ಉಡುಪಿ : ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥರು ಇಂದು ಕಿರು ಪಾದಯಾತ್ರೆ ನಡೆಸಿದರು.
ಪಾದಯಾತ್ರೆ ಮೂಲಕವೇ ಗುರುತಿಸಿಕೊಂಡಿರುವ ವಿಶ್ವಪ್ರಸನ್ನ ತೀರ್ಥ ಶ್ರೀಗಳು, ಕಳೆದ ಐದು ವರ್ಷಗಳಿಂದ ನೀಲಾವರ ಗೋಶಾಲೆವರೆಗೆ ಪಾದಯಾತ್ರೆ ಮಾಡುವ ಸಂಪ್ರದಾಯ ಇರಿಸಿಕೊಂಡಿದ್ದಾರೆ. ಅದಕ್ಕೂ ಮುನ್ನ 27 ವರ್ಷಗಳ ಕಾಲ ಉತ್ತರಭಾರತದ ವಿವಿಧ ಧಾರ್ಮಿಕ ಕೇಂದ್ರಗಳಿಗೆ ಪಾದಯಾತ್ರೆ ಕೈಗೊಂಡು ಗಮನ ಸೆಳೆದಿದ್ದರು.
ಆಚಾರ್ಯ ಮಧ್ವರ ಶಿಷ್ಯ ಪರಂಪರೆಯಲ್ಲಿ ಬರುವ ಪೇಜಾವರ ಮಠಾಧೀಶರು ಮಧ್ವಾಚಾರ್ಯರಂತೆಯೇ ಧರ್ಮ ಜಾಗೃತಿಗಾಗಿ ಪಾದಯಾತ್ರೆ ನಡೆಸುತ್ತಾ ಬಂದಿದ್ದಾರೆ. ಉಡುಪಿಯ ಕೃಷ್ಣ ಮಠದ ಆವರಣದಲ್ಲಿರುವ ಪೇಜಾವರ ಮಠದಿಂದ ಭಕ್ತರ ಜೊತೆ ನೀಲಾವರ ಗೋಶಾಲೆಯವರೆಗೂ ನಡೆದು ಸಾಗಿದರು. ಬಳಿಕ ಕಾಳೀಯಮರ್ಧನ ಕೃಷ್ಣನಿಗೆ ವಿಶೇಷ ಪೂಜೆ ಸಲ್ಲಿಸಿದ್ದಾರೆ.