ETV Bharat / state

ಕಾಪು ಮೂಲದ ಕೊರೊನಾ ಪಾಸಿಟಿವ್ ವ್ಯಕ್ತಿಯಿಂದ ಚಿಕಿತ್ಸೆಯ ವೆಚ್ಚ ವಸೂಲಿ: ಡಿಸಿ ಸ್ಪಷ್ಟನೆ - ಕೊರೊನಾ ಪಾಸಿಟಿವ್ ವ್ಯಕ್ತಿ

ಮನೆಯೊಳಗಡೆ ಇರಬೇಕು ಎಂದು ಕಟ್ಟಾಜ್ಞೆ ಮಾಡಿದ್ದರು ಅದನ್ನು ಉಲ್ಲಂಘಿಸಿ ಓಡಾಡಿದ್ದಾನೆ ಕ್ರಿಕೆಟ್ ಆಡಿದ್ದಾನೆ ಸಾರ್ವಜನಿಕ ಸ್ಥಳಗಳಿಗೆ ಹೋಗಿ ಅಲ್ಲಿದ್ದವರ ಜೀವದ ಜೊತೆಗೆ ಚೆಲ್ಲಾಟ ಮಾಡಿದ್ದಾನೆ. ಹೀಗಾಗಿ ಆತನನ್ನು ಬಿಡುವ ಪ್ರಶ್ನೆ ಇಲ್ಲ ಆತನ ಮೇಲೆ ಕೇಸು ದಾಖಲಿಸಿದ್ದೇವೆ ಎಂದು ಜಿಲ್ಲಾಧಿಕಾರಿ ಜಗದೀಶ್ ಹೇಳಿದ್ದಾರೆ.

DC Press Meet
ಕಾಪು ಮೂಲದ ಕೊರೊನಾ ಪಾಸಿಟಿವ್ ವ್ಯಕ್ತಿಯಿಂದ ಚಿಕಿತ್ಸೆಯ ವೆಚ್ಚ ವಸೂಲಿ ಮಾಡಲಾಗುವುದು: ಡಿಸಿ
author img

By

Published : Apr 2, 2020, 8:12 PM IST

ಉಡುಪಿ: ವಿದೇಶದಿಂದ ಬಂದಿದ್ದ ಕಾಪು ಮೂಲದ ಕೊರೊನಾ ಪಾಸಿಟಿವ್ ವ್ಯಕ್ತಿಯ ಹೆಂಡತಿ ಮತ್ತು ಮಗುವಿಗೆ ಚಿಕಿತ್ಸೆ ನೀಡಿದ್ದ ಮಣಿಪಾಲ ಆಸ್ಪತ್ರೆ ಆತನಿಗೆ 30,000 ವೆಚ್ಚವನ್ನು ಭರಿಸಲು ಹೇಳಿದೆ.

ಈ ಬಗ್ಗೆ ಜಿಲ್ಲಾಧಿಕಾರಿ ಅವರನ್ನು ಪ್ರಶ್ನೆ ಮಾಡಿದಾಗ ಜಿಲ್ಲಾಧಿಕಾರಿ ಅವರು ಕೇವಲ ಆತನ ಹೆಂಡತಿ ಮಗುವಿನ ಶುಲ್ಕ ಮಾತ್ರವಲ್ಲ ಅವರ ಊರಿನಲ್ಲಿ ಯಾರಿಗಾದರೂ ಕೊರೊನಾ ಸೋಂಕು ಕಂಡು ಬಂದರೆ ಅವರ ಚಿಕಿತ್ಸೆಯ ವೆಚ್ಚವನ್ನೂ ಈತನಿಂದಲೇ ವಸೂಲಿ ಮಾಡಲಾಗುವುದು ಎಂದು ಗುಡುಗಿದ್ದಾರೆ.

ಮನೆಯೊಳಗಡೆ ಇರಬೇಕು ಎಂದು ಕಟ್ಟಾಜ್ಞೆ ಮಾಡಿದ್ದರೂ ಅದನ್ನು ಉಲ್ಲಂಘಿಸಿ ಓಡಾಡಿದ್ದಾನೆ. ಕ್ರಿಕೆಟ್ ಆಡಿದ್ದಾನೆ ಸಾರ್ವಜನಿಕ ಸ್ಥಳಗಳಿಗೆ ಹೋಗಿ ಅಲ್ಲಿದ್ದವರ ಜೀವದ ಜೊತೆಗೆ ಚೆಲ್ಲಾಟ ಆಡಿದ್ದಾನೆ. ಹೀಗಾಗಿ ಆತನನ್ನು ಬಿಡುವ ಪ್ರಶ್ನೆ ಇಲ್ಲ ಆತನ ಮೇಲೆ ಕೇಸು ದಾಖಲಿಸಿದ್ದೇವೆ ಎಂದು ಜಿಲ್ಲಾಧಿಕಾರಿ ಜಗದೀಶ್ ಹೇಳಿದ್ದಾರೆ.

ಕಾಪು ಮೂಲದ ವ್ಯಕ್ತಿಯೊಬ್ಬರು ಕೆಲದಿನಗಳ ಹಿಂದೆ ವಿದೇಶದಿಂದ ಬಂದಿದ್ದು, ಆರೋಗ್ಯ ಇಲಾಖೆಯವರು ಆತನನ್ನು ಮನೆಯೊಳಗಡೆ ಇರುವಂತೆ ಸೂಚಿಸಿದ್ದರು. ಆದರೆ ಜಿಲ್ಲಾಡಳಿತದ ಕಾನೂನನ್ನು ಮೀರಿ ಆತ ಮನೆಯಿಂದ ಹೊರಬಂದು ಊರಲ್ಲ ತಿರುಗಾಡಿದ ಕೊನೆಗೆ ಆತನಿಗೆ ಸೋಂಕು ಇರುವುದು ಕಂಡುಬಂದಿತ್ತು. ಹೀಗಾಗಿ ಆತನ ಗೆಳೆಯರು ಮನೆಯವರು ಮತ್ತು ಹೆಂಡತಿ ಮಗುವನ್ನು ಕೂಡ ಪರೀಕ್ಷೆಗೆ ಒಳಪಡಿಸಲಾಗಿತ್ತು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.