ಉಡುಪಿ: ಆರೋಗ್ಯ ಇಲಾಖೆಯಲ್ಲಿ ಇನ್ನು ಮುಂದೆ ಪ್ರತೀ ಬುಧವಾರ ಇನ್ಸ್ಪೆಕ್ಷನ್ ಡೇ ಆಗಲಿದೆ, ನಿತ್ಯ ಡೈರಿ ಬರೆಯುವ ಹೊಸ ನಿಯಮ ಘೋಷಣೆ ಮಾಡಲಾಗಿದೆ ಅಂತಾ ಸಚಿವ ಕೆ ಸುಧಾಕರ್ ಹೇಳಿದ್ದಾರೆ.
ಉಡುಪಿಯಲ್ಲಿ ಈ ಬಗ್ಗೆ ಫರಮಾನು ಹೊರಡಿಸಿದ ಸಚಿವ ಸುಧಾಕರ್ ಮುಂದಿನ ವಾರದಿಂದ ಪ್ರತಿ ಬುಧವಾರ ಇನ್ಸ್ಪೆಕ್ಷನ್ ಡೇ ಘೋಷಣೆ ಮಾಡುತ್ತಿದ್ದೇನೆ. ಮಂತ್ರಿಗಳಿಂದ ವೈದ್ಯರವರೆಗೂ ಅವರವರ ಕಾರ್ಯ ವ್ಯಾಪ್ತಿ ಕ್ಷೇತ್ರಕ್ಕೆ ಭೇಟಿ ನೀಡಿ ಗುಣಮಟ್ಟ ಹೆಚ್ಚಿಸಬೇಕು. ಕಾರ್ಯಕ್ಷಮತೆ ಉನ್ನತಮಟ್ಟಕ್ಕೆ ತೆಗೆದುಕೊಂಡು ಹೋಗಬೇಕು. ನಿತ್ಯ ಡೈರಿ ಬರೆಯಬೇಕು ಈ ನಿಟ್ಟಿನಲ್ಲಿ ಫರಮಾನು ಹೊರಡಿಸಲಾಗಿದೆ ಎಂದು ಅವರು ಹೇಳಿದರು.
ಪ್ರಧಾನ ಕಾರ್ಯದರ್ಶಿ, ಆಯುಕ್ತರು, ಡಿಎಚ್ಓ ಸೇರಿ ಎಲ್ಲರೂ ಡೈರಿ ಬರೆಯಬೇಕು. ಏನೇನು ಕೆಲಸ ಕಾರ್ಯ ಮಾಡಿದ್ದಾರೆ ಎಂಬುದನ್ನ ಬರೆದಿಡಬೇಕು. ಈ ಡೈರಿ ಮೇಲೆ ವೇತನ ಭತ್ಯೆ, ಪ್ರಮೋಶನ್ ಸೇರಿ ಮಾರ್ಕ್ಸ್ ನೀಡಲಾಗುತ್ತೆ. ಆರೋಗ್ಯ ಕ್ಷೇತ್ರದಲ್ಲಿ ಸುಧಾರಣೆ ತರುವ ಯತ್ನ ಮಾಡಲಾಗಿದೆ. ಖಾಸಗಿ ವ್ಯವಸ್ಥೆಯಿಂದ ಉತ್ತಮವಾಗಿ ಕೆಲಸ ಮಾಡಬೇಕು ಅನ್ನೋದು ಕಾಯಕಲ್ಪ. ಮುಂದಿನ 60-90 ದಿನ ಸವಾಲಿನ ದಿನಗಳಾಗಿದೆ. ಪಾಸಿಟಿವ್ ರೇಟ್ ಕಡಿಮೆ ಇಟ್ಟುಕೊಳ್ಳಲೇಬೇಕು. ಒಬ್ಬ ಪಾಸಿಟಿವ್ ವ್ಯಕ್ತಿ ಯ 20-30 ಮಂದಿ ಪ್ರಾಥಮಿಕ ಹಾಗೂ ದ್ವಿತೀಯ ಸಂಪರ್ಕಿತರನ್ನ ಹುಡುಕಬೇಕೆನ್ನುವ ಸೂಚನೆ ನೀಡಿದ್ದೇನೆ. ಏ.1ರಿಂದ 45ವರ್ಷ ಮೇಲ್ಪಟ್ಟ ವರಗೆ ಕಡ್ಡಾಯ ಲಸಿಕೆ ನೀಡಲಾಗುವುದು. ಮನೆಯಲ್ಲಿರುವ ಪೋಷಕರು ಹಿರಿಯರಿಗೆ ಲಸಿಕೆ ಕೊಡಿಸಿ, ಲಸಿಕೆ ನೀಡಿದ ಚಿತ್ರ ಸಾಮಾಜಿಕ ಜಾಲತಾಣದಲ್ಲಿ ಹಂಚುವ ಕಾರ್ಯಕ್ರಮ ಜಾರಿಗೆ ತರಲಾಗುತ್ತೆ ಎಂದರು.
2 ಸಾವಿರಕ್ಕೂ ಹೆಚ್ಚು ವೈದ್ಯರ ನೇರ ನೇಮಕಾತಿ ನಡೆಯುತ್ತಿದೆ. ರಾಜ್ಯದ ಎಲ್ಲಾ ಸರ್ಕಾರಿ ಆಸ್ಪತ್ರೆಯಲ್ಲಿ ಇನ್ನು ಮುಂದೆ ವೈದ್ಯರ ಕೊರತೆ ಇರುವುದಿಲ್ಲ ಅಂತಾ ವೈದ್ಯಕೀಯ ಶಿಕ್ಷಣ, ಆರೋಗ್ಯ ಸಚಿವ ಡಾ.ಕೆ ಸುಧಾಕರ್ ಹೇಳಿದ್ದಾರೆ.