ETV Bharat / state

ನಕ್ಸಲ್ ‌ನಿಗ್ರಹ ಕ್ಯಾಂಪ್ ಸ್ಫೋಟಿಸುವುದಾಗಿ ಬೆದರಿಕೆ: ಕಾರ್ಕಳದಲ್ಲಿ ಪ್ರಕರಣ ದಾಖಲು - ನಕ್ಸಲ್ ಮುಖ್ಯ ಆರಕ್ಷಕ ಆನಂದ ಎಸ್‌. ಪಾಟೀಲ ನ್ಯೂಸ್​

ನಕ್ಸಲ್ ಮುಖ್ಯ ಆರಕ್ಷಕ ಆನಂದ ಎಂಬುವರು ನಕ್ಸಲ್ ‌ನಿಗ್ರಹ ಕ್ಯಾಂಪ್ ಸ್ಫೋಟಿಸುವುದಾಗಿ ಬೆದರಿಕೆ ಹಾಕಿದ ಹಿನ್ನೆಲೆ ಕಾರ್ಕಳ ‌ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ನಕ್ಸಲ್ ‌ನಿಗ್ರಹ ಕ್ಯಾಂಪ್
ನಕ್ಸಲ್ ‌ನಿಗ್ರಹ ಕ್ಯಾಂಪ್
author img

By

Published : May 17, 2020, 7:59 PM IST

ಕಾರ್ಕಳ: ನಕ್ಸಲ್ ಮುಖ್ಯ ಆರಕ್ಷಕ ಆನಂದ ಎಸ್‌. ಪಾಟೀಲ್​ ಎಂಬುವರು ನಕ್ಸಲ್ ‌ನಿಗ್ರಹ ಕ್ಯಾಂಪ್​ಅನ್ನು ಇಟ್ಟು ಸ್ಫೋಟಿಸುವುದಾಗಿ ಪಹರೆ ಸಿಬ್ಬಂದಿ ಹಾಗೂ ಅಧಿಕಾರಿಗಳಿಗೆ ಬೆದರಿಕೆವೊಡ್ಡಿದ ಪ್ರಕರಣ ಬೆಳಕಿಗೆ ಬಂದಿದೆ.

ಉಡುಪಿ ನಕ್ಸಲ್ ‌ನಿಗ್ರಹ ಕ್ಯಾಂಪ್

ನಕ್ಸಲ್ ಮುಖ್ಯ ಆರಕ್ಷಕ ಆನಂದ ಎಂಬುವರು ಅಂಜಿ ಎಂಬ ಹೆಸರಿನ ಶ್ವಾನವನ್ನು ಹಿಡಿದುಕೊಂಡು ಎ.ಎನ್.ಎಫ್‌ ಕ್ಯಾಂಪ್‌ನ ಗೇಟ್‌ನ ಎದುರು ಅಡ್ಡಲಾಗಿ ಕುಳಿತುಕೊಂಡು, ತಮ್ಮ ಬಳಿ ಇದ್ದ ಇಲಾಖೆ ಪಿಸ್ತೂಲನ್ನು ಹೊರತೆಗೆದು ಯಾವುದೋ ವಿಷಯವನ್ನು ಮನಸ್ಸಿನಲ್ಲಿ ಇಟ್ಟುಕೊಂಡು ವೈಷಮ್ಯದಿಂದ ಎ.ಎನ್.ಎಫ್​ ಕ್ಯಾಂಪ್‌ನ ಗೇಟ್‌ ಬಳಿ ಪಹರೆ ಕರ್ತವ್ಯದಲ್ಲಿದ್ದ ಸಿಬ್ಬಂದಿಯವರಿಗೆ ಬೆದರಿಗೆ ಹಾಕಿದ್ದಾರೆ. ಬಳಿಕ ಪೊಲೀಸ್‌ ನಿರೀಕ್ಷಕಾದ ಸುನಿಲ್ ಅವರು ಆರೋಪಿ ಆನಂದನನ್ನು ಸಮಾಧಾನ ಪಡಿಸಿ ಪಿಸ್ತೂಲನ್ನು ವಶಕ್ಕೆ ಪಡೆದುಕೊಂಡಿದ್ದಾರೆ.‌

ಇದಾದ ಬಳಿಕ‌ ಕುಪಿತನಾದ ಆರೋಪಿ ಎಲ್ಲಿಂದಲೋ ಸ್ಫೋಟಕ ವಸ್ತುಗಳನ್ನು ಕೈಚೀಲದಲ್ಲಿ ಅಕ್ರಮವಾಗಿ ತಂದು ಎ.ಎನ್. ಎಫ್‌ ಕ್ಯಾಂಪ್‌ನ ಮುಂಭಾಗದ ಗೇಟ್‌ ಬಳಿ ಕುಳಿತುಕೊಂಡು ಸ್ಫೋಟಕಗಳನ್ನು ಸ್ಫೋಟಿಸುತ್ತೇನೆ ಎಂಬುದಾಗಿ ಗೇಟ್‌ ಬಳಿ ಪಹರೆ ಕರ್ತವ್ಯದಲ್ಲಿದ್ದ ಸಿಬ್ಬಂದಿಗೆ ಬೆದರಿಕೆ ಹಾಕಿದ್ದಾನೆ. ಇದರಿಂದ ಕೆಲಕಾಲ ಕ್ಯಾಂಪ್‌ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಅಧಿಕಾರಿ, ಸಿಬ್ಬಂದಿಗೆ ಆತಂಕ ಉಂಟಾಗಿತ್ತು.

ಈ ಸಂಬಂಧ ಪೊಲೀಸ್‌ ನಿರೀಕ್ಷಕ ಸುನಿಲ್ ಕುಮಾರ್ ಎಂಬುವರು ನಗರ ಠಾಣೆಗೆ ದೂರು ನೀಡಿದ್ದಾರೆ.

For All Latest Updates

ETV Bharat Logo

Copyright © 2025 Ushodaya Enterprises Pvt. Ltd., All Rights Reserved.