ಉಡುಪಿ: ರಾಜ್ಯ ಮದ್ಯ ಮಾರಾಟಗಾರರ ಬೇಡಿಕೆಗಳಿಗೆ ಸರ್ಕಾರ ಸ್ಪಂದಿಸುತ್ತಿಲ್ಲ ಎಂದು ಮದ್ಯ ಮಾರಾಟಗಾರರು ಒಂದು ದಿನದ ಪರ್ಮಿಟ್ ಚಳುವಳಿ ನಡೆಸುತ್ತಿದ್ದಾರೆ. ಅಂದರೆ ಒಂದು ದಿನ ಯಾವುದೇ ಮಾರಾಟಗಾರರು ಮದ್ಯ ಖರೀದಿ ಮಾಡುವುದಿಲ್ಲ ಎಂದು ನಿರ್ಧರಿಸಿದ್ದಾರೆ.
ಕೊರೊನಾ ಬಂದ ನಂತರ ಮದ್ಯ ಉದ್ಯಮ ಅವನತಿಯತ್ತ ಸಾಗುತ್ತಿದೆ. ಆದರೂ ಸರ್ಕಾರಕ್ಕೆ ನೀಡಿದ ಮನವಿಗಳೆಡೆಗೆ ಅಬಕಾರಿ ಇಲಾಖೆ ಗಮನ ಹರಿಸುತ್ತಿಲ್ಲ. ಇದರಿಂದ ಅನಿವಾರ್ಯವಾಗಿ ಒಂದು ದಿನದ ಮಟ್ಟಿಗೆ ಮದ್ಯ ಖರೀದಿಯನ್ನು ಸ್ಥಗಿತಗೊಳಿಸುವುದಾಗಿ ಮರ್ಚೆಂಟ್ ಅಸೋಸಿಯೇಷನ್ ಪ್ರಧಾನ ಕಾರ್ಯದರ್ಶಿ ಗೋವಿಂದರಾಜ ಹೆಗ್ಡೆ ತಿಳಿದ್ದಾರೆ.
ಆನ್ಲೈನ್ ಮದ್ಯ ಮಾರಾಟದ ಪ್ರಸ್ತಾಪವನ್ನು ಕೈಬಿಟ್ಟ ಬಗ್ಗೆ ಅಧಿಕೃತವಾಗಿ ಘೋಷಿಸಬೇಕು. ಹೊಸದಾಗಿ ಎಂಎಸ್ಐಎಲ್ ಮಳಿಗೆಗಳನ್ನು ತೆರೆಯುವುದನ್ನು ತಡೆಹಿಡಿಯಬೇಕು. ಕೊರೊನಾ ಲಾಕ್ಡೌನ್ ಸಂದರ್ಭದಲ್ಲಿ ಸನ್ನದುದಾರರಿಗೆ ಆಗಿರುವ ನಷ್ಟಕ್ಕೆ ಪರಿಹಾರ ನೀಡಬೇಕು. ಅಬಕಾರಿ ಇಲಾಖೆ ಅಧಿಕಾರಿಗಳು ಲಂಚಕ್ಕಾಗಿ ಸನ್ನದುದಾರರಿಗೆ ತೊಂದರೆ ನೀಡಕೂಡದು. ಕೊರೊನಾ ಸಂದರ್ಭದಲ್ಲಿ ಹೆಚ್ಚಳ ಮಾಡಿರುವ ಹೆಚ್ಚುವರಿ ಅಬಕಾರಿ ಶುಲ್ಕವನ್ನು ಕಡಿಮೆ ಮಾಡಬೇಕು ಎಂದು ಒತ್ತಾಯಿಸಿ ಸರ್ಕಾರದ ಮುಂದೆ ಈ ಚಳುವಳಿಯ ಮೂಲಕ ಆಗ್ರಹಿಸುತ್ತಿದ್ದಾರೆ.