ಉಡುಪಿ: ರಾಜ್ಯದಲ್ಲಿ ಸಂಘರ್ಷ ಸೃಷ್ಟಿಸಿರುವ ಹಿಜಾಬ್ ಪರ-ವಿರೋಧ ವಿವಾದ ರಾಷ್ಟ್ರಮಟ್ಟದಲ್ಲಿ ಸದ್ದು ಮಾಡುತ್ತಿದೆ. ಈ ಮಧ್ಯೆ, ಉಡುಪಿ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಈ ಹಿಂದಿನಿಂದಲೂ ಹಿಜಾಬ್ಗೆ ಅವಕಾಶವಿರಲಿಲ್ಲ ಎಂಬುದನ್ನು ತಿಳಿಸುವ ಮಹತ್ವದ ಸಾಕ್ಷ್ಯ ಲಭ್ಯವಾಗಿದೆ.
ಕಾಲೇಜಿನಲ್ಲಿ ಕಳೆದ ಹಲವು ವರ್ಷಗಳಿಂದ ಹಿಜಾಬ್ ಧರಿಸಲು ಅವಕಾಶ ನೀಡಿದ್ದರು ಎಂದು ಹೇಳಿಕೆ ನೀಡಿದ್ದ ವಿದ್ಯಾರ್ಥಿನಿಯರದ್ದು 'ಹಸಿ ಸುಳ್ಳು' ಎಂಬುದನ್ನು ಈ ದಾಖಲೆಗಳು ಹೇಳುತ್ತವೆ. ಕಾಲೇಜಿನ 2009-10 ಸಾಲಿನ ವಾರ್ಷಿಕ ಸಂಚಿಕೆಯಲ್ಲಿರುವ ಫೋಟೋದಲ್ಲಿ ಸಮಾನ ವಸ್ತ್ರಸಂಹಿತೆಯಲ್ಲಿ ವಿದ್ಯಾರ್ಥಿನಿಯರಿದ್ದಾರೆ. ಅಲ್ಲದೇ ಕಾಲೇಜಿನ ಬೆಳಗಿನ ಅಸೆಂಬ್ಲಿ ವೇಳೆಯಲ್ಲೂ ವಿದ್ಯಾರ್ಥಿನಿಯರು ಹಿಜಾಬ್ ಧರಿಸಿಲ್ಲದ ಫೋಟೋಗಳಿವೆ.
ಇದನ್ನೂ ಓದಿ: ರಾಜ್ಯದಲ್ಲಿ ಭುಗಿಲೆದ್ದ ಹಿಜಾಬ್ ವಿವಾದ: ಇಂದಿನಿಂದ ಮೂರು ದಿನ ಶಾಲಾ-ಕಾಲೇಜುಗಳಿಗೆ ರಜೆ
ಹಿಜಾಬ್ ವಿವಾದ ಆರಂಭವಾದಂದಿನಿಂದ ವಿದ್ಯಾರ್ಥಿಗಳು, 'ಕಾಲೇಜಿನಲ್ಲಿ ಈ ಹಿಂದಿನಿಂದಲೂ ಹಿಜಾಬ್ ಧರಿಸಲು ಅವಕಾಶವಿತ್ತು' ಎಂದು ವಾದ ಮಾಡುತ್ತಿದ್ದರು. ಅಲ್ಲದೇ ಈ ಬಗ್ಗೆ ವಿದ್ಯಾರ್ಥಿನಿಯರು ಹೈಕೋರ್ಟ್ಗೆ ರಿಟ್ ಅರ್ಜಿಯನ್ನೂ ಸಲ್ಲಿಸಿದ್ದಾರೆ. ಇದಕ್ಕೆ ಉತ್ತರವಾಗಿ ಹಿಜಾಬ್ ಸಂಸ್ಕೃತಿ ಇರಲಿಲ್ಲ ಎಂಬುವುದಕ್ಕೆ ಕಾಲೇಜು ಆಡಳಿತ ಮಂಡಳಿ ನೇರ ಸಾಕ್ಷ್ಯ ನೀಡಿದೆ.
6 ವಿದ್ಯಾರ್ಥಿನಿಯರಿಂದ ಶುರುವಾದ ಹಿಜಾಬ್ ಹೋರಾಟ ರಾಜ್ಯಾದ್ಯಂತ ಕಿಚ್ಚು ಹೊತ್ತಿಸಿದೆ.