ಉಡುಪಿ: ಜಿಲ್ಲೆಯ ಕೃಷ್ಣಮಠದಲ್ಲಿ ಅದಮಾರು ಮಠದ ಪರ್ಯಾಯ ಮಹೋತ್ಸವದ ತಯಾರಿಗಳು ಅಂತಿಮ ಘಟ್ಟ ತಲುಪಿದೆ. ಪರ್ಯಾಯಕ್ಕೂ ಮುನ್ನ ಜಿಲ್ಲೆ ಹಾಗೂ ಹೊರ ಜಿಲ್ಲೆಗಳಿಂದ ಆಹಾರ ವಸ್ತುಗಳನ್ನು ಹೊರೆ ಕಾಣಿಕೆಯಾಗಿ ಅರ್ಪಿಸುವುದು ಪದ್ದತಿಯಾಗಿದ್ದು, ದೇಣಿಗೆಗಳು ಹರಿದು ಬರುತ್ತಿವೆ.
ಹೊರೆ ಕಾಣಿಕೆ ಸ್ವೀಕೃತಿ ಪದ್ಧತಿಯಲ್ಲಿ ಈ ಬಾರಿ ಕೊಂಚ ಬದಲಾವಣೆಗಳನ್ನು ಮಾಡಿಕೊಳ್ಳಲಾಗಿದೆ. ಕೇವಲ ಒಂದು ದಿನದ ಹೊರೆಕಾಣಿಕೆಗೆ ವ್ಯವಸ್ಥೆ ಮಾಡಲಾಗಿದ್ದು, ಉಳಿದಂತೆ ಪ್ರತೀ ಹದಿನೈದು ದಿನಕ್ಕೊಮ್ಮೆ ಭಕ್ತರಿಂದ ಹೊರೆಕಾಣಿಕೆ ಸ್ವೀಕರಿಸಲು ಅದಮಾರು ಮಠ ನಿರ್ಧರಿಸಿದೆ. ಈ ಹಿನ್ನಲೆ ಇಂದು ಅದಮಾರು ಮೂಲ ಗ್ರಾಮ, ಮಲ್ಪೆ ಮೀನುಗಾರರು ಹಾಗೂ ಮಟ್ಟು ಗ್ರಾಮದಿಂದ ಮಾತ್ರ ಹೊರೆ ಕಾಣಿಕೆ ಸಮರ್ಪಿಸಲಾಯ್ತು.
ದೇಣಿಗೆಯಲ್ಲಿ ಸುಮಾರು 20 ಟನ್ ಅಕ್ಕಿ, ಹತ್ತು ಸಾವಿರಕ್ಕೂ ಅಧಿಕ ತೆಂಗಿನಕಾಯಿ ಹಾಗೂ ಮಟ್ಟುಗುಳ್ಳವನ್ನು ಕಾಣಿಕೆಯಾಗಿ ಕೃಷ್ಣಮಠಕ್ಕೆ ಸಮರ್ಪಿಸಲಾಯ್ತು. ಜೋಡುಕಟ್ಟೆಯಿಂದ ಅದ್ದೂರಿ ಮೆರವಣಿಗೆಯಲ್ಲಿ ಆಹಾರವಸ್ತುಗಳನ್ನು ಕೊಂಡೊಯ್ಯಲಾಯ್ತು.