ಉಡುಪಿ : ಕೇಂದ್ರ ಸರ್ಕಾರ, ಬಿಜೆಪಿ ಪಕ್ಷ ಸಮಾಜಮುಖಿ ಕಾರ್ಯಕ್ಕೆ ಮಾನ್ಯತೆ ಕೊಡುತ್ತದೆ. ದಲ್ಲಾಳಿಗಳಿಂದ ಮುಕ್ತ ಮಾಡುವುದು ಎಪಿಎಂಸಿ ಕಾಯ್ದೆ ಉದ್ದೇಶ ಎಂದು ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದ್ದಾರೆ.
ರೈತರ ಬೆಂಬಲಕ್ಕೆ ಈ ಕಾಯ್ದೆ ಜಾರಿಗೆ ತರಲಾಗಿದೆ. ವಿರೋಧಿಗಳು ಗೊಂದಲವನ್ನು ನಿರ್ಮಾಣ ಮಾಡುತ್ತಿದ್ದಾರೆ. ಎಲ್ಲಾ ಗೊಂದಲಗಳಿಗೆ ಉತ್ತರ ಕೊಡುವ ಸಾಮರ್ಥ್ಯ ಬಿಜೆಪಿ ಮತ್ತು ಕೇಂದ್ರ ಸರ್ಕಾರಕ್ಕೆ ಇದೆ ಎಂದು ಹೇಳಿದ್ದಾರೆ.
ದೇವಸ್ಥಾನಗಳ ಸಂರಕ್ಷಣಾ ಕಾಯ್ದೆ ಜಾರಿ : ದೇವಸ್ಥಾನಗಳ ಸಂರಕ್ಷಣಾ ಕಾಯ್ದೆ ಜಾರಿ ಆಗಲಿದೆ. ಯಾವುದೇ ಧಾರ್ಮಿಕ ಕೇಂದ್ರಗಳನ್ನು ತರಾತುರಿಯಲ್ಲಿ ತೆಗೆಯುವುದಿಲ್ಲ. ರಾಜ್ಯದಲ್ಲಿ ಗೋಹತ್ಯೆ ನಿಷೇಧ ಕಾಯ್ದೆ ಜಾರಿಯಲ್ಲಿದೆ. ಸಂರಕ್ಷಣಾ ಕೇಂದ್ರ, ಗೋ ಶಾಲೆಗಳನ್ನು ಜಿಲ್ಲೆ ಮತ್ತು ತಾಲೂಕಿನಲ್ಲಿ ತೆರೆಯಲಾಗುತ್ತದೆ ಎಂದಿದ್ದಾರೆ.
ಗೋವುಗಳ ರಕ್ಷಣೆಗೆ ನಮ್ಮ ಸರ್ಕಾರ ಬದ್ಧ : ಪಶು ಸಂಗೋಪನಾ ಇಲಾಖೆ, ಧಾರ್ಮಿಕ ದತ್ತಿ ಇಲಾಖೆ ಕೆಲಸ ಮಾಡುತ್ತಿವೆ. ಗೋವುಗಳ ರಕ್ಷಣೆಗೆ ನಮ್ಮ ಸರ್ಕಾರ ಬದ್ಧವಾಗಿದೆ. ಗೋವು ರಕ್ಷಣೆಯಲ್ಲಿ ಅಧಿಕಾರಿಗಳು ಲೋಪ ಮಾಡಿದ್ದರೆ ಅದನ್ನು ಸರಿ ಮಾಡುತ್ತೇವೆ. ಗೋಹತ್ಯೆ ನಿಷೇಧ ಕಾಯ್ದೆ ಅನುಷ್ಠಾನ ಮಾಡುವಲ್ಲಿ ಲೋಪವಾಗಬಾರದು ಎಂದಿದ್ದಾರೆ.
ಅಲ್ಲಲ್ಲಿ ಗೋ ಶಾಲೆ ನಿರ್ಮಾಣಕ್ಕೆ ಜಾಗಗಳನ್ನು ಗೊತ್ತು ಮಾಡಲಾಗಿದೆ. ಮಠ-ಮಂದಿರಗಳು ನಡೆಸುತ್ತಿದ್ದರೆ ಅವರಿಗೆ ಶಕ್ತಿ ತುಂಬುವ ಕೆಲಸ ಮಾಡುತ್ತೇವೆ. ಈಗಾಗಲೇ ನೂರಕ್ಕೂ ಹೆಚ್ಚು ಗೋ ಶಾಲೆಗಳಿಗೆ ಅನುದಾನ ಬಿಡುಗಡೆ ಮಾಡಲಾಗಿದೆ ಎಂದು ತಿಳಿಸಿದ್ದಾರೆ.
ಓದಿ: ಭಾರತ ಬಂದ್ ಮಾಡಿರುವುದು ತಪ್ಪು ಕಲ್ಪನೆಯಿಂದ : ಬಿಜೆಪಿ ಎಂಎಲ್‌ಸಿ ಲಕ್ಷ್ಮಣ ಸವದಿ