿಡ್ಲೆ ಮೂಲದ ಈತನಿಗೆ ಮೇ 11 ರಿಂದ 14ರ ವರೆಗೆ ಪಟ್ಟಾಭಿಷೇಕ ಪ್ರಕ್ರಿಯೆ ನಡೆಯಲಿದೆ.
ಉತ್ತರ ಕನ್ನಡ ಜಿಲ್ಲೆಯ ಸೋಂದಾ ಮಠದಲ್ಲಿ ನಡೆಯಲಿರುವ ಶಿಷ್ಯಸ್ವೀಕಾರ ಕಾರ್ಯಕ್ರಮ ನೆರವೇರಲಿದೆ. ಅಷ್ಟಮಠಗಳಲ್ಲಿ ಬಾಲಸನ್ಯಾಸ ಸ್ವೀಕಾರ ಸಂಪ್ರದಾಯ ಇದ್ದು ಸಂಪ್ರದಾಯದ ಪ್ರಕಾರವೇ ವಟುವಿನ ಆಯ್ಕೆ ನಡೆದಿದೆ ಅಂತಾ ಸೋದೆ ಶ್ರೀ ಹೇಳಿದ್ದಾರೆ. ಅಷ್ಟಮಠಗಳ ಯತಿಗಳಿಂದ ಸನ್ಯಾಸ ವಿಚಾರದಲ್ಲಿ ಯಾವುದೇ ಸಂವಿಧಾನ ರಚನೆಯಾಗಿಲ್ಲ. ಎಲ್ಲ ಯತಿಗಳ ಗಮನಕ್ಕೆ ತಂದು ಶಿಷ್ಯನ ಆಯ್ಕೆ ಮಾಡಿದ್ದೇವೆ ಅಂತಾ ಉಡುಪಿಯ ಶಿರೂರಿನಲ್ಲಿ ಸೋದೆ ವಿಶ್ವವಲ್ಲಭತೀರ್ಥ ಸ್ವಾಮೀಜಿ ಹೇಳಿಕೆ ನೀಡಿದ್ದಾರೆ.