ETV Bharat / state

ಹೊತ್ತಿನ ಊಟಕ್ಕೂ ಪರದಾಡುತ್ತಿದ್ದಾರೆ ಕರಾವಳಿ ಭಾಗದ ಖಾಸಗಿ ಬಸ್​​ಗಳ ಚಾಲಕ-ನಿರ್ವಾಹಕರು! - ಕರಾವಳಿ ಭಾಗದ ಖಾಸಗಿ ಬಸ್ ಚಾಲಕ-ನಿವ್ರಾಹಕರು

ಕರಾವಳಿ ಭಾಗದಲ್ಲಿ ಮೂರು ಸಾವಿರಕ್ಕೂ ಅಧಿಕ ಖಾಸಗಿ ಬಸ್ಸುಗಳು ಓಡಾಡುತ್ತಿದ್ದವು. ಲಾಕ್​ಡೌನ್​ನಿಂದ ಸರ್ಕಾರಿ ಮೈದಾನಗಳು, ಪೆಟ್ರೋಲ್ ಬಂಕ್ ಆವರಣ, ರಸ್ತೆ ಬದಿಯಲ್ಲಿ ನೂರಾರು ಬಸ್ಸುಗಳು ಅನಾಮತ್ತಾಗಿ ಮೂಲೆ ಸೇರಿವೆ.

private bus driver and conductor problems louck down effect
ಹೊತ್ತಿನ ಊಟಕ್ಕೂ ಪರದಾಡುತ್ತಿದ್ದಾರೆ, ಕರಾವಳಿ ಭಾಗದ ಖಾಸಗಿ ಬಸ್ ಚಾಲಕ-ನಿವ್ರಾಹಕರು..!
author img

By

Published : May 8, 2020, 5:10 PM IST

Updated : May 9, 2020, 12:20 AM IST

ಉಡುಪಿ: ಕರಾವಳಿ ಜಿಲ್ಲೆಯ ಸಂಚಾರಿ ಜಾಲದ ಜೀವನಾಡಿ ಖಾಸಗಿ ಬಸ್ಸುಗಳು ಒಂದು ತಿಂಗಳಿಂದ ನಿಂತಲ್ಲೇ ನಿಂತು ಟೈಯರ್​ಗಳು ಕೂಡಾ ಮಣ್ಣಲ್ಲಿ ಹೂತು ಹೋಗಿವೆ. ಚಾಲಕರು ಮತ್ತು ಕಂಡಕ್ಟರ್​​ಗಳು ಸಂಬಳವಿಲ್ಲದೆ ಬದುಕುವ ಆತಂಕದ ಜೊತೆಗೆ ಅನಿಶ್ಚಿತ ಭವಿಷ್ಯದ ಬಗೆಗೂ ಚಿಂತಾಕ್ರಾಂತರಾಗಿದ್ದಾರೆ.

ಕರಾವಳಿ ಭಾಗದಲ್ಲಿ ಮೂರು ಸಾವಿರಕ್ಕೂ ಅಧಿಕ ಖಾಸಗಿ ಬಸ್ಸುಗಳು ಓಡಾಡುತ್ತಿದ್ದವು. ಲಾಕ್​ಡೌನ್​ನಿಂದ ಸರ್ಕಾರಿ ಮೈದಾನಗಳು, ಪೆಟ್ರೋಲ್ ಬಂಕ್ ಆವರಣ, ರಸ್ತೆ ಬದಿಯಲ್ಲಿ ನೂರಾರು ಬಸ್ಸುಗಳು ಅನಾಮತ್ತಾಗಿ ಮೂಲೆ ಸೇರಿವೆ. ನಯಾ ಪೈಸೆ ಆದಾಯವಿಲ್ಲದೆ, ಇಟ್ಟಲ್ಲೇ ಇಟ್ಟು ಬಸ್ಸಿನ ಎಂಜಿನ್ ಕೂಡಾ ಹಾಳಾಗುತ್ತಿದೆ. ಟೈಯರ್​ಗಳು ಮಣ್ಣುಪಾಲಾಗುತ್ತಿದ್ದು, ಬಸ್ ಮಾಲೀಕರು ತಲೆ ಮೇಲೆ ಕೈ ಹೊತ್ತು ಕುಳಿತಿದ್ದಾರೆ. ತೆರಿಗೆ ತಪ್ಪಿಸುವ ಸಲುವಾಗಿ ತಮ್ಮ ಬಸ್ಸುಗಳನ್ನು ಆರ್.ಟಿ.ಒ ಕಚೇರಿಗೆ ಸರಂಡರ್ ಮಾಡಿಬಿಟ್ಟಿದ್ದಾರೆ.

ದಿನದ ಸಂಬಳಕ್ಕೆ ದುಡಿಯುವ ಚಾಲಕರು, ಕಂಡಕ್ಟರ್​​ಗಳ ಪಾಡು ಕೇಳೋರೇ ಇಲ್ಲ. ಎಲ್ಲಾ ಚೆನ್ನಾಗಿದ್ದಾಗ ದುಡಿಸಿಕೊಂಡ ಕೆಲ ಮಾಲೀಕರು ಈಗ ತಮ್ಮ ಸಿಬ್ಬಂದಿಯನ್ನು ಬದುಕಿದ್ದೀರಾ? ಸತ್ತೀದ್ದೀರಾ ಅಂತಲೂ ಕೇಳುತ್ತಿಲ್ಲವಂತೆ. ದಿನದ ಸಂಬಳ ಆಯಾ ದಿನ ವಿಲೇವಾರಿ ಮಾಡುವ ಕಾರಣ ಈಗ ಸಂಬಳ ಕೇಳುವಂತೆಯೂ ಇಲ್ಲ. ಜೀವಮಾನವಿಡೀ ದುಡಿದು ಹೈರಾಣಾದ ಜೀವ, ಸ್ವಲ್ಪ ರೆಸ್ಟ್ ಮಾಡಲಿ ಅಂತ ಮನೆಯ ಹೆಂಗಸರು ಹಾರೈಸುವಂತೆಯೂ ಇಲ್ಲ. ಯಾಕಂದ್ರೆ ಆಯಾ ದಿನ ದುಡಿದು ತಿನ್ನುವ ಈ ನೌಕರ ವರ್ಗದಲ್ಲಿ ಉಳಿತಾಯ ದೂರದ ಮಾತು. ಈಗ ಕಿಸೆ ಖಾಲಿ ಮಾಡಿಕೊಂಡು ದಾನಿಗಳು ಕೊಡುವ ಕಿಟ್​​ಗೆ ಕೈಚಾಚುವಂತಾಗಿದೆ.

ಲಾಕ್​ಡೌನ್ ಮುಗಿದರೂ ಸಾಮಾಜಿಕ ಅಂತರ ಇನ್ನೂ ಕೆಲ ತಿಂಗಳು ಅಥವಾ ಒಂದು ವರ್ಷ ಕಾಲ ಜಾರಿಯಲ್ಲಿರುತ್ತೆ. ಸಾಮಾಜಿಕ ಅಂತರ ಕಾಯ್ದುಕೊಂಡು ಬಸ್ಸು ಓಡಿಸಲು ಸಾಧ್ಯವೇ ಹೇಳಿ? ಹಾಗಾಗಿ ತಮ್ಮ ಭವಿಷ್ಯದ ಬಗ್ಗೆ ಇವರಿಗೆ ಅನಿಶ್ಚಿತತೆ ಕಾಡುತ್ತಿದೆ.

Last Updated : May 9, 2020, 12:20 AM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.