ಉಡುಪಿ: ಅಯೋಧ್ಯೆ ರಾಮ ಮಂದಿರ ನಿರ್ಮಾಣಕ್ಕೆ ಎಲ್ಲೆಡೆ ನಿಧಿ ಸಮರ್ಪಣಾ ಅಭಿಯಾನ ನಡೆಯುತ್ತಿದೆ. ತಮಿಳುನಾಡಿನ ಕಂಚಿ ಕಾಮಕೋಟಿ ಪೀಠದಲ್ಲಿ ನಡೆದ ಅಭಿಯಾನದಲ್ಲಿ 6 ಕೋಟಿ ರೂ. ನಿಧಿ ಸಮರ್ಪಿಸಲಾಯಿತು.
ಕಂಚಿ ಪೀಠಾಧೀಶ ಶ್ರೀವಿಜಯೇಂದ್ರ ಸರಸ್ವತಿ ಸ್ವಾಮೀಜಿ ಅವರು ಸಂಗ್ರಹವಾದ ನಿಧಿಯನ್ನು ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ನ ಕೋಶಾಧಿಕಾರಿ ಗೋವಿಂದ ದೇವ್ ಗಿರಿ ಮಹಾರಾಜ್ ಹಾಗೂ ಟ್ರಸ್ಟ್‌ನ ವಿಶ್ವಸ್ಥರಾದ ಪೇಜಾವರ ಮಠಾಧೀಶ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಅವರಿಗೆ ಹಸ್ತಾಂತರಿಸಿದರು. ಕಂಚಿ ಮಠದ ಭಕ್ತ ಹಾಗೂ ಉದ್ಯಮಿ ಮೋಹನ್ ಮಂದಿರ ನಿರ್ಮಾಣಕ್ಕೆ 5 ಕೋಟಿ ರೂ. ನಿಧಿ ಸಮರ್ಪಿಸಿದರು. ಅಲ್ಲದೇ ಕಂಚಿ ಮಠದಿಂದ ಹಾಗೂ ಭಕ್ತರಿಂದ ಒಂದು ಕೋಟಿ ರೂ. ಸಂಗ್ರಹವಾಗಿದೆ.
ಓದಿ: ರಾಮಮಂದಿರ ನಿಧಿ ಸಮರ್ಪಣಾ ಅಭಿಯಾನ: ಪ್ರಹ್ಲಾದ್ ಜೋಶಿ ಭಾಗಿ!
ರಾಮ ಮಂದಿರ ನಿರ್ಮಾಣದ ಯಶಸ್ಸಿಗಾಗಿ ಕಂಚಿ ಮಠದಲ್ಲಿ ರಾಮ ತಾರಕ ಜಪ, ಹೋಮ, ಪಾರಾಯಣ ನಡೆಯಿತು. ಕಾರ್ಯಕ್ರಮದಲ್ಲಿ ತಮಿಳುನಾಡು ರಾಜ್ಯಪಾಲ ಬನ್ವಾರಿಲಾಲ್ ಪುರೋಹಿತ್ ಉಪಸ್ಥಿತರಿದ್ದರು.