ಉಡುಪಿ: ಮಾನವನಿಗೆ ಅತ್ಯಂತ ಪ್ರೀತಿ ಪಾತ್ರವಾಗುವ ಪ್ರಾಣಿಗಳೆಂದರೆ ಅದು ಶ್ವಾನಗಳು. ನಾಯಿಗಳು ಅತ್ಯಂತ ಪ್ರಾಮಾಣಿಕ ಪ್ರಾಣಿಗಳು ಅಂತಲೇ ಕರೆಸಿಕೊಳ್ಳುತ್ತವೆ. ಇದೀಗ ಮಾಜಿ ಸೈನಿಕರೊಬ್ಬರು ವಿವಿಧ ಜಾತಿಯ ನಾಯಿಗಳನ್ನು ತಮ್ಮ ಮನೆ ಮಕ್ಕಳಂತೆ ಸಾಕಿ ಸಲಹುತ್ತಿದ್ದಾರೆ.
ಉಡುಪಿ ಕಡೇಕಾರ್ ನಿವಾಸಿ ಮಾಜಿ ಸೈನಿಕ ನವೀನ್ 11 ವರ್ಷಗಳ ಕಾಲ ಸೈನ್ಯದಲ್ಲಿ ಸೇವೆ ಸಲ್ಲಿಸಿ ಸ್ವಯಂ ನಿವೃತ್ತಿ ಪಡೆದಿದ್ದಾರೆ. ಬಳಿಕ ಊರಿಗೆ ಬಂದು ಹವ್ಯಾಸಕ್ಕಾಗಿ ನಾಯಿ ಸಾಕಲು ಮುಂದಾದರು. ಬಳಿಕ ವಿದೇಶಿ ತಳಿಗಳ ಬಲು ಅಪರೂಪದ ನಾಯಿಗಳು ಸಹ ಇವರ ಮನೆ ಸೇರಿವೆ. ನಾಯಿಗಳು ಅಷ್ಟೇ ಅಲ್ಲ, ಮೊಲಗಳು, ವಿವಿಧ ಜಾತಿಯ ಮೀನುಗಳು ಅಕ್ವೇರಿಯಂ ಸೇರಿವೆ.
ರಾಕ್ವಾರ್, ಅಮೆರಿಕನ್ ಬುಲ್ಲಿ, ಸೈಬೀರಿಯನ್ ಹಸ್ಕಿ ಹೀಗೆ ದೈತ್ಯಾಕಾರದ ಶ್ವಾನಗಳು, ಅಪರೂಪದ 13 ತಳಿಯ 15 ಶ್ವಾನಗಳು ಮಾತ್ರವಲ್ಲದೆ ವಿವಿಧ ತಳಿಯ ಬೆಕ್ಕು, ಮೊಲ, ಪಕ್ಷಿ, ಆಮೆ, ಮೀನುಗಳು ಎಲ್ಲ ಮನೆಯಲ್ಲಿವೆ.
ಇವುಗಳ ಲಾಲನೆ ಪಾಲನೆ ನವೀನ್ ಅವರೇ ಮಾಡುತ್ತಿದ್ದು, ಆಹಾರ ಮೆಡಿಸಿನ್ ಅಂತ ದಿನಕ್ಕೆ ಕಡಿಮೆ ಅಂದ್ರೂ 1 ಸಾವಿರದಷ್ಟು ಖರ್ಚು ಇದೆ. ಸ್ವಂತ ಉದ್ಯಮದಿಂದ ಬಂದ ಹಣವನ್ನು ಇದಕ್ಕಾಗಿ ವಿನಿಯೋಗ ಮಾಡುತ್ತಿದ್ದಾರೆ.
ಇದನ್ನೂ ಓದಿ: ಲೈವ್ ವಿಡಿಯೋ: ಕೆನಾಲ್ನಲ್ಲಿ ಕೊಚ್ಚಿ ಹೋದ ಕಾರು, ಮೂವರು ಸಾವು.. ಸಾವಿಗೂ ಮುನ್ನ ಲಿಫ್ಟ್ ಕೇಳಿದ್ಲು ಶಿಕ್ಷಕಿ!