ETV Bharat / state

ಕರುನಾಡಿನ ಉಡುಪಿ ಶ್ರೀಕೃಷ್ಣ ಮಠದ ನಾಮಫಲಕದಲ್ಲಿ ಕನ್ನಡ ಮಾಯ.. ತುಳು, ಸಂಸ್ಕೃತಕ್ಕೆ ಮಾತ್ರ ಆದ್ಯತೆ! - ಕೃಷ್ಣ ಮಠ ಉಡುಪಿ

ನಾಮಫಲಕದಲ್ಲಿ ಕನ್ನಡ ಭಾಷೆ ತೆಗೆದು ತುಳು ಭಾಷೆ ಹಾಕಿದ್ದು ಸರಿಯಲ್ಲ. ಬೇರೆ ಭಾಷೆಯನ್ನು ಬೆಳೆಸುವಾಗ ಮೊದಲು ಕನ್ನಡವನ್ನೇ ಬಳಸಬೇಕು. ಕನ್ನಡ ಭಾಷೆಯನ್ನು ಕೈಬಿಟ್ಟು ಬೇರೆ ಭಾಷೆ ಬಳಸಿದ್ದು ಕಾನೂನಿನ ಸ್ಪಷ್ಟ ಉಲ್ಲಂಘನೆ..

udupi
ನಾಮಫಲಕ
author img

By

Published : Dec 1, 2020, 1:36 PM IST

Updated : Dec 1, 2020, 1:44 PM IST

ಉಡುಪಿ : ಕೃಷ್ಣ ಮಠದ ನಾಮಫಲಕದಲ್ಲಿ ಕನ್ನಡ ತೆಗೆದು ಹಾಕಿರೋದು ಸರಿಯಾದ ಕ್ರಮವಲ್ಲ. ಕನ್ನಡ ಸಾಹಿತ್ಯ ಪರಿಷತ್ ಇದನ್ನು ಉಗ್ರವಾಗಿ ಖಂಡಿಸುತ್ತದೆ ಎಂದು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ನೀಲಾವರ ಸುರೇಂದ್ರ ಅಡಿಗ ಹೇಳಿದ್ದಾರೆ.

ಈ ಬಗ್ಗೆ ಮಾತನಾಡಿದ ಅವರು, ಕನ್ನಡ ನಾಡಿನಲ್ಲಿ ಮೊದಲು ಕನ್ನಡಕ್ಕೆ ಆದ್ಯತೆ. ನಾಮಫಲಕದಲ್ಲಿ ಮೊದಲು ಕನ್ನಡ ಇರಬೇಕು. ಆನಂತರ ಇತರ ಭಾಷೆ. ಒಂದು ಧಾರ್ಮಿಕ ಸಂಸ್ಥೆ ಭಾಷೆಗಳ ನಡುವೆ ಕಂದಕ ಸೃಷ್ಟಿಸುವುದು ಸರಿಯಲ್ಲ. ನಾಮ ಫಲಕದ ಈ ಪ್ರಕರಣ ಸರ್ಕಾರದ ಕಾನೂನಿನ ಸ್ವಷ್ಟ ಉಲ್ಲಂಘನೆಯಾಗಿದೆ.

ಉಡುಪಿ ಶ್ರೀಕೃಷ್ಣ ಮಠದ ನಾಮಫಲಕದಲ್ಲಿ ಕನ್ನಡ ಮಾಯ..

ಇದನ್ನು ಕೂಡಲೇ ಸರಿಪಡಿಸಬೇಕು. ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿ ಮುಂದೆ ಇದನ್ನು ಸರಿಪಡಿಸುವವರೆಗೂ ಹೋರಾಟ ಅನಿವಾರ್ಯ. ಸಮಾಜಕ್ಕೆ ಮಾರ್ಗದರ್ಶನ ಮಾಡುವವರೆ ಇಂತಹ ಕುಚೋದ್ಯ ಕೆಲಸಕ್ಕೆ ಕೈ ಹಾಕಿರುವುದು ಕ್ಷಮಿಸಲಾಗದ ಅಪರಾಧ. ಕನ್ನಡ ಸಾಹಿತ್ಯ ಪರಿಷತ್ ಇದನ್ನು ಉಗ್ರವಾಗಿ ಖಂಡಿಸುತ್ತದೆ ಎಂದರು.

ಸಂಬಂಧಪಟ್ಟವರು ತಕ್ಷಣ ಇದನ್ನು ಸರಿಪಡಿಸಬೇಕು. ಇದು ಕನ್ನಡ ಸಾಹಿತ್ಯ ಪರಿಷತ್​ನ ಹಕ್ಕೊತ್ತಾಯವಾಗಿದೆ. ನಾಮಫಲಕದಲ್ಲಿ ಕನ್ನಡ ಭಾಷೆ ತೆಗೆದು ತುಳು ಭಾಷೆ ಹಾಕಿದ್ದು ಸರಿಯಲ್ಲ. ಬೇರೆ ಭಾಷೆಯನ್ನು ಬೆಳೆಸುವಾಗ ಮೊದಲು ಕನ್ನಡವನ್ನೇ ಬಳಸಬೇಕು. ಕನ್ನಡ ಭಾಷೆಯನ್ನು ಕೈಬಿಟ್ಟು ಬೇರೆ ಭಾಷೆ ಬಳಸಿದ್ದು ಕಾನೂನಿನ ಸ್ಪಷ್ಟ ಉಲ್ಲಂಘನೆ.

ಮೊದಲು ಕನ್ನಡ, ಆನಂತರ ಇತರೆ ಭಾಷೆ ನಾಮಫಲಕದಲ್ಲಿ ಇರಲಿ. ಕನ್ನಡ ಮತ್ತು ಸೋದರ ಭಾಷೆ ತುಳುವಿನ ನಡುವೆ ಕಂದಕ ನಿರ್ಮಾಣ ಮಾಡುವುದು ಸಹ ಪರಿಷತ್ ತೀವ್ರವಾಗಿ ಖಂಡಿಸುತ್ತದೆ ಎಂದರು.

ಕೃಷ್ಣಮಠದ ಮುಖ್ಯ ನಾಮಫಲಕದಲ್ಲಿ ಕನ್ನಡ ಮಾಯವಾದ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ ಕೃಷ್ಣಭಕ್ತ, ಸಾಮಾಜಿಕ ಮುಂದಾಳು ವಾಸುದೇವ ಭಟ್ ತುಳು ಇಲ್ಲಿನ ಆಡು ಭಾಷೆ ಎಂಬುದು ನಿಜ. ಆದರೆ, ನಾಮಫಲಕದಲ್ಲಿ ಕನ್ನಡ ಕಡ್ಡಾಯ ಎಂಬುದನ್ನು ಸರ್ಕಾರವೇ ಸ್ಪಷ್ಟಪಡಿಸಿದೆ. ಕನ್ನಡದಲ್ಲಿ ಬರೆದ ಬಳಿಕ ತುಳು, ಸಂಸ್ಕೃತದಲ್ಲಿ ಬರೆಯಲಿ. ಆದರೆ, ಕನ್ನಡವನ್ನೇ ಮಾಯ ಮಾಡುವುದು ಅಪರಾಧ ಎಂದರು.

Last Updated : Dec 1, 2020, 1:44 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.