ETV Bharat / state

ಕಾರ್ಕಳ: ಕೊರೊನಾ ಕ್ವಾರಂಟೈನ್ ಮುಗಿದ ತಕ್ಷಣವೇ ಪ್ರಿಯಕರನೊಂದಿಗೆ ವಿವಾಹಿತೆ ಪರಾರಿ! - ಕಾರ್ಕಳ ತಾಲೂಕಿನ ಮರ್ಣೆ ಗ್ರಾಮದ ವಿವಾಹಿತೆ ಪರಾರಿ ನ್ಯೂಸ್​

ಕಾರ್ಕಳ ತಾಲೂಕಿನ ಮರ್ಣೆ ಗ್ರಾಮದಲ್ಲಿ ವಿಚಿತ್ರ ಪ್ರಕರಣವೊಂದು ಬೆಳಕಿಗೆ ಬಂದಿದೆ. ವಿವಾಹಿತ‌ ಮಹಿಳೆಯೊಬ್ಬರು ಹೋಮ್ ಕ್ವಾರಂಟೈನ್ ಮುಗಿಯುತ್ತಿದ್ದಂತೆ ತನ್ನ ಪ್ರಿಯಕರನೊಂದಿಗೆ ಪರಾರಿಯಾಗಿದ್ದಾಳೆ.

woman escape
ವಿವಾಹಿತೆ ಪರಾರಿ
author img

By

Published : May 21, 2020, 10:26 AM IST

Updated : May 21, 2020, 10:41 AM IST

ಕಾರ್ಕಳ/ಉಡುಪಿ: ಹೋಮ್ ಕ್ವಾರಂಟೈನ್ ಮುಗಿಯುತ್ತಿದ್ದಂತೆ ವಿವಾಹಿತ‌ ಮಹಿಳೆಯೊಬ್ಬಳು ತನ್ನ ಮಗುವನ್ನು ಬಿಟ್ಟು ‌ಪ್ರಿಯಕರನ ಜೊತೆ ಮನೆಯಿಂದ ಪರಾರಿಯಾಗಿರುವ ಘಟನೆ ಕಾರ್ಕಳ ತಾಲೂಕಿನ ಮರ್ಣೆ ಗ್ರಾಮದಲ್ಲಿ ‌ನಡೆದಿದೆ.

ಅಜೆಕಾರು ಕೈಕಂಬ ನಿವಾಸಿಯಾದ ಮಹಿಳೆ ಪ್ರಿಯಕರನ ಜೊತೆ ಪರಾರಿಯಾಗಿದ್ದಾಳೆ. ನಾಪತ್ತೆಯಾದ ಮಹಿಳೆ 8 ವರ್ಷದ ಹಿಂದೆ ಉದ್ಯಾವರದ ಸಾಜಿದ್‌ ಎಂಬುವರೊಂದಿಗೆ ಮದುವೆಯಾಗಿ ಪುಣೆಯ ಲೋನಾವಲದಲ್ಲಿ ನೆಲೆಸಿದ್ದಳು. ಕಳೆದ 4 ತಿಂಗಳ ಹಿಂದೆ ಕೌಟುಂಬಿಕ ಸಮಸ್ಯೆಯಿಂದ 8 ವರ್ಷದ ಮಗಳೊಂದಿಗೆ ಊರಿಗೆ ಬಂದು ಪೋಷಕರೊಂದಿಗೆ ವಾಸವಾಗಿದ್ದಳು. ಬಳಿಕ‌ ಕೊರೊನಾ ವೈರಸ್ ಹಿನ್ನೆಲೆಯಲ್ಲಿ ‌ಲಾಕ್‌ಡೌನ್ ಘೋಷಣೆಯಾಗಿದ್ದು, ಈ ಸಂದರ್ಭದಲ್ಲಿ ಯಾರಿಗೂ ತಿಳಿಯದಂತೆ ಆಕೆ ತನ್ನ ತಂದೆಯ ‌ಜೊತೆ ಕುಟುಂಬ ಸಮೇತವಾಗಿ ಮಂಗಳೂರಿನಲ್ಲಿ ‌ನಡೆದಿದ್ದ ವಿವಾಹ ‌ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದರು.

ಈ ಹಿನ್ನೆಲೆ ಮದುವೆ ಮುಗಿಸಿ ಮರಳಿ ಊರಿಗೆ ಬರುತ್ತಿದ್ದಂತೆ ಸ್ಥಳೀಯರು ‌ಪೊಲೀಸರಿಗೆ ಮಾಹಿತಿ ನೀಡಿದ್ದರು. ಅದರಂತೆ ಮಹಿಳೆ, ಆಕೆಯ ತಾಯಿ‌ ಹಾಗೂ ಸಹೋದರನಿಗೆ ಅಜೆಕಾರಿನಲ್ಲಿ ಹೋಮ್ ಕ್ವಾರಂಟೈನ್​ಗೆ ಒಳಪಡಿಸಲಾಗಿತ್ತು. ಆದ್ರೆ ಆಕೆಯ ತಂದೆ ಮಂಗಳೂರಿನಲ್ಲಿ ‌ಸಿಲುಕಿಕೊಂಡಿದ್ದು ಅಲ್ಲಿಯೇ ಕ್ವಾರಂಟೈನ್ ಮುಗಿಸಿ ಮನೆಗೆ ಬರುವಷ್ಟರಲ್ಲಿ ಮಗಳು ನಾಪತ್ತೆಯಾಗಿದ್ದಾಳೆ. ಈ ಬಗ್ಗೆ ಅಜೆಕಾರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ‌.

Last Updated : May 21, 2020, 10:41 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.