ಉಡುಪಿ: ಕುಂದಾಪುರದ ಕೊಡ್ಲಾಡಿಯಲ್ಲಿ ನೀರಿನ ಟ್ಯಾಂಕ್ ಒಳಗೆ ಬಿದ್ದ ಚಿರತೆಯನ್ನು ಅರಣ್ಯಾಧಿಕಾರಿಗಳು ರಕ್ಷಿಸಿದ್ದಾರೆ.
ಕೊಡ್ಲಾಡಿಯ ಚಂದ್ರ ಶೆಟ್ಟಿಯವರ ಮನೆಯ ನೀರಿನ ಟ್ಯಾಂಕ್ಗೆ ಚಿರತೆ ಬಿದ್ದಿತ್ತು. ಇದನ್ನು ಗಮನಿಸಿದ ಮನೆಯವರು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ. ಆಹಾರ ಹುಡುಕಿಕೊಂಡು ಬಂದ ಚಿರತೆ ನೀರಿನ ಟ್ಯಾಂಕ್ಗೆ ಮುಂಜಾನೆ ವೇಳೆಗೆ ಬಿದ್ದಿದೆ. ಮಧ್ಯಾಹ್ನ ಮನೆಯವರು ಗಮನಿಸಿ ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ.
ಸ್ಥಳಕ್ಕೆ ಭೇಟಿ ನೀಡಿದ ಅರಣ್ಯಾಧಿಕಾರಿಗಳು, ಚಿರತೆಯನ್ನು ಮೇಲಕ್ಕೆತ್ತಿದ್ದಾರೆ. ಸುಮಾರು ಐದು ವರ್ಷ ಪ್ರಾಯದ ಗಂಡು ಚಿರತೆಯನ್ನು ಸದ್ಯ ಕಾಡಿಗೆ ಸುರಕ್ಷಿತವಾಗಿ ಬಿಡಲಾಗಿದೆ.
ಇದನ್ನೂ ಓದಿ: HS Doreswamy: ನಾಡು ಮೆಚ್ಚಿದ 'ದೊರೆ'ಗೂ ತಪ್ಪಲಿಲ್ಲ ಅಪಸ್ವರ