ETV Bharat / state

ನೇಕಾರ ಮತ್ತು ಮೀನುಗಾರರ ಮಕ್ಕಳಿಗೆ ಸಿಹಿ ಸುದ್ದಿ ನೀಡಿದ್ರು ಸಿಎಂ ಬೊಮ್ಮಾಯಿ

ರೈತರ ಮಕ್ಕಳಿಗೆ ಘೋಷಿಸಿರುವ ವಿದ್ಯಾನಿಧಿ ಯೋಜನೆಯನ್ನು ನೇಕಾರರ ಮತ್ತು ಮೀನುಗಾರರ ಮಕ್ಕಳಿಗೂ ವಿಸ್ತರಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. ನಾವು ಸಮಸ್ಯೆಗಳನ್ನು ಚರ್ಚೆ ಮಾಡಿ ಗುದ್ದಾಡೋದಲ್ಲ, ಬದಲಾಗಿ ಪರಿಹಾರ ಕಲ್ಪಿಸುವ ಸಂಕಲ್ಪ ಮಾಡಬೇಕೆಂದು ಹೇಳಿದ್ದಾರೆ.

cm-bommai-announced-the-vidyanidhi-scheme-for-fisher-mens-children
ನೇಕಾರ ಮತ್ತು ಮೀನುಗಾರರ ಮಕ್ಕಳಿಗೆ ವಿದ್ಯಾನಿಧಿ ಯೋಜನೆ ವಿಸ್ತರಣೆ : ಸಿ ಎಂ
author img

By

Published : Apr 12, 2022, 7:21 AM IST

ಉಡುಪಿ: ರೈತರ ಮಕ್ಕಳಿಗೆ ಘೋಷಿಸಿರುವ ವಿದ್ಯಾನಿಧಿ ಯೋಜನೆಯನ್ನು ನೇಕಾರರ ಮತ್ತು ಮೀನುಗಾರರ ಮಕ್ಕಳಿಗೂ ವಿಸ್ತರಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. ಇಲ್ಲಿನ ಉಚ್ಚಿಲ ಮಹಾಲಕ್ಷ್ಮಿ ದೇವಸ್ಥಾನಕ್ಕೆ ಭೇಟಿ ನೀಡಿ ಸಭೆಯನ್ನು ಉದ್ದೇಶಿಸಿ ಮಾತನಾಡುವಾಗ ಸಿಎಂ ಈ ಘೋಷಣೆ ಮಾಡಿದ್ದಾರೆ. ನಾವು ಸಮಸ್ಯೆಗಳನ್ನು ಚರ್ಚೆ ಮಾಡಿ ಗುದ್ದಾಡೋದಲ್ಲ. ಬದಲಾಗಿ ಅದಕ್ಕೆ ಪರಿಹಾರ ಕೊಡುವ ಸಂಕಲ್ಪ ಮಾಡಬೇಕು ಎಂದು ಇದೇ ವೇಳೆ ಹೇಳಿದ್ದಾರೆ.

ವಿವಿಧ ಬೇಡಿಕೆಗಳ ಕುರಿತು ಮಾತನಾಡಿದ ಅವರು, ಮೂರು ಜಿಲ್ಲೆಗಳಿಗೆ ಸೇರಿ 5 ಸಾವಿರ ಮನೆಗಳನ್ನು ನೀಡುವುದಾಗಿ ಹೇಳಿದ್ದಾರೆ. ಜೊತೆಗೆ ಈ ಕರಾವಳಿ ಭಾಗದ ಎಲ್ಲಾ ಬಂದರಿನ ಡ್ರಜ್ಜಿಂಗ್ (ಹೂಳೆತ್ತುವ) ಕೆಲಸ ಮಾಡುವುದಾಗಿ ಸಿಎಂ ಭರವಸೆ ನೀಡಿದ್ದಾರೆ. ಮಹಾಲಕ್ಷ್ಮಿ ದೇವಸ್ಥಾನದ ಅಭಿವೃದ್ಧಿಗೆ ಮುಜರಾಯಿ ಇಲಾಖೆಯಿಂದ ಐದು ಕೋಟಿ ರೂಪಾಯಿ ಅನುದಾನವನ್ನು ಸಹ ಘೋಷಣೆ ಮಾಡಿದ್ದಾರೆ.

ಜೊತೆಗೆ ಮೊಗವೀರ ಮಕ್ಕಳಿಗೆ ಹಿಂದುಳಿದ ವರ್ಗಗಳ ಹಾಸ್ಟೆಲ್ ನಿರ್ಮಿಸಿಕೊಡುವುದಾಗಿ ಹೇಳಿದ್ದಾರೆ. ಮೀನುಗಾರರಿಗೆ 10 ತಿಂಗಳಿಗೆ ಎರಡು ಲಕ್ಷ ಲೀ. ಡೀಸೆಲ್ ಸಬ್ಸಿಡಿ ನೀಡುವ ಬಗ್ಗೆ ಚಿಂತನೆ ನಡೆಸಲಾಗುವುದು. ಜೊತೆಗೆ ಮಹಿಳೆಯರ ಅಭಿವೃದ್ಧಿಗೆ ಶೂನ್ಯ ಬಡ್ಡಿದರದಲ್ಲಿ ಸಾಲಸೌಲಭ್ಯ ನೀಡಲು ಬ್ಯಾಂಕ್ ಗಳ ಜೊತೆ ಮಾತುಕತೆ ನಡೆಸಿ ಯೋಜನೆ ರೂಪಿಸುವುದಾಗಿ ಸಿಎಂ ಬೊಮ್ಮಾಯಿ ಭರವಸೆ ನೀಡಿದ್ದಾರೆ.

ಮೊಗವೀರ ಸಮುದಾಯದವರು ಶ್ರಮ ಜೀವಿಗಳು. ಇಲ್ಲಿನ ಮೀನುಗಾರರಿಗೆ ನನ್ನ ಮನೆ ಮತ್ತು ಮನಸ್ಸಿನ ಬಾಗಿಲು ಸದಾ ತರೆದಿರುತ್ತದೆ. ನಾನು ಮೊಗವೀರ ಸಮುದಾಯದ ಜೊತೆ ಇದ್ದೇನೆ ಎಂದು ಉಡುಪಿಯ ಉಚ್ಚಿಲದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅಭಯ ನೀಡಿದ್ದಾರೆ.

ಓದಿ : ಅವ್ರರವ್ರ ರಕ್ಷಣೆ ಅವ್ರು ಮಾಡ್ಕೊಳ್ಳಲು ಎಲ್ರೂ ಸ್ವತಂತ್ರರು.. ನಾವ್‌ ಮಾತ್ನಾಡಬಾರ್ದು, ನಮ್‌ ಕೆಲ್ಸಾ ಮಾತ್ನಾಡ್ಬೇಕು : ಸಿಎಂ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.