ಉಡುಪಿ: ಸಾವಯವ ಕೃಷಿಕರೊಬ್ಬರು ನಾಡ ಬಂದೂಕಿನಿಂದ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಕಾರ್ಕಳದಲ್ಲಿ ಬುಧವಾರ ನಡೆದಿದೆ. ತೆಳ್ಳಾರು ನೀಲೆ ಬೆಟ್ಟುವಿನ ಭಾಸ್ಕರ ಹೆಗ್ಡೆ (63) ಎಂಬುವರು ಮೃತ ವ್ಯಕ್ತಿ.
ಭಾಸ್ಕರ ಹೆಗ್ಡೆ ಪತ್ನಿ ಟೀ ಮಾಡಲೆಂದು ಅಡುಗೆ ಕೊಠಡಿ ಪ್ರವೇಶಿಸಿದ್ದ ವೇಳೆ ಗುಂಡಿನ ಸದ್ದು ಕೇಳಿಬಂದಿದೆ. ಹೊರಗೆ ಬಂದು ನೋಡಿದಾಗ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದು ಕಂಡುಬಂದಿದೆ.
ಸಾವಯವ ಕೃಷಿಯಲ್ಲಿ ತೊಡಗಿಸಿಕೊಂಡಿದ್ದ ಭಾಸ್ಕರ ಹೆಗ್ಡೆ ತಮ್ಮ ಜಮೀನಿನಲ್ಲಿ ತರಕಾರಿ ಬೆಳೆಯುತ್ತಿದ್ದರು. ಆರ್ಥಿಕ ತೊಂದರೆಯೇ ಆತ್ಮಹತ್ಯೆಗೆ ಕಾರಣ ಎಂದು ಹೇಳಲಾಗುತ್ತಿದೆ. ತನಿಖೆಯಿಂದಷ್ಟೆ ಖಚಿತ ಮಾಹಿತಿ ಬಹಿರಂಗವಾಗಬೇಕಿದೆ. ಈ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: ಬೆಂಗಳೂರಿನಲ್ಲೊಂದು ಹೃದಯ ವಿದ್ರಾವಕ ಘಟನೆ: ತಮ್ಮನ ಬಾಳು ಹಾಳಾಯ್ತೆಂದು ಮನನೊಂದು ಅಕ್ಕ ಆತ್ಮಹತ್ಯೆ