ಉಡುಪಿ: ವಿಜಯೇಂದ್ರ ದೆಹಲಿಗೆ ಹೋಗಿದ್ದು ವೈಯಕ್ತಿಕ ಕೆಲಸದ ಮೇಲೆ. ಅವರ ದೆಹಲಿ ಪ್ರವಾಸದ ಬಗ್ಗೆ ಎದ್ದಿರುವ ಚರ್ಚೆಗಳು ಊಹಾಪೋಹ ಎಂದು ಸಂಸದ ಬಿ.ವೈ.ರಾಘವೇಂದ್ರ ಹೇಳಿದ್ದಾರೆ.
ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಪಕ್ಷದ ಉಪಾಧ್ಯಕ್ಷರಾದವರು ಹಿರಿಯರನ್ನು ಭೇಟಿ ಮಾಡುವುದು ಸಹಜ. ಬಿಜೆಪಿ ಪಕ್ಷ ನಮ್ಮ ತಂದೆಯನ್ನು ಮುಖ್ಯಮಂತ್ರಿಯನ್ನಾಗಿ ಮಾಡಿದೆ. ನನ್ನನ್ನು ಎಂಪಿ, ಸಹೋದರರನ್ನು ಉಪಾಧ್ಯಕ್ಷರಾಗಿ ಮಾಡಿದೆ. ವಿಜಯೇಂದ್ರ ಅವರನ್ನು ಡಿಸಿಎಂ, ರಾಜ್ಯಾಧ್ಯಕ್ಷ ಮಾಡುತ್ತಾರೆಂಬುದು ತಪ್ಪು ಕಲ್ಪನೆ. ಕೊನೆಯುಸಿರು ಇರುವ ತನಕ ಪಕ್ಷದಲ್ಲಿ ಕಾರ್ಯಕರ್ತನಾಗಿ ಕೆಲಸ ಮಾಡುತ್ತೇನೆ ಎಂದು ಸಿಎಂ ಹೇಳಿದ್ದಾರೆ. ಪಕ್ಷದಲ್ಲಿ ಅವರದ್ದೇ ಆದ ಸಾಮರ್ಥ್ಯ ಇರುತ್ತದೆ. ಯಾರನ್ನು ಗುರುತಿಸಬೇಕು ಎಂದು ಪಕ್ಷಕ್ಕೆ ಗೊತ್ತಿದೆ. ಈ ಚೌಕಟ್ಟಿನಲ್ಲಿ ಸಿಎಂ ಮಾತನಾಡಿದ್ದಾರೆ. ಸಿಎಂ ಮಾತಿಗೆ ಬೇರೆ ಅರ್ಥ ಕಲ್ಪಿಸುವುದು ಬೇಡ ಎಂದರು.
ಪೆಟ್ರೋಲ್ ದರ ಏರಿಕೆ ಬಗ್ಗೆ ಪ್ರತಿಕ್ರಿಯಿಸಿ, ಜಿಎಸ್ಟಿ, ರಾಜ್ಯದ ಸುಂಕ, ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿನ ಏರುಪೇರು ಪೆಟ್ರೋಲ್ ದರ ಏರಿಕೆಗೆ ಕಾರಣವಾಗಿದೆ. ಸಂಕಷ್ಟದ ಸಂದರ್ಭ ಎದುರಿಸುತ್ತಿದ್ದೇವೆ. ಕೇಂದ್ರ ಹಾಗು ರಾಜ್ಯಕ್ಕೆ ಬರಬೇಕಾದ ತೆರಿಗೆಯಲ್ಲಿ ಸಾಕಷ್ಟು ತೊಂದರೆಯಾಗಿದೆ. ರಾಜ್ಯದಲ್ಲಿ ದಿನಬಳಕೆ ವಸ್ತುಗಳ ಬೆಲೆಯಂತೆ ಪೆಟ್ರೋಲ್ ದರವು ಹೆಚ್ಚಾಗಿದೆ. ಪರಿಸ್ಥಿತಿ ಹತೋಟಿಗೆ ಬರುವುದನ್ನು ನಾವು ಕಾಯುತ್ತಿದ್ದೇವೆ. ಅಂತರರಾಷ್ಟ್ರೀಯ ಮಾರುಕಟ್ಟೆ ಒತ್ತಡದಿಂದ ರಸಗೊಬ್ಬರ ಬೆಲೆ ಹೆಚ್ಚಾಗಿತ್ತು. ಇದೀಗ ಕೇಂದ್ರ ರೈತರಿಗೆ 20 ಸಾವಿರ ಕೋಟಿ ಸಬ್ಸಿಡಿ ಭರಿಸಿದ್ದು, ಹಳೆ ದರದಲ್ಲಿ ರಸಗೊಬ್ಬರ ವಿತರಣೆಯಾಗುತ್ತಿದೆ ಎಂದರು.
ಇದನ್ನೂ ಓದಿ: ಸಿಸಿಬಿ ಪೊಲೀಸರಿಂದ ಐಷಾರಾಮಿ ಕಾರು ಮಾರಾಟ ಪ್ರಕರಣ: ಸಿಐಡಿ ತನಿಖೆ ಚುರುಕು