ETV Bharat / state

ಮಲ್ಪೆಯ ಕೊಚ್ಚಿನ್​ ಶಿಪ್​ಯಾರ್ಡ್​ನಲ್ಲಿ ಉದ್ಯೋಗಾವಕಾಶ; ಪದವಿ ಆಗಿದ್ರೆ ಅರ್ಜಿ ಸಲ್ಲಿಸಿ - ವಿವಿಧ ಹುದ್ದೆಗಳ ಭರ್ತಿಗೆ ಅರ್ಜಿ

ಒಟ್ಟು 24 ಹುದ್ದೆಗಳ ಭರ್ತಿ ನಡೆಯಲಿದೆ. ​ವಿವಿಧ ಪದವೀಧರರು ಈ ಹುದ್ದೆಗೆ ಅರ್ಜಿ ಸಲ್ಲಿಸಬಹುದಾಗಿದೆ.

malpe cochin shipyard limited recruitment for various manager post

author img

By ETV Bharat Karnataka Team

Published : Sep 21, 2023, 5:30 PM IST

ಪದವೀಧರ ಉದ್ಯೋಗಾಕಾಂಕ್ಷಿಗಳಿಗೆ ಇಲ್ಲೊಂದು ಸಿಹಿ ಸುದ್ದಿ ಇದೆ. ಉಡುಪಿಯ ಮಲ್ಪೆ ಕೊಚ್ಚಿನ್​ ಶಿಪ್​ಯಾರ್ಡ್​​ ಲಿಮಿಟೆಡ್​​ನಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಲಾಗಿದೆ. ವಿವಿಧ ಮ್ಯಾನೇಜರ್​ ಹುದ್ದೆಗಳ ಭರ್ತಿಗೆ ನೇಮಕಾತಿ ನಡೆಯಲಿದೆ. ಒಟ್ಟು 24 ಹುದ್ದೆಗಳಿಗೆ ಆಯ್ಕೆ ಪ್ರಕ್ರಿಯೆ ನಡೆಯಲಿದೆ. ​ವಿವಿಧ ಪದವೀಧರರು ಈ ಹುದ್ದೆಗೆ ಅರ್ಜಿ ಸಲ್ಲಿಸಬಹುದಾಗಿದೆ. ಅರ್ಜಿ ಸಲ್ಲಿಕೆಗೆ ಕಡೆಯ ದಿನಾಂಕ ಅಕ್ಟೋಬರ್​ 8 ಆಗಿದೆ. ಈ ಹುದ್ದೆ ಕುರಿತಾದ ಸಂಪೂರ್ಣ ಮಾಹಿತಿ, ಅರ್ಜಿ ಸಲ್ಲಿಕೆ ಮತ್ತು ವೇತನ ಸೇರಿದಂತೆ ಇನ್ನಿತರ ಮಾಹಿತಿ ಇಲ್ಲಿದೆ..

ಹುದ್ದೆ ವಿವರ: ಮಲ್ಪೆಯ ಕೊಚ್ಚಿನ್​ ಶಿಪ್​ಯಾರ್ಡ್​ನಲ್ಲಿರುವ 24 ಹುದ್ದೆಗಳ ಭರ್ತಿ

ಅಧಿಸೂಚನೆ
ಅಧಿಸೂಚನೆ
  • ಅಸಿಸ್ಟೆಂಟ್​ ಜನರಲ್​ ಮ್ಯಾನೇಜರ್​ - 1
  • ಸೀನಿಯರ್​ ಮ್ಯಾನೇಜರ್​ - 1
  • ಮ್ಯಾನೇಜರ್​​ - 8
  • ಡೆಪ್ಯೂಟಿ ಮ್ಯಾನೇಜರ್ - 1
  • ಅಸಿಸ್ಟೆಂಟ್​ ಮ್ಯಾನೇಜರ್​​ - 12

ವಿದ್ಯಾರ್ಹತೆ:

