ETV Bharat / state

ಗೋಮಾಳ ಭೂಮಿ ರಕ್ಷಣೆಗಾಗಿ ಪೇಜಾವರ ಶ್ರೀಗಳ ಪಣ - cow

ಉಡುಪಿ ಜಿಲ್ಲೆಯೊಂದರಲ್ಲೇ 233 ಗ್ರಾಮಗಳಲ್ಲಿ 3,000 ಎಕರೆ ಗೋಮಾಳ ಭೂಮಿಯಿದೆ. ಇದನ್ನು ಆಯಾ ಗೋವುಗಳ ರಕ್ಷಣೆಗಾಗಿ ಹಾಗೂ ಗೋವುಗಳ ಪಾಲನೆಗಾಗಿ ನೀಡಬೇಕು ಅಂತಾ ಗೋ ಹಿತರಕ್ಷಣಾ ಒಕ್ಕೂಟ ಒತ್ತಾಯಿಸಿದೆ..

pejawara vishwa prasanna swamiji and his group trying to save gomala land
ಗೋಮಾಳ ಭೂಮಿ ರಕ್ಷಣೆಗಾಗಿ ಪೇಶಾವರ ಶ್ರೀಗಳ ಪಣ
author img

By

Published : Oct 8, 2021, 3:19 PM IST

Updated : Oct 8, 2021, 4:34 PM IST

ಉಡುಪಿ : ಪ್ರಸ್ತುತ ದೇಶಿ ತಳಿಯ ಗೋವುಗಳು ತುಂಬಾ ವಿರಳ. ಹೀಗಾಗಿ, ಅಳಿವಿನಂಚಿನಲ್ಲಿರುವ ದೇಶಿ ಗೋವುಗಳ ಉಳಿವಿಗಾಗಿ ಪರಭಾರೆ ಆದ ಗೋಮಾಳ ಭೂಮಿಯ ರಕ್ಷಣೆಗಾಗಿ ಪೇಜಾವರ ಶ್ರೀಗಳ ನೇತೃತ್ವದಲ್ಲಿ ವಿಶೇಷ ಪ್ರಯತ್ನ ಕರಾವಳಿಯಲ್ಲಿ ಶುರುವಾಗಿದೆ.

ಇತ್ತೀಚಿನ ವರ್ಷಗಳಲ್ಲಿ ದೇಸಿ ಗೋವುಗಳ ಸಂಖ್ಯೆ ವಿರಳವಾಗಿದೆ. ದೊಡ್ಡ ಮಟ್ಟದಲ್ಲಿ ಉದ್ಯಮವಾಗಿ ವಿದೇಶಿ ಗೋವುಗಳನ್ನು ಸಾಕಾಣಿಕೆ ಮಾಡಲಾಗುತ್ತಿದೆ. ಇದಕ್ಕೆ ಕಾರಣ ಹಲವಾರು. ಹಿಂದೆ ಗ್ರಾಮಗಳಲ್ಲಿ ಗೋವುಗಳಿಗೆ ಗೋಮಾಳದ ಜಾಗದಲ್ಲಿ ಹುಲ್ಲು ಯಥೇಚ್ಛ ಸಿಗುತ್ತಿತ್ತು.

ಆದ್ರೆ, ಇತ್ತೀಚಿನ ವರ್ಷಗಳಲ್ಲಿ ಗೋಮಾಳ ಜಾಗ ಪರಭಾರೆ ಆಗುತ್ತಿವೆ. ಕೆಲ ಗ್ರಾಮದಲ್ಲಿ ಗೋಮಾಳದ ಜಾಗ ಬೇರೆ-ಬೇರೆ ಉದ್ದೇಶಕ್ಕೆ ಬಳಕೆಯಾಗುತ್ತಿದೆ. ಹೀಗಾಗಿ, ಗೋಮಾಳ ಜಾಗವನ್ನು ಊರಿನಲ್ಲಿ ಗೋ ಸಾಕಣೆ ಮಾಡುವವರಿಗೆ, ಗೋ ಶಾಲೆಗಳಿಗೆ ನೀಡಬೇಕು ಅಂತಾ ಪೇಜಾವರ ವಿಶ್ವಪ್ರಸನ್ನ ತೀರ್ಥರು ಆಗ್ರಹಿಸಿದ್ದಾರೆ.

