ಉಡುಪಿ: ಐದು ದಿನಗಳ ಪಂಚಕರ್ಮ ಚಿಕಿತ್ಸೆ ಮುಗಿಸಿದ ಜೆಡಿಎಸ್ ವರಿಷ್ಠ ಎಚ್.ಡಿ ದೇವೇಗೌಡ ಹಾಗು ಸಿಎಂ ಕುಮಾರಸ್ವಾಮಿ ಉಡುಪಿಯಿಂದ ಚಿಕ್ಕಮಗಳೂರಿನತ್ತ ಪ್ರಯಾಣ ಬೆಳೆಸಿದರು.
ಮುಳೂರು ಸಾಯಿ ರಾಧಾ ರೆಸಾರ್ಟ್‌ನ ಕಡಲತಡಿಯಲ್ಲಿ ಸಿಎಂ ಕುಮಾರಸ್ವಾಮಿ ಮತ್ತು ಮಾಜಿ ಪ್ರಧಾನಿ ದೇವೇಗೌಡರು ಪ್ರಕೃತಿ ಚಿಕಿತ್ಸೆ ಪೂರ್ಣಗೊಳಿಸಿದ್ದಾರೆ. ಪಂಚಕರ್ಮ ಚಿಕಿತ್ಸೆ ಮುಗಿಸಿ ಹೊರಟ ಸಿಎಂ ಕುಮಾರಸ್ವಾಮಿ ಚಿಕ್ಕಮಗಳೂರಿಗೆ ತೆರಳುವ ವೇಳೆ ಮಾಧ್ಯಮಗಳ ಕ್ಯಾಮೆರಾ ಕಂಡು ಮುಖ ತಿರುಗಿಸಿದ ಘಟನೆ ನಡೆಯಿತು. ಐದು ದಿನಗಳ ನಂತರ ಸಿಎಂ ಮಾಧ್ಯಮಗಳಿಗೆ ಕಾಣಿಸಿಕೊಂಡಿದ್ದು ವಿಶೇಷವಾಗಿತ್ತು.