ETV Bharat / state

ದೀರ್ಘ ದಂಡ ನಮಸ್ಕಾರ ಹಾಕಿ ಪ್ರತಿಭಟಿಸಿದ ಕೆಎಸ್​​ಆರ್​​ಟಿಸಿ ಮೆಕ್ಯಾನಿಕ್ - udupi protest news

ಪ್ರಮುಖ ರಸ್ತೆಗಳಲ್ಲಿ ಸ್ವ ಇಚ್ಛೆಯಿಂದ ದೀರ್ಘ ದಂಡ ನಮಸ್ಕಾರ ಹಾಕುತ್ತಾ ಸಾಗಿದ ಮೆಕ್ಯಾನಿಕ್‌ ಶ್ರೀಕೃಷ್ಣ ಮಠಕ್ಕೆ ತೆರಳಿ ಪ್ರತಿಭಟನೆ ಅಂತ್ಯಗೊಳಿಸಿದರು..

KSRTC mechanic protested differently at udupi
ದೀರ್ಘ ದಂಡ ನಮಸ್ಕಾರ ಹಾಕಿ ಪ್ರತಿಭಟನೆ ನಡೆಸಿದ ಕೆಎಸ್​​ಆರ್​​ಟಿಸಿ ಮೆಕ್ಯಾನಿಕ್
author img

By

Published : Dec 13, 2020, 11:29 AM IST

ಉಡುಪಿ : ರಾಜ್ಯಾದ್ಯಂತ ಸಾರಿಗೆ ನೌಕರರ ಮುಷ್ಕರ ನಡೆಯುತ್ತಿದೆ. ಉಡುಪಿಯಲ್ಲಿ ದೀರ್ಘ ದಂಡ ನಮಸ್ಕಾರ ಹಾಕಿ ಕೆಎಸ್​​ಆರ್​​ಟಿಸಿ ಮೆಕ್ಯಾನಿಕ್‌ವೊಬ್ಬರು ವಿಭಿನ್ನವಾಗಿ ಪ್ರತಿಭಟಿಸಿದರು.

ದೀರ್ಘ ದಂಡ ನಮಸ್ಕಾರ ಹಾಕಿ ಪ್ರತಿಭಟನೆ

ಉಡುಪಿಯ ಕೆಎಸ್​​ಆರ್​​ಟಿಸಿ ಬಸ್ ನಿಲ್ದಾಣದಿಂದ ಶ್ರೀಕೃಷ್ಣ ಮಠದವರೆಗೆ ದೀರ್ಘ ದಂಡ ನಮಸ್ಕಾರ ಮಾಡಿ ಎಲ್ಲರ ಗಮನ‌ ಸೆಳೆದರು. ಸಾರಿಗೆ ನೌಕರರ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ವಿವಿಧೆಡೆ ಪ್ರತಿಭಟನೆ ನಡೆಯುತ್ತಿದೆ.

ಉಡುಪಿಯ ಕೆಎಸ್​​ಆರ್​ಟಿಸಿ ಡಿಪೋದಲ್ಲಿ ಮೆಕ್ಯಾನಿಕ್ ಆಗಿರುವ ನಾಗೇಶ್ ಬೋವಿ ಎಂಬುವರು ದೀರ್ಘ ದಂಡ ನಮಸ್ಕಾರ ಮೂಲಕ ಪ್ರತಿಭಟನೆಗೆ ಅವಕಾಶ ಕೋರಿದ್ದರು. ಆದ್ರೆ, ಉಡುಪಿ ನಗರ ಠಾಣೆ ಪ್ರತಿಭಟನೆಗೆ ಅವಕಾಶ ನಿರಾಕರಿಸಿತ್ತು.

ಈ ಸುದ್ದಿಯನ್ನೂ ಓದಿ: ಪ್ರಯಾಣಿಕರಿಲ್ಲದೇ ಬಿಕೋ ಎನ್ನುತ್ತಿದೆ ಬಿಎಂಟಿಸಿ ಬಸ್​​ ನಿಲ್ದಾಣ

ಹಾಗಾಗಿ ಪ್ರಮುಖ ರಸ್ತೆಗಳಲ್ಲಿ ಸ್ವ ಇಚ್ಛೆಯಿಂದ ದೀರ್ಘ ದಂಡ ನಮಸ್ಕಾರ ಹಾಕುತ್ತಾ ಸಾಗಿದ ನಾಗೇಶ್ ಬೋವಿ ಶ್ರೀಕೃಷ್ಣ ಮಠಕ್ಕೆ ತೆರಳಿ ಪ್ರತಿಭಟನೆ ಅಂತ್ಯಗೊಳಿಸಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.