  • ಅಸಿಸ್ಟೆಂಟ್​ ಜನರಲ್​ ಮ್ಯಾನೇಜರ್​: ಮೆಕಾನಿಕಲ್​, ಎಲೆಕ್ಟ್ರಾನಿಕ್​, ಎಲೆಕ್ಟ್ರಾನಿಕ್ಸ್ ಅಂಡ್​ ಕಮ್ಯೂನಿಕೇಷನ್​ ಇಂಜಿನಿಯರಿಂಗ್​ನಲ್ಲಿ ಪದವಿ
  • ಸೀನಿಯರ್​​ ಮ್ಯಾನೇಜರ್​​: ಪದವಿ ಅಥವಾ ಡಿಪ್ಲೊಮಾ
  • ಮ್ಯಾನೇಜರ್​​: ಮೆಕಾನಿಕಲ್​, ಎಲೆಕ್ಟ್ರಿಕಲ್​ ಇಂಜಿನಿಯರಿಂಗ್​ ಪದವಿ
  • ಡೆಪ್ಯೂಟಿ ಮ್ಯಾನೇಜರ್​​: ಸಿಎ, ಕೊಸ್ಟ್​ ಮ್ಯಾನೇಜ್​ಮೆಂಟ್​ ಅಕೌಂಟೆಟ್​​
  • ಅಸಿಸ್ಟೆಂಟ್​​​ ಮ್ಯಾನೇಜರ್​​: ಮೆಕಾನಿಕಲ್​, ಎಲೆಕ್ಟ್ರಿಕಲ್​ ಇಂಜಿನಿಯರ್​​

ವಯೋಮಿತಿ: ಈ ಹುದ್ದೆಗೆ ಅಭ್ಯರ್ಥಿಗಳು 30 ರಿಂದ 45 ವರ್ಷದೊಳಗಿನ ವಯೋಮಿತಿ ಹೊಂದಿರಬೇಕು. ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಅಭ್ಯರ್ಥಿಗಳಿಗೆ 5 ವರ್ಷ, ಒಬಿಸಿ ಅಭ್ಯರ್ಥಿಗಳಿಗೆ 3 ವರ್ಷ ಮತ್ತು ವಿಕಲಚೇತನ ಅಭ್ಯರ್ಥಿಗಳಿಗೆ 10 ವರ್ಷ ವಯೋಮಿತಿ ಸಡಿಲಿಕೆ ಮಾಡಲಾಗಿದೆ.

ವೇತನ: ಈ ಹುದ್ದೆಗಳಿಗೆ ಹುದ್ದೆಗೆ ಅನುಸಾರವಾಗಿ 73,280 ರಿಂದ 1,26,560 ರೂ. ವರೆಗೆ ನಿಗದಿಸಲಾಗಿದೆ.

ಆಯ್ಕೆ ಪ್ರಕ್ರಿಯೆ: ಪವರ್​ ಪಾಯಿಂಟ್​ ಪ್ರಸೆಂಟೇಷನ್​ ಮತ್ತು ವೈಯಕ್ತಿಕ ಸಂದರ್ಶನದ ಮೂಲಕ ಆಯ್ಕೆ ಪ್ರಕ್ರಿಯೆ ನಡೆಯಲಿದೆ.

ಅರ್ಜಿ ಸಲ್ಲಿಕೆ: ಈ ಹುದ್ದೆಗೆ ಅಭ್ಯರ್ಥಿಗಳು ಆನ್​ಲೈನ್​ ಮೂಲಕ ಅರ್ಜಿ ಸಲ್ಲಿಸಬಹುದಾಗಿದ್ದು, ಯಾವುದೇ ಅರ್ಜಿ ಶುಲ್ಕ ಭರಿಸುವಂತಿಲ್ಲ. ಸೆಪ್ಟೆಂಬರ್​ 18ರಿಂದ ಅರ್ಜಿ ಸಲ್ಲಿಕೆ ಆರಂಭವಾಗಿದ್ದು, ಕಡೆಯ ದಿನಾಂಕ ಅಕ್ಟೋಬರ್​ 8 ಆಗಿದೆ. ಈ ಹುದ್ದೆ ಕುರಿತಾದ ಯಾವುದೇ ಸ್ಪಷ್ಟನೆಗೆ career@udupicsl.com ಗೆ ಭೇಟಿ ನೀಡಬಹುದು.

ಈ ಹುದ್ದೆ ಕುರಿತು ಸಂಪೂರ್ಣ ಮಾಹಿತಿ ಮತ್ತು ಅಧಿಕೃತ ಅಧಿಸೂಚನೆಗೆ ಅಭ್ಯರ್ಥಿಗಳು cochinshipyard.com ಇಲ್ಲಿಗೆ ಭೇಟಿ ನೀಡಬಹುದಾಗಿದೆ. ​​

ಇದನ್ನೂ ಓದಿ: ಐಡಿಬಿಐನ 600 ಜ್ಯೂನಿಯರ್​ ಅಸಿಸ್ಟಂಟ್​ ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.