ಗೋಮಾಳ ಭೂಮಿ ರಕ್ಷಣೆಗಾಗಿ ಪೇಶಾವರ ಶ್ರೀಗಳ ಪಣ

ಬ್ರಿಟಿಷರ ಕಾಲದಲ್ಲೂ ಗೋಮಾಳ ಜಾಗ ಗೋಮಾಳ ಆಗಿಯೇ ಉಳಿದಿತ್ತು.‌ ಆದ್ರೆ, ನಂತರದಲ್ಲಿ ಗೋಮಾಳ ಬೇರೆ-ಬೇರೆ ಉದ್ದೇಶಕ್ಕೆ ಯಾಕೆ ಬಳಸಲಾಗುತ್ತಿದೆ ಅಂತಾ ಪೇಜಾವರ ವಿಶ್ವ ಪ್ರಸನ್ನ ತೀರ್ಥರು ಸರ್ಕಾರವನ್ನು ಪ್ರಶ್ನಿಸಿದ್ದಾರೆ.

ಇದನ್ನೂ ಓದಿ: ಶೃಂಗೇರಿ ಶಾರದಾ ಪೀಠಕ್ಕೆ ರಾಷ್ಟ್ರಪತಿಗಳ ಭೇಟಿ; ಶಾರದಾಂಬೆಗೆ ನವರಾತ್ರಿ ವಿಶೇಷ ಪೂಜೆ

ಉಡುಪಿ ಜಿಲ್ಲೆಯೊಂದರಲ್ಲೇ 233 ಗ್ರಾಮಗಳಲ್ಲಿ 3,000 ಎಕರೆ ಗೋಮಾಳ ಭೂಮಿಯಿದೆ. ಇದನ್ನು ಆಯಾ ಗೋವುಗಳ ರಕ್ಷಣೆಗಾಗಿ ಹಾಗೂ ಗೋವುಗಳ ಪಾಲನೆಗಾಗಿ ನೀಡಬೇಕು ಅಂತಾ ಗೋ ಹಿತರಕ್ಷಣಾ ಒಕ್ಕೂಟ ಒತ್ತಾಯಿಸಿದೆ.

ಗ್ರಾಮಗಳ ಗೋಮಾಳವನ್ನು ಗೋವುಗಳನ್ನು ಪಾಲನೆ ಮಾಡಲು, ಮೇವಿನ ಉದ್ದೇಶಕ್ಕೆ ವ್ಯವಸ್ಥಿತವಾಗಿ ನೀಡಿಲು ಯೋಜನೆ ರೂಪಿಸಿದೆ. ಪೇಜಾವರ ಶ್ರೀಗಳ ಮಾರ್ಗದರ್ಶನದಲ್ಲಿ ಒಕ್ಕೂಟ ಕಾರ್ಯಪ್ರವೃತ್ತವಾಗಿದೆ.

ಲಾಕ್​ಡೌನ್ ಬಳಿಕ ಉದ್ಯೋಗ ಕಳೆದುಕೊಂಡ ಅನೇಕ ಯುವಕರು ಊರು ಸೇರಿ ತಮ್ಮನ್ನು ಹೈನುಗಾರಿಕೆಯಲ್ಲಿ ತೊಡಗಿಸಿಕೊಂಡಿದ್ದಾರೆ. 5 ಅಥವಾ 10 ಸೆಂಟ್ಸ್ ‌ಜಾಗದಲ್ಲಿ ಮೇವಿನ ಸಮಸ್ಯೆ ದೊಡ್ಡದಾಗಿ ಕಾಡುತ್ತಿದೆ. ಇಂತಹವರಿಗೆ ಶ್ರೀಗಳ ಯೋಚನೆ, ಯೋಜನೆ ಕಾರ್ಯಗತವಾದ್ರೆ ಅವರ ಜೀವನಕ್ಕೂ ಆಧಾರವಾದೀತು..

Last Updated : Oct 8, 2021, 4:34 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.