ETV Bharat / state

ಕೃಷ್ಣಾಪುರ ಪರ್ಯಾಯ: ಪೂರ್ವಭಾವಿಯಾಗಿ ಬಾಳೆ ಮುಹೂರ್ತ - ಉಡುಪಿಯಲ್ಲಿ 2022ರ ಕೃಷ್ಣಾಪುರ ಪರ್ಯಾಯಕ್ಕೆ ಬಾಳೆ ಮುಹೂರ್ತ

2022 ರಿಂದ ಕೃಷ್ಣಾಪುರ ಮಠದ ಪರ್ಯಾಯ ಆರಂಭವಾಗಲಿದ್ದು, ಈ ಮಹೋತ್ಸವಕ್ಕೆ ಪೂರ್ವಭಾವಿಯಾಗಿ ಮಠದಲ್ಲಿ ಸಾಂಪ್ರದಾಯಿಕ ಬಾಳೆ ಮುಹೂರ್ತ ನೆರವೇರಿಸಲಾಯಿತು.

Bale Muhurta for Krishnapur matt paryaya
2022ರ ಕೃಷ್ಣಾಪುರ ಪರ್ಯಾಯದ ಪೂರ್ವಭಾವಿಯಾಗಿ ಬಾಳೆ ಮುಹೂರ್ತ
author img

By

Published : Dec 1, 2020, 11:25 AM IST

ಉಡುಪಿ: ಕೃಷ್ಣಮಠದಲ್ಲಿ ಸದ್ಯ ಅದಮಾರು ಸ್ವಾಮೀಜಿಗಳ ಪರ್ಯಾಯ ಮಹೋತ್ಸವ ನಡೆಯುತ್ತಿದೆ. 2022 ಜನವರಿಯಲ್ಲಿ ನಡೆಯುವ ಕೃಷ್ಣಾಪುರ ಪರ್ಯಾಯಕ್ಕೆ ಸೋಮವಾರ ಬಾಳೆ ಮುಹೂರ್ತ ನಡೆಯಿತು. ಸಂಪ್ರದಾಯಕ್ಕೆ ಒತ್ತು ನೀಡುವ ಕೃಷ್ಣಾಪುರ ಮಠದ ಬಾಳೆ ಮುಹೂರ್ತ ಸಾಂಪ್ರದಾಯಿಕವಾಗಿ ಸಂಪನ್ನಗೊಂಡಿತು.

2022ರ ಕೃಷ್ಣಾಪುರ ಪರ್ಯಾಯದ ಪೂರ್ವಭಾವಿಯಾಗಿ ಬಾಳೆ ಮುಹೂರ್ತ

ಸಕಾಲದಲ್ಲಿ ಅಧಿಕಾರ ಹಸ್ತಾಂತರ:

800 ವರ್ಷಗಳಿಂದ ಈ ಪರ್ಯಾಯ ಮಹೋತ್ಸವ ನಡೆಸಿಕೊಂಡು ಬರುತ್ತಿದ್ದು, ಈವರೆಗೂ ಯಾವೊಬ್ಬರು ಯತಿಯೂ ಅಧಿಕಾರ ಬಿಟ್ಟು ಕೊಡುವುದಿಲ್ಲ ಎಂದು ಬಂಡಾಯವೆದ್ದಿಲ್ಲ. ನಿಯಮಿತ ಕಾಲಕ್ಕೆ ಸರಿಯಾಗಿ ಕೃಷ್ಣಮಠದ ಆಡಳಿತ, ಅಷ್ಟಮಠಗಳ ನಡುವೆ ಹಸ್ತಾಂತರವಾಗುತ್ತಿದೆ. ಪರ್ಯಾಯ ಮಹೋತ್ಸವ ಎಂದು ಕರೆಯಲಾಗುವ ಈ ಆಡಳಿತ ಹಸ್ತಾಂತರ ಒಂದು ಸಾಂಪ್ರದಾಯಿಕ ಮಾದರಿ ಆಚರಣೆ.

