ಉಡುಪಿ : ವರ್ಷಪೂರ್ತಿ ಭಕ್ತರಿಂದ ತುಂಬಿಕೊಳ್ಳುತ್ತಿದ್ದ ಉಡುಪಿ ಶ್ರೀಕೃಷ್ಣ ಮಠ ಇದೀಗ ಬಿಕೋ ಅನ್ನುತ್ತಿದೆ. ಕಳೆದ ಮೂರ್ನಾಲ್ಕು ದಿನಗಳಿಂದ ಮಠಕ್ಕೆ ಬರುವ ಭಕ್ತರ ಸಂಖ್ಯೆ ಇಳಿಮುಖವಾಗಿದೆ.
ರಾಜ್ಯಾದ್ಯಂತ ಕೊರೊನಾ ವೈರಸ್ ಭೀತಿ ಇದ್ದು ಪ್ರವಾಸಿಗರು ಅದರಲ್ಲೂ ಧಾರ್ಮಿಕ ಪ್ರವಾಸಿಗರು ಮಠ ಮಂದಿರಗಳಿಂದ, ದೇವಸ್ಥಾನಗಳಿಂದ ದೂರ ಇದ್ದಾರೆ. ಮಕ್ಕಳಿಗೆ ಪರೀಕ್ಷೆ ಕೂಡಾ ಇರುವುದರಿಂದ ಮಠದ ಆಸುಪಾಸಲ್ಲಿ ಜನರೇ ಇಲ್ಲ.
ಶ್ರೀಕೃಷ್ಣನ ಮಹಾಪೂಜೆಯ ಸಂದರ್ಭ ಸರತಿ ಸಾಲಿನಲ್ಲಿ ನಿಂತು ಸಾವಿರಾರು ಭಕ್ತರು ಕಾಯುತ್ತಾರೆ. ಆದ್ರೆ ಈಗ ಬೆರಳಣಿಕೆಯ ಭಕ್ತರು ಮಾತ್ರ ಮಠದಲ್ಲಿ ಕಂಡು ಬಂದರು. ಕೃಷ್ಣ ಮಠದ ಪಾರ್ಕಿಂಗ್ ಏರಿಯಾ ವಾಹನಗಳೇ ಇಲ್ಲದೆ ಬಿಕೋ ಎನ್ನುತ್ತಿರುವ ದೃಶ್ಯಗಳು ಕಂಡು ಬಂದವು.