ಉಡುಪಿ: ಚಂಡಮಾರುತದಿಂದ ನಿನ್ನೆ ಕಡಲಿನ ಅಬ್ಬರಕ್ಕೆ ಸಿಲುಕಿದ ಮತ್ತೊಂದು ಬೋಟ್ ಪತ್ತೆಯಾಗಿದೆ. ಕಾಪು ಬೀಚ್‌ನಿಂದ 25 ನಾಟಿಕಲ್ ಮೈಲ್ ದೂರದಲ್ಲಿ ಕಾಣಿಸಿಕೊಂಡ ಬೋಟ್‌ನಲ್ಲಿ 9 ಮಂದಿ ಸುರಕ್ಷಿತವಾಗಿದ್ದಾರೆ.
ಬೋಟ್ನಲ್ಲಿರುವ 9 ಮಂದಿ ರಕ್ಷಣೆಗಾಗಿ ಸೆಲ್ಫಿ ವಿಡಿಯೋ ಮಾಡಿ ಕೋಸ್ಟ್ ಗಾರ್ಡ್ ಸಿಬ್ಬಂದಿಗೆ ಕಳುಹಿಸಿದ್ದಾರೆ. ಕಡಲ ಅಲೆಗಳ ಅಬ್ಬರದಿಂದ ರಕ್ಷಣಾ ಕಾರ್ಯಾಚರಣೆಗೆ ತೊಂದರೆ ಉಂಟಾಗಿದೆ. ಸಮುದ್ರದ ಅಲೆಗಳ ಅಬ್ಬರ ಕಡಿಮೆಯಾದ ಬಳಿಕ ರಕ್ಷಣಾ ಕಾರ್ಯಾಚರಣೆ ನಡೆಸಲಾಗುವುದು ಅಂತಾ ಕೋಸ್ಟ್ ಗಾರ್ಡ್ ಸಿಬ್ಬಂದಿ ಹೇಳಿದ್ದಾರೆ.
ಸ್ಥಳಕ್ಕೆ ಜಿಲ್ಲಾಧಿಕಾರಿ ಜಿ. ಜಗದೀಶ್, ಎಸ್‌ಪಿ ಎಸ್.ವಿಷ್ಣುವರ್ಧನ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಇದನ್ನೂ ಓದಿ: ತೌಕ್ತೆ ಚಂಡಮಾರುತ ಎಫೆಕ್ಟ್: ಕರಾವಳಿ ಭಾಗಕ್ಕೆ ವಿಪತ್ತು ನಿರ್ವಹಣಾ ಉಪಕರಣಗಳ ರವಾನೆ