2022 ರಿಂದ ಕೃಷ್ಣಾಪುರ ಮಠದ ಪರ್ಯಾಯ ಆರಂಭವಾಗಲಿದ್ದು, ಒಂದು ವರ್ಷ ಮುಂಚಿತವಾಗಿ ಈ ಮಹೋತ್ಸವಕ್ಕೆ ಪೂರಕವಾಗಿ ಬಾಳೆ ಮುಹೂರ್ತ ನಡೆಸಲಾಯಿತು. ಕೃಷ್ಣಾಪುರ ಮಠದ ವಿದ್ಯಾಸಾಗರ ತೀರ್ಥರು 16 ವರ್ಷಗಳ ನಂತರ ಸರ್ವಜ್ಞ ಪೀಠಾರೋಹಣ ಮಾಡಲಿದ್ದು, ಮುಂದಿನ ಒಂದು ವರ್ಷ ದೇಶದ ನಾನಾ ತೀರ್ಥಕ್ಷೇತ್ರಗಳನ್ನು ಅವರು ಸಂದರ್ಶಿಸಲಿದ್ದಾರೆ.

ಬಾಳೆ ಮುಹೂರ್ತದ ಮಹತ್ವ:

ಉಡುಪಿಯ ಕೃಷ್ಣನನ್ನು ಅನ್ನಬ್ರಹ್ಮ ಎಂದು ಕರೆಯುತ್ತಾರೆ. ಇಲ್ಲಿ ದಿನವೂ ನಡೆಯುವ ಅನ್ನ ದಾಸೋಹಕ್ಕೆ ವಿಶೇಷ ಮಹತ್ವವಿದೆ. ಬಾಳೆಯ ಗಿಡಗಳನ್ನು ನೆಟ್ಟು ಮುಂದಿನ ವರ್ಷಕ್ಕೆ ಬೇಕಾದ ಬಾಳೆ ಎಲೆಗಳನ್ನು ಸಂಗ್ರಹಿಸುವುದು ಬಾಳೆ ಮುಹೂರ್ತದ ಉದ್ದೇಶ. ಕೃಷ್ಣಾಪುರ ಮಠದಲ್ಲಿ ಪೂಜೆ ಮಾಡಿ, ರಥಬೀದಿಯಲ್ಲಿರುವ ಅನಂತೇಶ್ವರ, ಚಂದ್ರೇಶ್ವರ ದೇವಸ್ಥಾನ ಸಂದರ್ಶಿಸಿ, ಕೃಷ್ಣ ದೇವರಿಗೂ ಪೂಜೆ ಸಲ್ಲಿಸಲಾಗುತ್ತೆ. ಬಳಿಕ ಮೆರವಣಿಗೆಯಲ್ಲಿ ತೆರಳಿ ಬಾಳೆಯ ಗಿಡಗಳನ್ನು ನೆಡುವುದು ಸಂಪ್ರದಾಯ.

ಊಟೋಪಚಾರಕ್ಕೆ ಬೇಕಾದ ಅಕ್ಕಿ ಸಂಗ್ರಹಕ್ಕೆ ಅಕ್ಕಿ ಮುಹೂರ್ತ, ಧಾನ್ಯ ಸಂಗ್ರಹಕ್ಕೆ ಧಾನ್ಯ ಮುಹೂರ್ತ, ಕಟ್ಟಿಗೆ ಸಂಗ್ರಹಕ್ಕೆ ಕಟ್ಟಿಗೆ ಮುಹೂರ್ತ ಮುಂದಿನ ದಿನಗಳಲ್ಲಿ ನಡೆಯಲಿದೆ. 2022 ಜನವರಿಯಲ್ಲಿ ಅದಮಾರು ಸ್ವಾಮೀಜಿ ಕೃಷ್ಣಾಪುರ ಶ್ರೀಗಳಿಗೆ ಅಧಿಕಾರ ಹಸ್ತಾಂತರಿಸಲಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.