ಉಡುಪಿ: ಬಿಜೆಪಿ ನಾಯಕ ಜಗದೀಶ ಅಧಿಕಾರಿ ಅವರಿಂದ ಮಾಜಿ ಕೇಂದ್ರ ಸಚಿವ ಜನಾರ್ದನ ಪೂಜಾರಿ ಮತ್ತು ಬಿಲ್ಲವ ಸಮುದಾಯಕ್ಕೆ ಅವಮಾನವಾಗಿದೆ ಎಂಬ ಕಾರಣಕ್ಕೆ ಕರಾವಳಿಯಾದ್ಯಂತ ಸಾಕಷ್ಟು ಗೊಂದಲ ಉಂಟಾಗಿತ್ತು, ಈ ಕುರಿತು ಸಚಿವ ಕೋಟ ಶ್ರೀನಿವಾಸ ಪೂಜಾರಿ ಪ್ರತಿಕ್ರಿಯಿಸಿದ್ದಾರೆ.
ವಿಷಯದ ಕುರಿತು ಯಾವುದೇ ಸಮಸ್ಯೆಯಾಗಿದ್ದರೂ ಕುಳಿತು ಬಗೆಹರಿಸುತ್ತೇವೆ. ಜನಾರ್ದನ ಪೂಜಾರಿ ಕೇವಲ ಬಿಲ್ಲವ ಸಮುದಾಯದ ನಾಯಕರಲ್ಲ. ಈ ದೇಶದಲ್ಲಿ ಅತ್ಯಂತ ಗೌರವಾನ್ವಿತ ರಾಜಕಾರಣಿ. ಬಡವರ ಬಗ್ಗೆ ಧ್ವನಿಯೆತ್ತುವ ಏಕೈಕ ಹಿರಿಯ ರಾಜಕಾರಣಿ. ಅವರ ಬಗ್ಗೆ ನಮಗೆ ವಿಶೇಷವಾದ ಪೂಜ್ಯತೆ ಧನ್ಯತೆಯ ಭಾವ ಇದೆ ಎಂದಿದ್ದಾರೆ.
ಇದನ್ನೂ ಓದಿ: ಏರ್ ಶೋನಲ್ಲಿ ಕನ್ನಡಕ್ಕೆ ಅವಮಾನ ಆಗಿದೆ : ಕರವೇ ಅಧ್ಯಕ್ಷ ಪ್ರವೀಣ್ ಶೆಟ್ಟಿ ಆರೋಪ
ಬಿಲ್ಲವ ಮಹಿಳೆಯರಿಗೆ ಶೂನ್ಯ ಬಡ್ಡಿ ದರದಲ್ಲಿ ಸಾಲ ನೀಡುವ ವಿಚಾರಕ್ಕೆ ಪ್ರತಿಕ್ರಿಯಿಸಿ, ನೇಕಾರರಿಗೆ, ಮೀನುಗಾರರಿಗೆ ನೀಡಿದಂತೆ ಬಿಲ್ಲವ ಸಮುದಾಯಕ್ಕೂ ನೀಡಬೇಕು ಎಂದು ಈಡಿಗ, ನಾಮದಾರಿ, ಬಿಲ್ಲವರು ಈ ಬಗ್ಗೆ ಒತ್ತಾಯಿಸಿದ್ದಾರೆ. ನಾರಾಯಣ ಗುರುಗಳ ಹೆಸರಲ್ಲಿ ನಿಗಮ ಮಾಡಬೇಕೆಂದು ಎಂಟು ಮಂದಿ ಜನಪ್ರತಿನಿಧಿಗಳು ಮನವಿ ಕೊಟ್ಟಿದ್ದಾರೆ. ಉಡುಪಿಗೆ ಸಿಎಂ ಬಂದಾಗ ಈ ಬಗ್ಗೆ ಮನವಿ ನೀಡಿದ್ದೇವೆ. ಇದರ ವಿರುದ್ಧ ಯಾರ್ಯಾರು ಹೇಳಿಕೆ ಕೊಟ್ಟಿದ್ದಾರೋ ಕಾನೂನು ಕ್ರಮ ಕೈಗೊಳ್ಳುತ್ತದೆ ಎಂದು ತಿಳಿಸಿದರು.