ಉಡುಪಿ: ಉಡುಪಿಯ ಮುಳೂರಿನಲ್ಲಿ ಪ್ರಕೃತಿ ಚಿಕಿತ್ಸೆಗೆಂದು ಆಗಮಿಸಿದ ಮಾಜಿ ಪ್ರಧಾನಿ/ಜೆಡಿಎಸ್ ವರಿಷ್ಠ ದೇವೇಗೌಡರು ಅವರು ತಮ್ಮ ಪತ್ನಿ ಚಿನ್ನಮ್ಮ ಜೊತೆ ಜಿಲ್ಲೆಯ ಧಾರ್ಮಿಕ ಕ್ಷೇತ್ರಗಳಿಗೆ ಭೇಟಿ ನೀಡಲಿದ್ದಾರೆ .
ಕುಂದಾಪುರ ಸಮೀಪದ ಕೋಟದ ಅಮೃತೇಶ್ವರಿ ದೇವಸ್ಥಾನಕ್ಕೆ ಮಧ್ಯಾಹ್ನ ಭೇಟಿ ನೀಡಿದ ದಂಪತಿ, ಮೊಮ್ಮಗನ ಮದುವೆ ಆಮಂತ್ರಣ ಪತ್ರಿಕೆಗೆ ಪೂಜೆ ಸಲ್ಲಿಸಿದರು. ಮೇ 16ರ ವರೆಗೆ ಕಾಪುವಿನಲ್ಲಿ ತಂಗಲಿರುವ ದೇವೇಗೌಡ ದಂಪತಿ, ಉಡುಪಿಯ ವಿವಿಧ ಧಾರ್ಮಿಕ ಕ್ಷೇತ್ರಗಳಿಗೆ ಭೇಟಿ ನೀಡಲಿದ್ದಾರೆ. ಈ ವೇಳೆ ತಮ್ಮ ಹಾಗೂ ಮೊಮ್ಮಕ್ಕಳ ಗೆಲುವಿಗಾಗಿ (ಎಚ್ಎಂಟಿ: ಹಾಸನ, ಮಂಡ್ಯ ಹಾಗೂ ತುಮಕೂರು ಕ್ಷೇತ್ರಗಳು) ವಿಶೇಷ ಪೂಜೆ ಸಲ್ಲಿಸಲಿದ್ದಾರೆ ಎಂದು ಹೇಳಲಾಗುತ್ತಿದೆ.
ಅಮೃತೇಶ್ವರಿ ದೇವಸ್ಥಾನದ ಅರ್ಚಕರು, ಮೊಮ್ಮಗನ ಮದುವೆ ಆಮಂತ್ರಣ ಪತ್ರಿಕೆಯನ್ನು ದೇವಿಯ ಮುಂದಿಟ್ಟು ಪೂಜೆ ಸಲ್ಲಿಸಿದರು. ಬಳಿಕ ನಿಮಗೂ ಹಾಗೂ ನಿಮ್ಮ ಕುಟುಂಬ ಸದಸ್ಯರಿಗೂ ಶುಭವಾಗಲಿ ಎಂದು ಹಾರೈಸಿದರು. ಈ ವೇಳೆ ಕುಟುಂಬದ ಕೆಲವು ಸದಸ್ಯರು ಸಹ ಭಾಗವಹಿಸಿದ್ದರು.