ಉಡುಪಿ: ಕಾಂಗ್ರೆಸ್ ಬ್ಯಾಂಕಿಂಗ್ ಬೆಳೆಸಿದ್ದರೆ ಬಿಜೆಪಿ ಬ್ಯಾಂಕ್ ಮುಚ್ಚಿತು. ಸದಾನಂದ ಗೌಡರೇ, ಕಟೀಲರೇ ಬ್ಯಾಂಕುಗಳು ಮುಚ್ಚಿದಾಗ ಎಲ್ಲಿ ಹೋಗಿದ್ರಿ. ಕರಾವಳಿಯ ಸಂಸದರು ಎಲ್ಲಾ ಎಲ್ಲಿಗೆ ಹೋಗಿದ್ದರು? ನಿಮ್ಮ ಧ್ವನಿ ಎಲ್ಲಿ ಅಡಗಿತ್ತು? ಮನೆಕಟ್ಟಲು ಶ್ರಮ ಜಾಸ್ತಿ, ನೀವು ಬ್ಯಾಂಕ್ಗಳ ಮೇಲೆ ಜೆಸಿಬಿ ಹಾಕಿದ್ರಲ್ವಾ? ದೇಶಕ್ಕೆ ಆರ್ಥಿಕ ಶಕ್ತಿ ಕೊಟ್ಟ ಅವಿಭಜಿತ ದ.ಕ ಜಿಲ್ಲೆಗೆ ಅವಮಾನ ಮಾಡಿದ್ರಿ ಎಂದು ಕಾಂಗ್ರೆಸ್ ರಾಜ್ಯಾಧ್ಯಕ್ಷ ಡಿಕೆಶಿ ವಾಗ್ದಾಳಿ ನಡೆಸಿದ್ದಾರೆ.
ಉಡುಪಿ ಕಾಂಗ್ರೆಸ್ ಜನಧ್ವನಿ ಯಾತ್ರೆ ಸಮಾರೋಪ ಸಮಾವೇಶದಲ್ಲಿ ಮಾತನಾಡಿದ ಅವರು, ಮೀನುಗಾರಿಕೆಗೆ ಡೀಸೆಲ್ ಸಬ್ಸಿಡಿ ಇಲ್ಲ. ನಮ್ಮ ಮನೆ ಕಾರ್ಯಕ್ರಮಕ್ಕೆ ಮೀನು ತರೋಕೆ ಹೋದ್ರೆ ದರ ಡಬ್ಬಲ್ ಆಗಿದೆ. ಕೊರೊನಾ ಬಂದ ನಂತರ ಈ ಸರ್ಕಾರ ಜನರಿಗೆ ಕಿರುಕುಳ ನೀಡ್ತಿದೆ ಎಂದರು.
ನಾನು ಕನಕಪುರದ ಬಂಡೆ ಅಲ್ಲ, ಅದು ಪ್ರಕೃತಿ, ಕಡಿದರೆ ಆಕೃತಿ, ಪೂಜಿಸಿದರೆ ಸಂಸ್ಕೃತಿ. ಬಿಜೆಪಿಯವರು ನಾವು ಹಿಂದೂ ಮುಂದೂ ಅಂತಾರೆ, ನಾವು ಹಾಗೇನಿಲ್ಲ, ಎಲ್ಲಾ ಧರ್ಮಗಳು ಸೇರಿ ಒಂದು. ರಕ್ತ, ಉಸಿರು, ಬೆವರಿನಲ್ಲಿ ಯಾವುದೇ ಬೇಧ ಇಲ್ಲ ಎಂದು ಡಿಕೆಶಿ ನುಡಿದರು.
ಇದನ್ನೂ ಓದಿ: ಮಂಗಳೂರನ್ನು ಪ್ರವಾಸೋದ್ಯಮದ ಬ್ರ್ಯಾಂಡ್ ಆಗಿ ಬೆಳೆಸಬೇಕಿದೆ; ಸಚಿವ ಸಿ.ಪಿ. ಯೋಗೀಶ್ವರ್