ಉಡುಪಿ: ಮದುವೆಯಾಗಿ ಹನಿಮೂನ್‌ಗೆ ಹೋಗುವುದನ್ನು ಬಿಟ್ಟು ಸೋಮೇಶ್ವರ ಬೀಚ್ ಸ್ವಚ್ಛಗೊಳಿಸಿದ ಜೋಡಿಯನ್ನು ಪ್ರಧಾನಿ ನರೇಂದ್ರ ಮೋದಿ ಮನ್ ಕೀ ಬಾತ್ನಲ್ಲಿ ಪ್ರಶಂಸಿಸಿದ್ದು, ಬಿಜೆಪಿ ವತಿಯಿಂದ ಸನ್ಮಾನಿಸಲಾಯಿತು.
-
Anudeep & his wife made their first pledge after marriage. Together they cleaned up a lot of garbage on the sea coast. You will be surprised to know together they have cleaned more than 800 kg of waste from Someshwar beach: PM @narendramodi #MannKiBaat
— MyGovIndia (@mygovindia) December 27, 2020 " class="align-text-top noRightClick twitterSection" data="
">Anudeep & his wife made their first pledge after marriage. Together they cleaned up a lot of garbage on the sea coast. You will be surprised to know together they have cleaned more than 800 kg of waste from Someshwar beach: PM @narendramodi #MannKiBaat
— MyGovIndia (@mygovindia) December 27, 2020Anudeep & his wife made their first pledge after marriage. Together they cleaned up a lot of garbage on the sea coast. You will be surprised to know together they have cleaned more than 800 kg of waste from Someshwar beach: PM @narendramodi #MannKiBaat
— MyGovIndia (@mygovindia) December 27, 2020
ಉಡುಪಿ ಜಿಲ್ಲೆಯ ಬೈಂದೂರು ನಿವಾಸಿಗಳಾಗಿರೋ ಅನುದೀಪ್ ಹಾಗೂ ಮಿನುಷಾ ದಂಪತಿ, ಇದೀಗ ಬೆಂಗಳೂರಿನಲ್ಲಿ ಒಳ್ಳೆ ಉದ್ಯೋಗ ಮಾಡ್ತಿದ್ದಾರೆ. ಡಿಜಿಟಲ್ ಮಾರ್ಕೆಟಿಂಗ್ ಕ್ಷೇತ್ರದಲ್ಲಿ ಉದ್ಯೋಗದಲ್ಲಿರೋ ಅನುದೀಪ್ ಹೆಗಡೆ ಹಾಗೂ ಫಾರ್ಮಾಸುಟಿಕಲ್ ಉದ್ಯೋಗ ಮಾಡುತ್ತಿರೋ ಮಿನುಷಾ ಮದುವೆ ಹಿನ್ನೆಲೆಯಲ್ಲಿ ಕಳೆದ ತಿಂಗಳು ಊರಿಗೆ ಬಂದಿದ್ರು. ನವೆಂಬರ್ 18ರಂದು ಇವರಿಬ್ಬರಿಗೆ ಮದುವೆ ಕೂಡ ನಿಶ್ಚಯವಾಗಿತ್ತು. ಮದುವೆ ಅನ್ನೋದು ಮೆಮೋರಬಲ್ ಆಗಿರಬೇಕೆಂದು ಮದುವೆಗೆ ಮೊದಲೇ ನಿಶ್ಚಯಿಸಿದ ಈ ಜೋಡಿ ಮದುವೆ ಆದ ಬಳಿಕ ಹನಿಮೂನ್ ಹೋಗೋ ಮೊದಲು ತಮ್ಮೂರಿನ ಸೋಮೇಶ್ಚರ ಬೀಚ್ ಕ್ಲೀನ್ ಮಾಡಲು ನಿರ್ಧರಿಸಿದೆ. ಮದುವೆ ಆದ ನಂತರ ಏಳು ದಿನಗಳ ಕಾಲ ಬೀಚ್ ಕ್ಲೀನ್ ಮಾಡಿ 800 ಕೆಜಿಯಷ್ಟು ಕಸ ಸಂಗ್ರಹ ಮಾಡಿದ್ರು. ಈ ನವವಿವಾಹಿತ ಜೋಡಿಯ ಕಳಕಳಿ ಕಂಡ ಊರಿನ ಯುವಪಡೆ ಸಾಥ್ ಕೂಡ ಕೊಟ್ಟು ಬೇಷ್ ಕೂಡ ಹೇಳಿದ್ರು. ಇದೀಗ ಪ್ರಧಾನಿಯೇ ಈ ಜೋಡಿಯ ಕೆಲಸಕ್ಕೆ ಭೇಷ್ ಅಂದಿದ್ದಾರೆ.
ಇದನ್ನು ಓದಿ: ಸಮುದ್ರ ತೀರದಲ್ಲಿ ನವ ದಂಪತಿ: ಹನಿಮೂನ್ ಬಿಟ್ಟು ಬೀಚ್ ಸ್ವಚ್ಛಗೊಳಿಸಿದ ಜೋಡಿ..!
ಹೌದು, ಪ್ರಧಾನಿ ಮೋದಿಯವರು ಈ ವರ್ಷದ ಕೊನೆಯ ಮನ್ ಕಿ ಬಾತ್ನಲ್ಲಿ ಬೈಂದೂರಿನ ಈ ಜೋಡಿಯ ಸ್ವಚ್ಛತಾ ಕಳಕಳಿಗೆ ಶ್ಲಾಘನೆ ವ್ಯಕ್ತಪಡಿಸಿದ್ದಾರೆ. ವಿವಾಹವಾದ ಹೊಸತರಲ್ಲಿ ಸುತ್ತಾಡುವ ಈ ಕಾಲದಲ್ಲಿ ಈ ಜೋಡಿ ಬೀಚ್ ಸ್ವಚ್ಛತೆ ಮಾಡಿರುವುದು ಖುಷಿ ತಂದಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಪ್ರಧಾನಿ ಮೋದಿ ಶ್ಲಾಘನೆ ಬೆನ್ನಲ್ಲೇ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ಅನುದೀಪ್-ಮಿನುಷಾ ಮನೆಗೆ ತೆರಳಿ ಹೂಮಾಲೆ ಹಾಕಿ ಸನ್ಮಾನ ಮಾಡಿದ್ದಾರೆ.