ಉಡುಪಿ: ಬಾಬಾ ರಾಮದೇವ್ ಅವರು ನಡೆಸುತ್ತಿರುವ ಯೋಗ ಶಿಬಿರ ಎರಡನೇ ದಿನಕ್ಕೆ ಕಾಲಿಟ್ಟಿದ್ದು, ಇಂದು ಸೂರ್ಯೋದಯಕ್ಕೂ ಮುನ್ನ ನಡೆದ ಶಿಬಿರದಲ್ಲಿ ಹಿರಿಯ ಯತಿಗಳಾದ ಪೇಜಾವರ ಮಠದ ವಿಶ್ವೇಶ ತೀರ್ಥರು ಭಾಗವಹಿಸಿದ್ದರು.
ರಾಮ್ ದೇವ್ ಅವರು ನಡೆಸಿದ ಪ್ರತಿ ಕಠಿಣ ಯೋಗಾಸನಗಳನ್ನೂ ತದೇಕಚಿತ್ತದಿಂದ ಗಮನಿಸಿ ಖುಷಿಪಟ್ಟರು. ಯೋಗದ ಮುಖಾಂತರ ಮನಸ್ಸಿನ ಶುದ್ದಿಯಾಗುತ್ತೆ. ದೇವರ ಬಗ್ಗೆ ಏಕಾಗ್ರತೆ ಮೂಡಲು ಯೋಗ ಸಹಾಯಕ. ದೇಶಕ್ಕೆ ರಾಮಮಂದಿರ ದೊರಕುವ ಸಂಧರ್ಭದಲ್ಲೇ ರಾಮದೇವ್ ಅವರು ಕೃಷ್ಣನ ಕ್ಷೇತ್ರಕ್ಕೆ ಬಂದಿದ್ದಾರೆ. ರಾಷ್ಟ್ರಕ್ಕೆ ಅವರ ವಿಶೇಷ ಸೇವೆ ನಿರಂತರ ದೊರಕಲಿ ಎಂದರು.
ಇನ್ನು, ಮೂರು ದಿನಗಳ ಕಾಲ ಉಡುಪಿಯಲ್ಲಿ ರಾಮ್ ದೇವ್ ಅವರ ಯೋಗಶಿಬಿರ ನಡೆಯಲಿದ್ದು, ಸಂತ ಸಮಾವೇಶ ಹಾಗೂ ಮಹಿಳೆಯರ ಸಮಾವೇಶವೂ ಆಯೋಜನೆಯಾಗಿದೆ.