ETV Bharat / state

ವ್ಯಾಕ್ಸಿನ್ ಕೊರತೆ ನಿರ್ಮಾಣವಾಗಲು ಕಾಂಗ್ರೆಸ್ಸೇ ಕಾರಣ: ಬಿಜೆಪಿ ಮುಖ್ಯ ಸಚೇತಕ - sunil kumar on toolkit issue

ಯಾವುದೋ ನದಿಯಲ್ಲಿ ತೇಲುತ್ತಿದ್ದ ಶವಗಳನ್ನು ಭಾರತದ್ದೆಂದು ಬಿಂಬಿಸಿದರು. ಇದು ಕಾಂಗ್ರೆಸ್​ನ ನೀಚ ಪ್ರವೃತ್ತಿ ಎಂದು ಬಿಜೆಪಿ ಮುಖ್ಯ ಸಚೇತಕ ಸುನೀಲ್ ಕುಮಾರ್​ ಹೇಳಿದ್ದಾರೆ.

bjp-leader sunil kumar-on-toolkit-case
ವ್ಯಾಕ್ಸಿನ್ ಕೊರತೆ ನಿರ್ಮಾಣವಾಗಲು ಕಾಂಗ್ರೆಸ್ಸೇ ಕಾರಣ: ಬಿಜೆಪಿ ಮುಖ್ಯ ಸಚೇತಕ
author img

By

Published : May 21, 2021, 1:48 AM IST

ಉಡುಪಿ: ಕೋವಿಡ್ ಸಂಕಟ ಕಾಲದಲ್ಲಿ ಕಾಂಗ್ರೆಸ್​ನ ಟೂಲ್ ಕಿಟ್ ವಿವಾದ ಹೊರಬಿದ್ದಿದೆ. ಸಂಕಷ್ಟ ಕಾಲದಲ್ಲಿ ಇದು ನಾಚಿಕೆಗೇಡಿನ ವಿಚಾರ. ದೇಶದ ಜನರಿಗೆ ಕಾಂಗ್ರೆಸ್ ಉತ್ತರ ಕೊಡಬೇಕಾಗಿದೆ. ಟೂಲ್ ಕಿಟ್ ಬಹಿರಂಗವಾದ ನಂತರ ಕಾಂಗ್ರೆಸ್ ನ ಉದ್ದೇಶವೇನು ಅನ್ನೋದು ಜನರಿಗೆ ಗೊತ್ತಾಗಿದೆ ಎಂದು ಬಿಜೆಪಿ ಶಾಸಕ ಸುನೀಲ್ ಕುಮಾರ್ ಆಕ್ರೋಶ ವ್ಯಕ್ತಪಡಿಸಿದರು.

ಬಿಜೆಪಿ ಮುಖ್ಯ ಸಚೇತಕ ಸುನೀಲ್ ಕುಮಾರ್

ಕಾಂಗ್ರೆಸ್ ಪಕ್ಷ ನಿರಂತರ ಅಪಪ್ರಚಾರದಲ್ಲಿ ತೊಡಗಿದೆ. ವಿರೋಧಪಕ್ಷವಾಗಿ ಸರ್ಕಾರದ ಜೊತೆಗೆ ನಿಲ್ಲಬೇಕಾಗಿತ್ತು ಎಂದಿರುವ ಸುನೀಲ್ ಕುಮಾರ್​ ಈಗ ವ್ಯಾಕ್ಸಿನ್ ಕೊರತೆ ನಿರ್ಮಾಣವಾಗಲು ಕಾಂಗ್ರೆಸ್ಸೇ ಕಾರಣ. ಜನರನ್ನು ತಪ್ಪುದಾರಿಗೆ ಎಳೆದು, ಕಾಂಗ್ರೆಸ್ ನಾಯಕರು ತಾವು ವ್ಯಾಕ್ಸಿನ್ ತೆಗೆದುಕೊಂಡರು ಎಂದು ಆರೋಪಿಸಿದ್ದಾರೆ.

ಇದನ್ನೂ ಓದಿ: ಭಯಂಕರ ವಾಮಾಚಾರಕ್ಕೆ ಬೆಚ್ಚಿ ಬಿದ್ದ ಬೇಲೂರು ತಾಲೂಕಿನ ಜನತೆ..!

ತಮ್ಮ ಆರೋಗ್ಯ ಕಾಪಾಡಿಕೊಂಡು ಜನರ ಆರೋಗ್ಯವನ್ನು ಕಾಂಗ್ರೆಸ್ಸಿಗರು ಹಾಳು ಮಾಡಿದರು. ಯಾವುದೋ ನದಿಯಲ್ಲಿ ತೇಲುತ್ತಿದ್ದ ಶವಗಳನ್ನು ಭಾರತದ್ದೆಂದು ಬಿಂಬಿಸಿದರು. ಇದು ಕಾಂಗ್ರೆಸ್​ನ ನೀಚ ಪ್ರವೃತ್ತಿ ಎಂದು ಬಿಜೆಪಿ ಮುಖ್ಯ ಸಚೇತಕ ಹೇಳಿದ್ದಾರೆ.

ಸಾಮಾಜಿಕ ಜವಾಬ್ದಾರಿಯನ್ನು ಕಾಂಗ್ರೆಸ್ ತೋರಿಲ್ಲ‌

ಕಾಂಗ್ರೆಸ್ ಅಂತರಾಷ್ಟ್ರೀಯ ಮಟ್ಟದಲ್ಲಿ ಭಾರತದ ಗೌರವವನ್ನು ಹಾಳು ಮಾಡಿದೆ. ಬೆಂಗಳೂರು ಬೆಡ್ ಬ್ಲಾಕಿಂಗ್ ದಂಧೆ ಕೂಡಾ ಟೂಲ್ ಕಿಟ್​ನ ಒಂದು ಭಾಗ. ಜನರು ಕೊರೊನಾದಿಂದ ಹೊರಬರುವುದು ಕಾಂಗ್ರೆಸ್ ಗೆ ಬೇಕಾಗಿಲ್ಲ. ಆ ಪಕ್ಷಕ್ಕೆ ಸಾಮಾಜಿಕ ಜವಾಬ್ದಾರಿ ಇಲ್ಲ ಎಂದು ಸುನೀಲ್ ಕುಮಾರ್ ಆರೋಪಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.