ETV Bharat / state

ಉಡುಪಿಯಲ್ಲಿ ಪ್ರಿನ್ಸಿಪಾಲ್​ ನಿಂದಿಸಿದ ಆರೋಪ.. ಮನನೊಂದು ಪಿಯುಸಿ ವಿದ್ಯಾರ್ಥಿನಿ ಆತ್ಮಹತ್ಯೆ - student committed suicide

ವಿದ್ಯಾರ್ಥಿನಿಗೆ ಪರೀಕ್ಷೆಯಲ್ಲಿ 10 ಮಾರ್ಕ್ಸ್ ಕಡಿಮೆ ಬಂತು ಎಂದು ಪ್ರಿನ್ಸಿಪಾಲ್ ಬೈದಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಇದಕ್ಕೆ ಮನನೊಂದ ಆಕೆ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಉಡುಪಿಯಲ್ಲಿ ನಡೆದಿದೆ.

ಮನನೊಂದು ಪಿಯುಸಿ ವಿದ್ಯಾರ್ಥಿನಿ ಆತ್ಮಹತ್ಯೆ
ಮನನೊಂದು ಪಿಯುಸಿ ವಿದ್ಯಾರ್ಥಿನಿ ಆತ್ಮಹತ್ಯೆ
author img

By

Published : Nov 29, 2022, 1:56 PM IST

ಉಡುಪಿ: ಶಿಕ್ಷಕರ ಬೈಗುಳಕ್ಕೆ ಬೇಸತ್ತು ಪಿಯುಸಿ ವಿದ್ಯಾರ್ಥಿನಿ ನೇಣಿಗೆ ಶರಣಾದ ಘಟನೆ ಉಡುಪಿಯಲ್ಲಿ ನಡೆದಿದೆ. ಹೆಬ್ರಿಯಲ್ಲಿರುವ ಎಸ್ ಆರ್ ಪದವಿಪೂರ್ವ ಕಾಲೇಜು ವಿದ್ಯಾರ್ಥಿನಿ ದೀಪ್ತಿ ನೇಣಿಗೆ ಶರಣಾಗಿದ್ದಾರೆ. ಉಡುಪಿ ಜಿಲ್ಲೆಯ ಪೆರ್ಡೂರಿನ ಮನೆಯಲ್ಲಿ ಈ ಘಟನೆ ನಡೆದಿದೆ.

ಉನ್ನತ ಶ್ರೇಣಿಯಲ್ಲಿ ಪಾಸಾಗಿ ಉಚಿತ ಸೀಟ್ ಪಡೆದಿದ್ದ ವಿದ್ಯಾರ್ಥಿನಿಗೆ ಪರೀಕ್ಷೆಯಲ್ಲಿ 10 ಮಾರ್ಕ್ಸ್ ಕಡಿಮೆ ಬಂತು ಎಂದು ಪ್ರಿನ್ಸಿಪಾಲ್ ಬೈದಿದ್ದಾರೆ ಎನ್ನಲಾಗ್ತಿದೆ. ಈ ಮಾತಿನಿಂದ ಬೇಸರಗೊಂಡ ವಿದ್ಯಾರ್ಥಿನಿ, ಆತ್ಮಹತ್ಯೆಗೆ ಶರಣಾಗಿದ್ದಾಳೆ ಎಂದು ತಿಳಿದುಬಂದಿದೆ.

ಮನನೊಂದು ಪಿಯುಸಿ ವಿದ್ಯಾರ್ಥಿನಿ ಆತ್ಮಹತ್ಯೆ

ಪರೀಕ್ಷೆಯಲ್ಲಿ 10 ಅಂಕ ಕಡಿಮೆ ಗಳಿಸಿದ್ದ, ದೀಪ್ತಿಗೆ ಕಮ್ಮಿ ಮಾರ್ಕ್ಸ್​​ಗೆ ಫೈನ್ ಹಾಕುವುದಾಗಿ ಪ್ರಿನ್ಸಿಪಾಲರು ಹೇಳಿದ್ದರಂತೆ. ಅಲ್ಲದೇ ಎಲ್ಲಾ ವಿದ್ಯಾರ್ಥಿಗಳ ಮುಂದೆ ಆಕೆಯನ್ನು ನಿಂದಿಸಿರುವ ಬಗ್ಗೆ ಮನೆಯಲ್ಲಿ ಹೇಳಿದ್ದಳಂತೆ. ಮಾನಸಿಕವಾಗಿ ನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆಂದು ದೂರಿರುವ ತಂದೆ ಸುರೇಶ್ ಮೆಂಡನ್ ಹಿರಿಯಡ್ಕ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

ಇದನ್ನೂ ಓದಿ: ಕಳಪೆ ಕಾಮಗಾರಿ: ಆರ್​ಟಿಐ ಅಡಿ ಮಾಹಿತಿ ಕೇಳಿದ್ದಕ್ಕೆ ಹೊಡೆದು ಕೊಂದೇ ಬಿಟ್ರು!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.