ಉಡುಪಿ: ಲಿಂಗಾಯಿತ ಪ್ರತ್ಯೇಕ ಧರ್ಮ ವಿಚಾರಕ್ಕೆ ಸಂಬಂಧಿಸಿದ ಚರ್ಚೆಗೆ ಬರುವಂತೆ ಪೇಜಾವರ ಶ್ರೀಗಳು ನೀಡಿದ ಪಂಥಾಹ್ವಾನಕ್ಕೆ ಸಾಣೆಹಳ್ಳಿ ಮಠದ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ತಿರುಗೇಟು ನೀಡಿದ್ದಾರೆ.
ಉಡುಪಿಯಲ್ಲಿ ಪ್ರತಿಕ್ರಿಯಿಸಿರುವ ಸಾಣೆಹಳ್ಳಿ ಶ್ರೀಗಳು, ಈ ಪಂಥಾಹ್ವಾನದ ಅಗತ್ಯವಿಲ್ಲ. ಚರ್ಚೆ ಮಾಡಲೇಬೇಕೆಂಬ ಅಭಿಲಾಷೆ ಪೇಜಾವರ ಶ್ರೀಗಳಿಗಿದ್ರೆ ಸಾಣೆಹಳ್ಳಿ ಮಠಕ್ಕೆ ಬನ್ನಿ ಎಂದು ಆಹ್ವಾನಿಸಿದ್ದಾರೆ.
ಇದು ಚರ್ಚೆಯ ಮೂಲಕ ತೀರ್ಮಾನ ಆಗುವ ಸಂಗತಿ ಅಲ್ಲ ಎಂದಿರುವ ಶ್ರೀಗಳು, ಲಿಂಗಾಯತ ಧರ್ಮ ಹಿಂದೂ ಧರ್ಮದ ಭಾಗವೇ ಅಲ್ಲ ಎಂದು ವಚನಗಳು ಹೇಳಿವೆ. ಹೀಗಾಗಿ, ಲಿಂಗಾಯತ ಸ್ವತಂತ್ರ ಧರ್ಮ ಎಂಬುದು ತಮ್ಮ ಸ್ಪಷ್ಟ ಅಭಿಪ್ರಾಯ ಎಂದರು. ಲಿಂಗಾಯಿತ ಪ್ರತ್ಯೇಕ ಧರ್ಮ ಎಂಬುದು ಹೋರಾಟದ ಮೂಲಕ ಸಾಧಿಸುವ ಕೆಲಸ ಅಲ್ಲ. ಕಾನೂನಾತ್ಮಕವಾಗಿ ಹೋರಾಟ ಮಾಡುವ ಅವಶ್ಯಕತೆ ಇದೆ. ಸಿದ್ದರಾಮಯ್ಯ ಮತ್ತು ಯಡಿಯೂರಪ್ಪ ಅವರ ಮೇಲೆ ಭಾರ ಹಾಕುವ ಕೆಲಸವಲ್ಲ. ಇದಕ್ಕಿಂತ ಕಾನೂನು ಹೋರಾಟವೇ ಹೆಚ್ವು ಸೂಕ್ತ ಎಂದು ಹೇಳಿದರು.